ನವದೆಹಲಿ:ಕರೊನಾ ನಿಯಂತ್ರಣಕ್ಕಾಗಿ ನೀಡಲಾಗುವ ‘ಮುನ್ನೆಚ್ಚರಿಕೆ’ (ಬೂಸ್ಟರ್) ಡೋಸ್​ಗೆ ಬೇರೆ ಯಾವುದೇ ಹೊಸ ಲಸಿಕೆಯ ಬದಲು ಹಿಂದಿನ ಲಸಿಕೆಗಳನ್ನೇ ಬಳಸುವ ಸಂಭವ ಇದೆ. ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಲಸಿಕೆ ಪಡೆದ ಫಲಾನುಭವಿಗಳು ಬೂಸ್ಟರ್ ಡೋಸ್ ಆಗಿಯೂ ಅವುಗಳನ್ನೇ ಪಡೆಯಲಿದ್ದಾರೆ ಎಂದು ಸರ್ಕಾರದ ಅಧಿಕೃತ ಮೂಲಗಳು ಹೇಳಿವೆ. ಲಸಿಕೆಗಳ ಮಿಶ್ರಣದ ಸಾಧ್ಯತೆ ಬಗ್ಗೆ ಕ್ಲಿನಿಕಲ್ ಪರೀಕ್ಷೆಯ ಫಲಿತಾಂಶದ ನಂತರವಷ್ಟೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿವೆ.
ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಹಾಗೂ ಅನ್ಯವ್ಯಾಧಿ ಗಳುಳ್ಳ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಜನವರಿ 10ರಿಂದ ಬೂಸ್ಟರ್ ಡೋಸ್ ನೀಡಲಾಗುವುದು. ಎರಡನೇ ಡೋಸ್ ಪಡೆದ ಒಂಬತ್ತು ತಿಂಗಳ ನಂತರ 3ನೇ ಡೋಸ್ ಪಡೆಯಬೇಕು ಎಂದು ಹೊಸ ಮಾರ್ಗಸೂಚಿಯಲ್ಲಿ ಕೇಂದ್ರ ತಿಳಿಸಿದೆ.
578 ಒಮಿಕ್ರಾನ್ ಕೇಸ್:ಸೋಮವಾರ ಒಮಿಕ್ರಾನ್ ರೂಪಾಂತರಿಯ 156 ಪ್ರಕರಣಗಳು ದಾಖಲಾಗಿದ್ದು ದೇಶದಲ್ಲಿ ಹೊಸ ಪ್ರಭೇದದ ಕೇಸ್ ಸಂಖ್ಯೆ 578ಕ್ಕೆ ಏರಿದೆ. ಬ್ರಿಟನ್​ನಿಂದ ಮರಳಿದ್ದ 8 ವರ್ಷದ ಬಾಲಕನಲ್ಲಿ ಒಮಿಕ್ರಾನ್ ವೈರಸ್ ಸೋಂಕಿರುವುದು ದೃಢ ಪಟ್ಟಿದ್ದು ಇದು ಗೋವಾದ ಮೊದಲ ಒಮಿಕ್ರಾನ್ ಪ್ರಕರಣವಾಗಿದೆ. ಮಣಿಪುರದಲ್ಲೂ ಒಂದು ಒಮಿಕ್ರಾನ್ ಪ್ರಕರಣ ದೃಢಪಟ್ಟಿದ್ದು, ತಾಂಜೇನಿಯಾದಿಂದ ವ್ಯಕ್ತಿಯಲ್ಲಿ ಇದು ಕಾಣಿಸಿದೆ. ಈ ಮೂಲಕ ಈಶಾನ್ಯ ರಾಜ್ಯಕ್ಕೂ ಹೊಸಪ್ರಭೇದ ತಲುಪಿದೆ.
ಹೃದಯ ನಾಳಕ್ಕೆ ಹಾನಿ:ಕೋವಿಡ್-19 ರೋಗ ಹೃದಯ ನಾಳ ವ್ಯವಸ್ಥೆಗೆ ಹಾನಿ ಮಾಡಲಿದೆ ಎಂದು ಎಕ್ಸ್​ರೇ ಚಿತ್ರವೊಂದರಿಂದ ತಿಳಿದು ಬಂದಿದೆ. ಗೊಟೆನ್​ಜೆನ್ ಯುನಿವರ್ಸಿಟಿ ಮತ್ತು ಹ್ಯಾನೋವರ್ ಮೆಡಿಕಲ್ ಸ್ಕೂಲ್ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ.
ಒಮಿಕ್ರಾನ್​ಗೆ ಸಿನೊವ್ಯಾಕ್ಸ್ ರಕ್ಷಣೆ ನೀಡದು:ಕರೊನಾವ್ಯಾಕ್ ಎಂದೂ ಹೆಸರಿಸಲಾಗಿರುವ ಸಿನೊವ್ಯಾಕ್ ಲಸಿಕೆಯ ಮೂರನೇ ಡೋಸ್ ಒಮಿಕ್ರಾನ್ ಸೋಂಕಿನ ವಿರುದ್ಧ ರಕ್ಷಣೆ ನೀಡುವುದಿಲ್ಲ ಎಂದು ಹೊಸ ಅಧ್ಯಯನವೊಂದು ಅಭಿಪ್ರಾಯ ಪಟ್ಟಿದೆ. ತನ್ನ ಲಸಿಕೆಯ ಬೂಸ್ಟರ್ ಡೋಸ್ ಒಮಿಕ್ರಾನ್ ರೂಪಾಂತರಿ ವಿರುದ್ಧ ಪರಿಣಾಮಕಾರಿ ಎಂದು ಅದನ್ನು ಅಭಿವೃದ್ಧಿಪಡಿಸಿರುವ ಫೈಜರ್ ಮತ್ತು ಬಯೋಎನ್​ಟೆಕ್ ಕಂಪನಿಗಳು ಕಳೆದ ವಾರ ಹೇಳಿದ್ದವು.
ಬಳಕೆ ಅವಧಿ ವಿಸ್ತರಣೆ:ಝೈಕೋವ್-ಡಿ ಲಸಿಕೆಯ ಬಳಕೆಯ ಗಡುವನ್ನು (ಎಕ್ಸ್​ಪೈರಿ ಡೇಟ್) ಸರ್ಕಾರ ಶೀಘ್ರವೇ ಮೂರು ತಿಂಗಳು ವಿಸ್ತರಿಸುವ ಸಾಧ್ಯತೆಯಿದೆ. ಝೈಡುಸ್ ಕ್ಯಾಡಿಲಾ ಕಂಪನಿಯ ಈ ಲಸಿಕೆಯನ್ನು ದೇಶದ ಲಸಿಕೆ ಅಭಿಯಾನದಲ್ಲಿ ಇನ್ನೂ ಬಳಸಲಾಗುತ್ತಿಲ್ಲ. ಜಗತ್ತಿನ ಪ್ರಥಮ ಡಿಎನ್​ಎ ವ್ಯಾಕ್ಸಿನ್ ಎಂದು ಹೇಳಲಾಗಿರುವ ಝೈಕೋವ್-ಡಿಯನ್ನು 15-18 ವಯಸ್ಸಿನ ಮಕ್ಕಳಿಗೆ ನೀಡುವ ನಿರೀಕ್ಷೆಯಿದೆ. ಕೊವ್ಯಾಕ್ಸಿನ್ ಮಕ್ಕಳಿಗೆ ಕೊಡಲಾಗುವ ಇನ್ನೊಂದು ವ್ಯಾಕ್ಸಿನ್ ಆಗಿದೆ.
ಆಯ್ದ ವಿಭಾಗಗಳಿಗೆ ನೀಡಲಾಗುವ ಲಸಿಕೆಯ 3ನೇ ಡೋಸ್​ಅನ್ನು ‘ಮುನ್ನೆಚ್ಚರಿಕೆ ಡೋಸ್’ ಎಂದೇ ಕರೆಯ ಲಾಗುತ್ತದೆ. ಅದು ಬೂಸ್ಟರ್ ಡೋಸ್ ಅಲ್ಲ.
|ಆರ್.ಎಸ್. ಶರ್ಮಾಕೋವಿನ್ ಮುಖ್ಯಸ್ಥ
ಒಮಿಕ್ರಾನ್ ರೂಪಾಂತರಿಯು ಜಗತ್ತಿನಲ್ಲಿ ವೇಗವಾಗಿ ಹರಡಿದಂತೆ ಕೋವಿಡ್ ಪ್ರಕರಣಗಳೂ ಏರಿಕೆಯಾಗುವ ಅಪಾಯವಿದೆ.
|ಅಂತೋಣಿ ಫೌಸಿಅಮೆರಿಕದ ಸೋಂಕು ರೋಗಗಳ ತಜ್ಞ
ಮಕ್ಕಳಿಗೆ ಕೊವ್ಯಾಕ್ಸಿನ್:15-18 ವಯಸ್ಸಿನ ಮಕ್ಕಳಿಗೆ ಸದ್ಯ ಕೊವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ನೀಡಲಾಗುವುದು. ಮಕ್ಕಳು ಜನವರಿ 1ರಿಂದ ನೋಂದಾಯಿಸಿ ಕೊಳ್ಳಬಹುದಾಗಿದೆ. ಮಕ್ಕಳ ನೋಂದಣಿಗಾಗಿ ಹೆಚ್ಚುವರಿಯಾಗಿ ವಿದ್ಯಾರ್ಥಿ ಗುರುತಿನ ಕಾರ್ಡ್ ಸೇರ್ಪಡೆ ಮಾಡಲಾಗಿದೆ. ಆಧಾರ್ ಅಥವಾ ಬೇರೆ ಯಾವುದೇ ಗುರುತು ಚೀಟಿ ಇಲ್ಲದ ಮಕ್ಕಳ ಅನುಕೂಲಕ್ಕಾಗಿ ಇದನ್ನು ಪರಿಚಯಿಸಲಾಗಿದೆ. ಬೂಸ್ಟರ್ ಡೋಸ್ ಪಡೆಯಲು 60 ವರ್ಷ ಮೇಲ್ಪಟ್ಟವರು ಕೋವಿನ್ ಆಪ್​ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಅದರ ಮುಖ್ಯಸ್ಥ ಆರ್.ಎಸ್. ಶರ್ಮಾ ಸೋಮವಾರ ತಿಳಿಸಿದ್ದಾರೆ. ನೋಂದಣಿ ಮಾಡದೆಯೇ ಮಕ್ಕಳು ನೇರವಾಗಿ ಲಸಿಕೆ ಕೇಂದ್ರಗಳಿಗೆ ಹೋಗಿ ವ್ಯಾಕ್ಸಿನ್ ಪಡೆಯಲೂ ಅವಕಾಶವಿದೆ. 60 ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್​ಗೆ ನೋಂದಾಯಿಸಿಕೊಳ್ಳುವ ಸಂದರ್ಭದಲ್ಲಿ ಅನ್ಯವ್ಯಾಧಿಗಳಿವೆಯೇ ಎಂಬ ಆಯ್ಕೆ ತೆರೆದುಕೊಳ್ಳುತ್ತದೆ. ಅದಕ್ಕೆ ಹೌದು ಎಂದು ಉತ್ತರಿಸಿದರೆ ಆಗ ನೋಂದಣಿ ಆಗುತ್ತದೆ ಎಂದು ಶರ್ಮಾ ವಿವರಿಸಿದ್ದಾರೆ.
ಸಾರ್ವಜನಿಕ ಹಿತದಿಂದ ಪ್ರಧಾನಿ ಚಿತ್ರ:ಕರೊನಾ ಲಸಿಕೆ ಭಾವಚಿತ್ರದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವನ್ನು ಮುದ್ರಿಸಲಾಗುತ್ತಿದೆ ಎಂದು ಮುಂಬೈಯ ಸಾಮಾಜಿಕ ಕಾರ್ಯಕರ್ತ ಅನಿಲ್ ಗಲಗಲಿ ಸಲ್ಲಿಸಿದ್ದ ಆರ್​ಟಿಐ ಅರ್ಜಿಗೆ ಉತ್ತರಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
– ಒಮಿಕ್ರಾನ್ ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಇರುವ ನಿರ್ಬಂಧವನ್ನು ಜನವರಿ 31ರವರೆಗೆ ಸರ್ಕಾರ ವಿಸ್ತರಿಸಿದೆ.
ಅಗತ್ಯ ವೈದ್ಯಕೀಯ ವ್ಯವಸ್ಥೆಗೆ ಸೂಚನೆ:ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಂಡಲ- ಮಕರವಿಳಕ್ಕು ಯಾತ್ರೆ ವೇಳೆ ಯಾತ್ರಿ ಗಳಿಗೆ ಕರೊನಾ ಹಿನ್ನೆಲೆಯಲ್ಲಿ ಅಗತ್ಯ ವೈದ್ಯಕೀಯ ಸೌಕರ್ಯ ವ್ಯವಸ್ಥೆ ಮಾಡುವಂತೆ ಕೇರಳ ಹೈ ಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕೊನೆಗೂ ಹೊರಬಿತ್ತು ಪುನೀತ್ ರಾಜಕುಮಾರ್ ಡೈರಿಯಲ್ಲಿದ್ದ ಆ ನಿರ್ಮಾಪಕರ ಹೆಸರು!
25 ಸಾವಿರಕ್ಕೂ ಅಧಿಕ ಮಾತ್ರೆ ತಿಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಗುಂಡು ಹೊಡೆದುಕೊಂಡು ಬಿಇಒ ಆತ್ಮಹತ್ಯೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − nine =
Remember me
