ನವದೆಹಲಿ:ಕೇಂದ್ರದಿಂದ ವಿವಿಧ ವಿಚಾರಗಳಲ್ಲಿ ಸಹಕಾರ ಸಿಗುತ್ತಿಲ್ಲ, “ಡಬಲ್​ ಇಂಜಿನ್​’ ಕೆಲಸ ಮಾಡುತ್ತಿಲ್ಲ ಎಂಬ ಟೀಕೆಗೆ ಪೂರಕವಾಗಿ ಮತ್ತೊಂದು ಹಸಿಬಿಸಿ ಉದಾಹರಣೆ ಎದುರಾಗಿದೆ. ಕೇಂದ್ರ ಸರ್ಕಾರ 17 ರಾಜ್ಯಗಳಿಗೆ ಆದಾಯ ಕೊರತೆ ಅನುದಾನ ಬಿಡುಗಡೆ ಮಾಡಿದ್ದು, ಕರ್ನಾಟಕವನ್ನು ಕಡೆಗಣಿಸಿದೆ.
ಕರ್ನಾಟಕದಿಂದಲೇ ರಾಜ್ಯಸಭೆಗೆ ಆರಿಸಿ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್​ ರಾಜ್ಯದ ವಿಚಾರ ಬಂದಾಗ ನಿರ್ದಯಿಯಾಗಿರುವುದು ಪುನ@ ಸಾಬೀತಾಗಿದೆ. ಈಗ ಅನುದಾನ ಬಿಡುಗಡೆಯಲ್ಲೂ ರ್ನಿಲ$್ಯಸಿರುವುದು ಗೋಚರವಾಗಿದೆ.
ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ 17 ರಾಜ್ಯಗಳಿಗೆ 2021&22ನೇ ಸಾಲಿನ ಹಂಚಿಕೆ ನಂತರದ ಆದಾಯ ಕೊರತೆಯ (ಪಿಡಿಆರ್​ಡಿ) 3ನೇ ತಿಂಗಳ ಕಂತು 9,871 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ 135 ಕೋಟಿ ರೂ. ಮಾತ್ರ ಲಭ್ಯವಾಗಿದೆ. ಈ ಮೂರನೇ ಕಂತಿನ ಬಿಡುಗಡೆಯೊಂದಿಗೆ ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾದ ಹಂಚಿಕೆ ನಂತರದ ಆದಾಯ ಕೊರತೆಯ ಒಟ್ಟು ಮೊತ್ತ 29,613 ಕೋಟಿ ರೂ. ಆದಂತಾಗಿದೆ.ಪೆಟ್ಟಿನ ಮೇಲೆ ಪೆಟ್ಟು: 14ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಬರಬೇಕಾಗಿರುವ ಒಟ್ಟಾರೆ ತೆರಿಗೆ ಹಣ ಶೇ.4.71ರಷ್ಟಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಪ್ರಮಾಣ ಶೇ. 3.63ಕ್ಕೆ ತಗ್ಗಿತ್ತು. ಇದರಿಂದ ಸರಾಸರಿ ವರ್ಷಕ್ಕೆ 11 ಸಾವಿರ ಕೋಟಿ ರೂ. ಕೇಂದ್ರದ ಪಾಲು ಕಡಿಮೆಯಾಗಲಿದೆ.ಆದಾಯ ಕೊರತೆ:15ನೇ ಹಣಕಾಸು ಆಯೋಗ ರಾಜ್ಯಗಳಿಗೆ ಅನುದಾನವನ್ನು ಪುನರ್​ ಹಂಚಿಕೆ ಮಾಡಿದ ಬಳಿಕ ಕರ್ನಾಟಕಕ್ಕೆ ಆದಾಯ ಕೊರತೆಯಾಗುತ್ತದೆ ಎಂದು ಸ್ಪಷ್ಟಮಾಡಿಯೇ “ಆದಾಯ ಕೊರತೆ ಅನುದಾನ’ ಬಿಡುಗಡೆಗೆ ಶಿಾರಸು ಮಾಡಿದೆ. ಆದರೆ, ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಅತೀ ಕನಿಷ್ಠ ಪ್ರಮಾಣದಲ್ಲಿ ನೆರವು ಪಡೆಯುತ್ತಿದೆ. ಕಳೆದ ಮೂರು ತಿಂಗಳಲ್ಲಿ (ಏಪ್ರಿಲ್​&ಜೂನ್​) ಕೇರಳ& 4972.74 ಕೋಟಿ ರೂ., ಆಂಧ್ರ& 4214.24 ಕೋಟಿ ರೂ., ಅಸ್ಸಾಂ& 1593.99 ಕೋಟಿ ರೂ., ಹಿಮಾಚಲ ಪ್ರದೇಶ& 2562.24 ಕೋಟಿ ರೂ., ಪಂಜಾಬ್​& 2520.24 ಕೋಟಿ ರೂ., ರಾಜಸ್ಥಾನ& 2469.51 ಕೋಟಿ ರೂ., ಪಶ್ಚಿಮ ಬಂಗಾಳ 4401.75 ಕೋಟಿ ರೂ. ಪಡೆದುಕೊಂಡಿದೆ. ಕರ್ನಾಟಕಕ್ಕೆ ಸಿಕ್ಕಿದ್ದು ಕೇವಲ 407.76 ಕೋಟಿ ರೂ. ಮಾತ್ರ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪದ ಸರ್ಕಾರ ಇದ್ದರೆ ಸ್ವರ್ಗವನ್ನೇ ಇಳಿಸುತ್ತೇವೆಂದು ಆಡಳಿತ ಪ ಹೇಳಿಕೊಂಡಿತ್ತು. ಆದರೀಗ, ತದ್ವಿರುದ್ಧ ಬೆಳವಣಿಗೆ ನಡೆದು ಪ್ರತಿಪಕ್ಕೆ ಹಣಿಯಲು ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.
1 ಕರ್ತವ್ಯದ ವೇಳೆ ಮಲಯಾಳಂನಲ್ಲಿ ಮಾತನಾಡ ಬಾರದು ಎಂದು ನರ್ಸ್​ಗಳಿಗೆ ಸೂಚಿಸಿ ವಿವಾದಕ್ಕೆ ಕಾರಣವಾಗಿದ್ದ ದೆಹಲಿಯ ಜಿ.ಬಿ. ಪಂತ್​ ಆಸ್ಪತ್ರೆಯ ನರ್ಸಿಂಗ್​ ಅಧೀಕ್ಷಕಿ ಆ ಬಗ್ಗೆ ಕ್ಷಮೆ ಕೋರಿ ಪತ್ರ ಬರೆದಿದ್ದಾರೆ.2 “ಲಸಿಕೆ ಹಾಕಿಸಿಕೊಂಡಿರುವು ದರಿಂದ ನಾನು ದೇಶಪ್ರೇಮಿ’ ಎನ್ನುವ ಬ್ಯಾಡ್ಜ್​ ಅನ್ನು ಮಧ್ಯಪ್ರದೇಶದ ನಿವಾರಿ ಪೊಲೀಸರು ಪಿನ್​ ಮಾಡುತ್ತಿದ್ದಾರೆ.3 ಕರೊನಾ ವಿರುದ್ಧದ ಸರ್ಕಾರದ ಹೋರಾಟ “ಸರ್ಜಿಕಲ್​ ಸ್ಟ್ರೆ$ಕ್​’ನಂತೆ ಇರಬೇಕು ಎಂದು ಬಾಂಬೆ ಹೈಕೋರ್ಟ್​ ಹೇಳಿದೆ.
ಕೋವಿಡ್​ ಲಸಿಕೆ ಸರ್ಟಿಫಿಕೆಟ್​ ದೋಷ ತಿದ್ದಲು ಅವಕಾಶಕೋವಿಡ್​&19 ಲಸಿಕೆ ಹಾಕಿಸಿಕೊಂಡ ಲಾನುಭವಿಗಳಿಗೆ ನೀಡಲಾಗುವ ಸರ್ಟಿಫಿಕೆಟ್​ಗಳು ದೋಷರಹಿತವಾಗಿರುವುದನ್ನು ಖಾತರಿಪಡಿಸಲು ಕೋವಿನ್​ ಪೋರ್ಟಲ್​ನಲ್ಲಿ “ರೇಯ್ಸ್​ ಆ್ಯನ್​ ಇಶ್ಶೂ’ ಎಂಬ ಹೊಸ ಫೀಚರ್​ಅನ್ನು ಅಳವಡಿಸಲಾಗಿದೆ. ಸರ್ಟಿಫಿಕೆಟ್​ನಲ್ಲಿ ಕಣ್ತಪ್ಪಿನಿಂದ ಆಗಿರಬಹುದಾದ ದೋಷಗಳನ್ನು ಲಾನುಭವಿಗಳೇ ಸರಿಪಡಿಸಲು ಇದು ನೆರವಾಗುತ್ತದೆ. ಹೆಸರು, ಜನ್ಮ ದಿನಾಂಕ, ಲಿಂಗ ಮುಂತಾದ ವಿವರಗಳನ್ನು ಸರಿಪಡಿಸಲು ಅವಕಾಶ ಕಲ್ಪಿಸಲಾಗಿದೆ. ಡಿಡಿಡಿ.್ಚಟಡಿಜ್ಞಿ.ಜಟಡ.ಜ್ಞಿ ಈ ವಿಳಾಸಕ್ಕೆ ಭೇಟಿ ನೀಡಿ “ರೇಯ್ಸ್​ ಆ್ಯನ್​ ಇಶ್ಶೂ’ ಆಯ್ಕೆಯನ್ನು ಕ್ಲಿಕ್ಕಿಸಿ ತಿದ್ದುಪಡಿಗಳನ್ನು ದಾಖಲಿಸ ಬಹುದಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
2&ಡಿಜಿ ಉತ್ಪಾದನೆಗೆ ಡಿಆರ್​ಡಿಒ ಅರ್ಜಿ ಆಹ್ವಾನಕರೊನಾ ಚಿಕಿತ್ಸೆಗೆ ತಾನು ಅಭಿವೃದ್ಧಿ ಪಡಿಸಿರುವ 2&ಡಿಜಿ ಔಷಧದ ಬೃಹತ್​ ಪ್ರಮಾಣದ ಉತ್ಪಾದನೆಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಅರ್ಜಿ ಆಹ್ವಾನಿಸಿದೆ. ಔಷಧದ ತಂತ್ರಜ್ಞಾನ ವರ್ಗಾವಣೆಗಾಗಿ ಭಾರತೀಯ ಔಷಧ ಕಂಪನಿಗಳು ಆಸಕ್ತಿ ಪತ್ರ (ಎಕ್ಸ್​ಪ್ರೆಷನ್​ ಆ್​ ಇಂಟರೆಸ್ಟ್​) ಕಳಿಸಬೇಕೆಂದು ಅದು ಸೂಚಿಸಿದೆ. ಇಮೇಲ್​ ಮೂಲಕ ಅರ್ಜಿ ಕಳಿಸಲು ಜೂನ್​ 17 ಕೊನೆ ದಿನ. ಕಂಪನಿಗಳ ಸಾಮರ್ಥ್ಯ ಅನುಸರಿಸಿ ಕೇವಲ 15 ಸಂಸ್ಥೆಗಳಿಗೆ ಮಾತ್ರ ತಂತ್ರಜ್ಞಾನ ವರ್ಗಾಯಿಸಲು ನಿರ್ಧರಿಸಲಾಗಿದೆ.
ಬೀಟಾ, ಡೆಲ್ಟಾ ಪ್ರಭೇದಕ್ಕೆ ಕೊವ್ಯಾಕ್ಸಿನ್​ ರಾಮಬಾಣಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್​ ಲಸಿಕೆ, ಕರೊನಾ ವೈರಸ್​ನ ಬೀಟಾ ಮತ್ತು ಡೆಲ್ಟಾ ಪ್ರಭೇದಗಳ ವಿರುದ್ಧ ತುಂಬಾ ಪರಿಣಾಮಕಾರಿ ಎಂಬುದು ಜಂಟಿ ಅಧ್ಯಯನದಿಂದ ತಿಳಿದು ಬಂದಿದೆ. ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್​ಐವಿ), ಭಾರತೀಯ ವೈದ್ಯಕಿಯ ಸಂಶೋಧನಾ ಮಂಡಳಿ (ಐಸಿಎಂಆರ್​) ಮತ್ತು ಭಾರತ್​ ಬಯೋಟೆಕ್​ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಕೋವಿಡ್​ನಿಂದ ಗುಣಮುಖರಾದ 20 ಜನರು ಮತ್ತು ಕೊವ್ಯಾಕ್ಸಿನ್​ನ ಎರಡೂ ಡೋಸ್​ ಪಡೆದ ಇತರ 17 ಮಂದಿಯಿಂದ ಪಡೆದ ಮಾದರಿಗಳ ಆಧಾರದಲ್ಲಿ ಈ ಅಧ್ಯಯನ ನಡೆಸಲಾಗಿತ್ತು. ಐಸಿಎಂಆರ್​ ನಿರ್ದೇಶಕ ಬಲರಾಂ ಭಾರ್ಗವ ಅವರೂ ಅಧ್ಯಯನ ವರದಿ ಸಿದ್ಧಪಡಿಸಿದವರಲ್ಲಿ ಇದ್ದಾರೆ. ಡೆಲ್ಟಾ ಪ್ರಭೇದ (ಬಿ.1.617.2) ಮೊದಲಿಗೆ ಭಾರತದಲ್ಲಿ ಪತ್ತೆಯಾಗಿತ್ತು. ಅದುವೇ ದೇಶದಲ್ಲಿ ಎರಡನೇ ಅಲೆಯ ತೀವ್ರತೆಗೆ ಕಾರಣ ಎಂದು ಹೇಳಲಾಗುತ್ತಿದೆ. ಬೀಟಾ ರೂಪಾಂತರಿ (ಬಿ.1.351) ಮೊದಲಿಗೆ ದಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen + seventeen =
Remember me
