ನವದೆಹಲಿ:ವಾಹನಗಳ ಥರ್ಡ್ ಪಾರ್ಟಿ ವಿಮೆಗಳ ಹೊಸ ಬೇಸ್ ಪ್ರೀಮಿಯಂ ದರಗಳ ಬಗ್ಗೆ ಕೇಂದ್ರ ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದ್ದು, ಹೊಸ ದರಗಳು ಜೂನ್ 1ರಿಂದ ಅನ್ವಯವಾಗಲಿವೆ. 2019-20ರ ಹಣಕಾಸು ವರ್ಷದಲ್ಲಿ ಈ ದರಗಳನ್ನು ಕೊನೆಯದಾಗಿ ಪರಿಷ್ಕರಿಸಲಾಗಿದ್ದು, ಕೋವಿಡ್ ಸಾಂಕ್ರಾಮಿಕತೆಯ ಅವಧಿಯಲ್ಲಿ ಯಾವುದೇ ಬದಲಾವಣೆಯಿಲ್ಲದೆ ಹಾಗೇ ಮುಂದುವರಿಸಲಾಗಿತ್ತು.
ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ಪ್ರಕಾರ 1000 ಸಿಸಿ ಮೀರದ ಖಾಸಗಿ ಕಾರುಗಳ ಥರ್ಡ್-ಪಾರ್ಟಿ ವಾರ್ಷಿಕ ವಿಮಾ ದರ 2,094 ರೂ. ನಿಗದಿಪಡಿಸಲಾಗಿದೆ. 2019-20ರಲ್ಲಿ ಇದು 2,072 ರೂ. ಆಗಿತ್ತು. 1000 ಸಿಸಿಯಿಂದ 1,500 ಸಿಸಿವರೆಗಿನ ಇಂಜಿನ್ ಸಾಮರ್ಥ್ಯದ ಖಾಸಗಿ ಕಾರುಗಳ ವಿಮಾ ದರವನ್ನು ಈಗಿರುವ 3,221 ರೂಪಾಯಿಯಿಂದ 3,416 ರೂಪಾಯಿಗೆ ಏರಿಸಲಾಗಿದೆ. 1,500 ಸಿಸಿಗಿಂತ ಅಧಿಕ ಸಾಮರ್ಥ್ಯದ ಖಾಸಗಿ ವಾಹನಗಳ ವಾರ್ಷಿಕ ಪ್ರೀಮಿಯಂ ಹಾಲಿ 7,890ರಿಂದ 7,897 ರೂ. ಆಗಲಿದೆ.
ದ್ವಿಚಕ್ರ ವಾಹನ ವಿಮಾ ದರ: 150 ಸಿಸಿಗಿಂತ ಹೆಚ್ಚಿನ ಆದರೆ 350 ಸಿಸಿ ಮೀರದ ದ್ವಿಚಕ್ರ ವಾಹನಗಳ ವಿಮಾ ಪ್ರೀಮಿಯಂ ದರ 1,366 ರೂಪಾಯಿ ಹಾಗೂ 350 ಸಿಸಿಗಿಂತ ಅಧಿಕ ಸಾಮರ್ಥ್ಯದ ದ್ವಿಚಕ್ರ ವಾಹನಗಳ ಪ್ರೀಮಿಯಂ 2,804 ರೂಪಾಯಿ ಆಗಲಿದೆ ಎಂದು ಅಧಿಸೂಚನೆ ತಿಳಿಸಿದೆ.
ಇ – ವಾಹನಕ್ಕೆ ಎಷ್ಟು?:30 ಕಿಲೋ ವಾಟ್ ಮೀರದ ಹೊಸ ಖಾಸಗಿ ಎಲೆಕ್ಟ್ರಿಕ್ ವಾಹನದ (ಇವಿ) ಮೂರು ವರ್ಷಗಳ ಪ್ರೀಮಿಯಂ 5,543 ರೂ. 30ರಿಂದ 65 ಕಿಲೊ ವಾಟ್ ಒಳಗಿನ ಇವಿಗಳ ತ್ರೖೆವಾರ್ಷಿಕ ಪ್ರೀಮಿಯಂ 9,044 ರೂ.ಗೆ ನಿಗದಿ ಪಡಿಸಲಾಗಿದೆ.
ಶೂಟ್​ ಮಾಡ್ಕೊಂಡು ಉದ್ಯಮಿ ಆತ್ಮಹತ್ಯೆ; ಡೆತ್​ನೋಟ್​ನಲ್ಲಿತ್ತು ಆ ಇಬ್ಬರ ಹೆಸರು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
