ನವದೆಹಲಿ:ಸಂಭಾವ್ಯ ಮೂರನೇ ಅಲೆ ವೇಳೆ ವಯಸ್ಕರಿಗಿಂತ ಮಕ್ಕಳು ಹೆಚ್ಚು ತೊಂದರೆಗೆ ಒಳಗಾಗುತ್ತಾರೆಂಬುದಕ್ಕೆ ಸಾಕಷ್ಟು ಪುರಾವೆ ಇಲ್ಲ. ಆದರೆ, ಮಕ್ಕಳಿಗೆ ಲಸಿಕೆ ಹಾಕುವವರೆಗೂ ಸೋಂಕಿನ ಆತಂಕ ದೂರವಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಎನ್​ಐಡಿಎಂ) ವರದಿ ಎಚ್ಚರಿಸಿದೆ. 2ನೇ ಅಲೆಯಂತೆ 3ನೇ ಅಲೆ ವ್ಯಾಪಕವಾಗಿ ಹರಡಿ, ಮಕ್ಕಳು ಬಾಧಿತರಾದರೆ ಅವರ ಚಿಕಿತ್ಸೆಗೆ ಅಗತ್ಯವಾದಷ್ಟು ಮಕ್ಕಳ ತಜ್ಞ ವೈದ್ಯರು ಇಲ್ಲ. ವೆಂಟಿಲೇಟರ್, ಆಂಬುಲೆನ್ಸ್ ಇನ್ನಿತರ ಸೌಕರ್ಯಗಳ ಕೊರತೆ ಇದೆ. ಇದು ಪಾಲಕರನ್ನು ಹೆಚ್ಚು ಕಳವಳಕ್ಕೆ ದೂಡಿದೆ ಎಂದು ಎನ್​ಐಡಿಎಂ ವರದಿ ಹೇಳಿದೆ. ಮೂರನೇ ಅಲೆಯು ಅಕ್ಟೋಬರ್​ನಲ್ಲಿ ಗರಿಷ್ಠ ಮಟ್ಟಕ್ಕೆ ತಲುಪುವ ಸಾಧ್ಯತೆ ಇದ್ದು, ಇದನ್ನು ಸಮರ್ಥವಾಗಿ ಎದುರಿಸುವಷ್ಟು ವೈದ್ಯಕೀಯ ಸೌಲಭ್ಯಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಮಕ್ಕಳಿಗೆ ಇನ್ನೂ ಲಸಿಕೆ ಹಾಕದಿರುವುದರಿಂದ ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಸೂಕ್ತ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ. ‘ಮೂರನೇ ಅಲೆಯ ಸಿದ್ಧತೆ: ಮಕ್ಕಳಲ್ಲಿ ದುರ್ಬಲತೆ ಮತ್ತು ಚೇತರಿಕೆ’ ಹೆಸರಿನ ಈ ವರದಿಯನ್ನು ಇತ್ತೀಚೆಗಷ್ಟೆ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಸಲ್ಲಿಸಲಾಗಿದೆ.
5 ತಿಂಗಳ ನಂತರ ಕಡಿಮೆ ಕೇಸ್:ಸೋಮವಾರ ದೇಶದಲ್ಲಿ 25,072 ಹೊಸ ಪ್ರಕರಣಗಳು ವರದಿಯಾಗಿದ್ದು, 160 ದಿನಗಳ ನಂತರ ಕೋವಿಡ್ ಹೊಸ ಕೇಸ್​ಗಳ ಸಂಖ್ಯೆ ತಗ್ಗಿದೆ. ಒಟ್ಟಾರೆ ಕೋವಿಡ್ ಪ್ರಕರಣಗಳ ಸಂಖ್ಯೆ 3,24,49,306ಕ್ಕೆ ಏರಿದ್ದು, ದೈನಿಕ ಸಾವಿನ ಸಂಖ್ಯೆ 389 ವರದಿಯಾಗಿದೆ. ಇದರಿಂದ ಮೃತರ ಸಂಖ್ಯೆ 4,34,756ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,33,924 (ಒಟ್ಟಾರೆ ಕೇಸ್​ನಲ್ಲಿ ಶೇ. 1.03) ಇದ್ದು, ಇದೂ ಐದು ತಿಂಗಳ ನಂತರ ತಗ್ಗಿದೆ. ಕೋವಿಡ್ ತಗುಲಿದವರ ಪೈಕಿ ಶೇ. 97.63ರಷ್ಟು ಮಂದಿ ಚೇತರಿಸಿಕೊಂಡಿದ್ದಾರೆ.
ಚೀನಾದಲ್ಲಿ ಹೊಸ ಪ್ರಕರಣ ಇಲ್ಲ:ಡೆಲ್ಟಾ ಪ್ರಭೇದ ಕಾಣಿಸಿಕೊಂಡಿದ್ದ ಚೀನಾದಲ್ಲಿ ಒಂದು ತಿಂಗಳ ನಂತರ ಹೊಸದಾಗಿ ಪ್ರಕರಣ ವರದಿಯಾಗಿಲ್ಲ. ಡೆಲ್ಟಾ ರೂಪಾಂತರಿ ಹಬ್ಬುವುದನ್ನು ಚೀನಾ ತಡೆದಿರುವುದು ಇತರ ದೇಶಗಳಿಗೆ ಮಾದರಿಯಾಗಿದೆ. ಆದರೆ, ಚೀನಾ ಮಾದರಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ಇತರ ದೇಶಗಳು ಸಿದ್ಧವಿದೆಯೆ ಎಂಬ ಪ್ರಶ್ನೆಯನ್ನೂ ಹುಟ್ಟಿಹಾಕಿದೆ. ಚೀನಾ ನಾನ್ಜಿಂಗ್ ನಗರದ ವಿಮಾನ ನಿಲ್ದಾಣದಲ್ಲಿ ಸ್ವಚ್ಛತಾ ಸಿಬ್ಬಂದಿಯೊಬ್ಬರಲ್ಲಿ ಜುಲೈ 20ರಂದು ಡೆಲ್ಟಾ ಸೋಂಕು ದೃಢಪಟ್ಟಿತ್ತು. ಆಗಸ್ಟ್ 23ಕ್ಕೆ ಚೀನಾದಲ್ಲಿ ಹೊಸದಾಗಿ ಕರೊನಾ ಕೇಸ್ ಶೂನ್ಯಕ್ಕೆ ಬಂದಿದೆ. ಹೊಸದಾಗಿ ಸೋಂಕು ಕಾಣಿಸಿಕೊಂಡ ನಗರಗಳಲ್ಲಿ ಕಠಿಣ ಕ್ರಮ ಕೈಗೊಂಡ ಕಾರಣ ಸೋಂಕು ಕಡಿಮೆಯಾಗಿದೆ.
ಝೈಡಸ್ ಕ್ಯಾಡಿಲಾ ಮಾತ್ರೆಗೆ ಅಮೆರಿಕ ಒಪ್ಪಿಗೆ:ಝೈಡಸ್ ಕ್ಯಾಡಿಲಾ ಸಂಸ್ಥೆ ಉತ್ಪಾದಿಸಿರುವ ‘ತೋಫಾಸಿಟಿನಿಬ್’ನ 11 ಎಂಜಿ ಮತ್ತು 22 ಎಂಜಿ ಮಾತ್ರೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಯುಎಸ್​ಎಫ್​ಡಿಎ) ಅನುಮತಿ ನೀಡಿದೆ. ಸಂಧಿವಾತದ ನೋವಿನ ಶಮನಕ್ಕೆ ಬಳಸಲಾಗುವ ಈ ಮಾತ್ರೆಗಳನ್ನು ಗುಜರಾತನ್ ಅಹಮದಾಬಾದ್​ನ ಘಟಕದಲ್ಲಿ ತಯಾರು ಮಾಡುತ್ತಿರುವುದಾಗಿ ಝೈಡಸ್ ಕ್ಯಾಡಿಲಾ ತಿಳಿಸಿದೆ.
ದೇಶಾದ್ಯಂತ ನಡೆಯುತ್ತಾ ಜಾತಿ ಆಧಾರಿತ ಜನಗಣತಿ?; ಪ್ರಧಾನಿಯನ್ನು ಭೇಟಿ ಆಗಿ ಚರ್ಚಿಸಿದರು 11 ಪಕ್ಷಗಳ ಮುಖಂಡರು
ನಾನು ಟೈಟಾಗಿದ್ದೇನೆ ಗೊತ್ತಾಗಿಲ್ಲ, ಇನ್ನೊಂದು ಕಾರ್ಡ್ ನಂಬರ್ ಕೊಡಿ ಎಂದ; 730 ರೂಪಾಯಿ ವೈನ್‌ಗೆ 1.79 ಲಕ್ಷ ರೂ. ಧೋಖಾ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 10 =
Remember me
