ನವದೆಹಲಿ:ದೇಶಾದ್ಯಂತ ಅಬ್ಬರ ತೋರಿದ್ದ ಕರೊನಾ ಎರಡನೇ ಅಲೆ ಸ್ವಲ್ಪ ಮಟ್ಟಿಗೆ ತಣ್ಣಗಾಗಿದ್ದು ಎಲ್ಲ ರಾಜ್ಯಗಳು ಅನ್​ಲಾಕ್ ಪ್ರಕ್ರಿಯೆ ಆರಂಭಿಸಿವೆ. ಅನ್​ಲಾಕ್ ಆಗಿದೆಯೆಂದು ಕರೊನಾ ನಿಯಮಗಳನ್ನೆಲ್ಲ ಗಾಳಿಗೆ ತೂರಿದರೆ, ಅಕ್ಟೋಬರ್-ನವೆಂಬರ್​ನಲ್ಲಿ ಮೂರನೇ ಅಲೆ ಉತ್ತುಂಗಕ್ಕೆ ಏರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ತಜ್ಞರು.
ಸರ್ಕಾರಿ ಕೋವಿಡ್ ನಿರ್ವಹಣೆ ಸಮಿತಿಯ ಸದಸ್ಯರಾಗಿರುವ ಮಣೀಂದ್ರ ಅಗರ್ವಾಲ್ ಇಂತದ್ದೊಂದು ಎಚ್ಚರಿಕೆ ನೀಡಿದ್ದಾರೆ. ಕರೊನಾ ಗುಣಮುಖರಾದವರಲ್ಲಿ ರೋಗ ನಿರೋಧಕ ಶಕ್ತಿ ನಷ್ಟ ಹಾಗೂ ಲಸಿಕೆಯ ಪರಿಣಾಮ ಈ ಬಾರಿಯ ಅಧ್ಯಯನದಲ್ಲಿ ಸೇರ್ಪಡೆಗೊಂಡಿದೆ. ಎರಡನೇ ಅಲೆಗೆ ಮುನ್ಸೂಚನೆ ನೀಡುವಾಗ ಈ ಅಂಶಗಳು ಇರಲಿಲ್ಲ. ಮೂರನೇ ಅಲೆ ಬಂದರೆ ಅದರಲ್ಲಿ ಸೋಂಕು ಹರಡುವಿಕೆ ವೇಗ ಇನ್ನಷ್ಟು ಹೆಚ್ಚಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
<SUTRA's analysis of third wave>@stellensatz@Ashutos61@Sandeep_1966@shekhar_mandeIt took us a while to do the analysis for three reasons. First, loss of immunity in recovered population. Second, vaccination induced immunity. Each of these two need to be estimated for future.
— Manindra Agrawal (@agrawalmanindra)July 2, 2021

“ನಾವು ಮೂರು ರೀತಿಯಲ್ಲಿ ಅನಾಲಿಸಿಸ್ ಮಾಡಿದ್ದೇವೆ. ಮೊದಲನೆಯದೆಂದರೆ ಅದರಲ್ಲಿ ಆಗಸ್ಟ್ ವೇಳೆಗೆ ಜನ ಜೀವನ ಸಾಮಾನ್ಯ ಸ್ಥಿತಿಗೆ ಬಂದು, ಸೋಂಕಿತರ ಸಂಖ್ಯೆ ಸಂಪೂರ್ಣವಾಗಿ ಕಡಿಮೆಯಾಗುವುದು. ಎರಡನೆಯದೆಂದರೆ ಲಸಿಕೆಯು ಶೇ. 20ರಷ್ಟು ಪರಿಣಾಮಕಾರಿ ಎಂದು ಭಾವಿಸುತ್ತೇವೆ. ಮೂರನೆಯದರ ಪ್ರಕಾರ ಆಗಸ್ಟ್​ನಲ್ಲಿ ಹೊಸದಾಗಿ ಶೇ.25ರಷ್ಟು ಹೆಚ್ಚು ಸಾಂಕ್ರಾಮಿಕ ರೂಪಾಂತರಿ ಸೋಂಕುಗಳು ಸೃಷ್ಟಿಯಾಗಿ ಅವು ಮತ್ತೆ ಹರಡುತ್ತಾ ಹೋಗುವುದು ಎಂದು ಅವರು ಹೇಳಿದ್ದಾರೆ.
ಆಗಸ್ಟ್ ಮಧ್ಯದ ವೇಳೆಗೆ ಎರಡನೇ ಅಲೆ ಇಳಿಮುಖವಾಗಲಿದೆ. ಅದಾದ ನಂತರ ಒಂದು ವೇಳೆ ಜನರು ಕರೊನಾ ಮುಂಜಾಗ್ರತೆಗಳನ್ನು ಮರೆತರೆ ಅಕ್ಟೋಬರ್-ನವೆಂಬರ್ ವೇಳೆಗೆ ಮೂರನೇ ಅಲೆಯು ತನ್ನ ಗರಿಷ್ಠ ಮಟ್ಟವನ್ನು ತಲುಪಲೂಬಹುದು. ಆ ವೇಳೆ ದಿನಕ್ಕೆ ಸುಮಾರು 1.5 ಲಕ್ಷದಿಂದ 2 ಲಕ್ಷದವರೆಗೆ ಸೋಂಕಿತರು ಪತ್ತೆಯಾಗುವ ಸಾಧ್ಯತೆಯಿದೆ ಎಂದು ಅವರು ಟ್ವಿಟ್ಟರ್​ನಲ್ಲಿ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್)
‘ರಫೇಲ್​ ಡೀಲ್​ನಲ್ಲಿ ಮಧ್ಯವರ್ತಿಗಳಿಗೆ ಕೊಟ್ಟಿದ್ದು ಕೋಟಿ ಕೋಟಿ ರೂಪಾಯಿ’ ಕಾಂಗ್ರೆಸ್ ಆರೋಪ

ಅಪ್ಪ ಮಗ ಇಬ್ಬರಿಗೂ ಒಬ್ಬಳೇ ಹೆಂಡತಿ! ಆರ್​ಟಿಐ ವರದಿ ನೋಡಿ ಬೆಚ್ಚಿಬಿದ್ದ ಯುವಕ

ಐ ಹೇಟ್ ಮೈ ಲೈಫ್ ಎಂದು ನೋಟ್ ಬುಕ್ ತುಂಬ ಬರೆದಿಟ್ಟು ನೇಣಿಗೆ ಶರಣಾದ 9ನೇ ಕ್ಲಾಸ್ ಬಾಲಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + twelve =
Remember me
