ತಿರುವನಂತಪುರಂ: ಲೋಕ ಕೇರಳ ಸಭಾ(ಎಲ್​ಕೆಎಸ್​) ಕಾರ್ಯಕ್ರಮಕ್ಕೆ ಸಂಬಂಧಿಸಿದ ಸೌಜನ್ಯಪೂರ್ವಕವಾಗಿ ವಯನಾಡಿನ ಸಂಸದ ರಾಹುಲ್ ಗಾಂಧಿ ಬರೆದಿದ್ದ ಪತ್ರವನ್ನು ಟ್ವೀಟ್ ಮಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್​ ಕಾಂಗ್ರೆಸ್​ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಕೇರಳ ಸಿಎಂ ಅವರ ಟ್ವೀಟ್​ನಲ್ಲಿ ಏನಿದೆ?:ಲೋಕ ಕೇರಳ ಸಭಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಪತ್ರಕ್ಕೆ ಧನ್ಯವಾದ ಸೂಚಿಸಿರುವ ಪಿಣರಾಯಿ ವಿಜಯನ್​, ರಾಹುಲ್ ಅವರ ನಡೆಯನ್ನು ಪ್ರಶಂಸಿಸಿದ್ದಾರೆ. ಆ ಪತ್ರದಲ್ಲಿ ಇಂತಹ ಕಾರ್ಯಕ್ರಮ ಹೊರದೇಶದಲ್ಲಿರುವ ದೇಶವಾಸಿಗಳನ್ನು ಸಂಪರ್ಕಿಸುವುದಕ್ಕೆ ಉತ್ತಮ ವೇದಿಕೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಆ ಪತ್ರವನ್ನೂ ಸೇರಿಸಿ ಟ್ವೀಟ್​ ಮಾಡಿದ್ದರು.
ಕಾಂಗ್ರೆಸ್ ನಾಯಕರ ಟೀಕೆ ಯಾಕೆ?:ವಾಸ್ತವದಲ್ಲಿ ಅನಿವಾಸಿ ಕೇರಳೀಯರನ್ನು ಒಂದೆಡೆ ಸೇರಿಸುವ ಎಲ್​ಕೆಎಸ್ ಕಾರ್ಯಕ್ರಮವನ್ನು ಕೇರಳದ ಕಾಂಗ್ರೆಸ್ ನೇತೃತ್ವದ ವಿಪಕ್ಷ ಬಹಿಷ್ಕರಿಸಿತ್ತು. ಸಿಬ್ಬಂದಿಗೆ ವೇತನ ಕೊಡುವುದಕ್ಕೇ ಸರ್ಕಾರ ಕಷ್ಟಪಡುತ್ತಿರುವಾಗ ಇಂತಹ ದುಂದುವೆಚ್ಚದ ಕಾರ್ಯಕ್ರಮ ಬೇಡ ಎಂಬ ಕಾರಣವನ್ನೂ ಅದಕ್ಕೆ ಕೊಟ್ಟಿತ್ತು. ಆದರೆ, ರಾಹುಲ್ ಗಾಂಧಿ ಅವರ ಪತ್ರವನ್ನು ಒಳಗೊಂಡ ಈ ಟ್ವೀಟ್​ ಕೇರಳ ಕಾಂಗ್ರೆಸ್ ನಾಯಕರಿಗೆ ಭಾರಿ ಇರಿಸುಮುರಿಸು ಉಂಟುಮಾಡಿತ್ತು.
ಹೀಗಾಗಿ ಎಐಸಿಸಿ ಜನರಲ್ ಸೆಕ್ರೆಟರಿ ಕೆ.ಸಿ.ವೇಣುಗೋಪಾಲ್​, ಕೇರಳ ವಿಧಾನಸಭೆಯ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಪ್ರತಿಕ್ರಿಯಿಸಿದ್ದು, ವಿಜಯನ್ ಪೊಲಿಟಿಕಲ್ ಮೈಲೇಜ್​ಗೋಸ್ಕರ ಹೀಗೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರು ವಯನಾಡಿನ ಸಂಸದರಾಗಿರುವ ಕಾರಣ ಅವರು ಸೌಜನ್ಯಕ್ಕೋಸ್ಕರ ಕಳುಹಿಸಿದ ಪತ್ರ ಅದು. ಅದನ್ನು ಮುಖ್ಯಮಂತ್ರಿ ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
Thank you Shri. Rahul Gandhi for your warm greetings to the Loka Kerala Sabha (@LokaKeralaSabha).In his message,@RahulGandhiopined that "the Loka Kerala Sabha is a great platform to connect with the diaspora, and recognize their contribution."pic.twitter.com/3G4KYMSllc— CMO Kerala (@CMOKerala)January 2, 2020
Thank you Shri. Rahul Gandhi for your warm greetings to the Loka Kerala Sabha (@LokaKeralaSabha).In his message,@RahulGandhiopined that "the Loka Kerala Sabha is a great platform to connect with the diaspora, and recognize their contribution."pic.twitter.com/3G4KYMSllc
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 3 =
Remember me
