ನವದೆಹಲಿ:ನೀವು ಮನೆಯಲ್ಲೇ ಕುಳಿತು 25 ಲಕ್ಷ ರೂಪಾಯಿ ಸಂಪಾದಿಸಬೇಕೆ? ಹಾಗದರೆ, ನಿಮಗಿದು ಸುವರ್ಣಾವಕಾಶವೇ ಸರಿ. ನಿಮ್ಮ ಬಳಿ ಕೇವಲ ಒಂದು ರೂಪಾಯಿ ನಾಣ್ಯವಿದ್ದರೆ ಇದು ಸಾಧ್ಯವಾಗಲಿದೆ. 100 ವರ್ಷ ಹಿಂದಿನ 1 ರೂ. ನಾಣ್ಯವಿದ್ದರೆ ನೀವು ಮನೆಯಲ್ಲೇ ಕುಳಿತು ಅದನ್ನು ಮಾರಾಟ ಮಾಡುವ ಮೂಲಕ 25 ಲಕ್ಷ ರೂ. ಗೆಲ್ಲಬಹುದು.
1913ರಲ್ಲಿ ಸರ್ಕಾರದಲ್ಲಿ ಚಾಲ್ತಿಯಲ್ಲಿದ್ದ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿಯಿದ್ದರೆ, ಅದನ್ನು ಮಾರಾಟ ಮಾಡಿ ನೀವು ಒಳ್ಳೆಯ ಹಣ ಸಂಪಾದನೆ ಮಾಡಬಹುದಾಗಿದೆ. ಆ ನಾಣ್ಯವನ್ನು ಸಿಲ್ವರ್​ನಿಂದ ತಯಾರಿಸಲಾಗಿದ್ದು, ವಿಕ್ಟೋರಿಯನ್​ ಯುಗಕ್ಕೆ ಸೇರಿದ್ದಾಗಿದೆ. ಈ ಕಾರಣದಿಂದಾಗಿ ಆ ನಾಣ್ಯಕ್ಕೆ ಬಹಳ ಮಹತ್ವ ಬಂದಿದೆ. ಒಂದು ವೇಳೆ ನಿಮ್ಮ ಬಳಿಯಿದ್ದರೆ ಅದನ್ನು ಮಾರಾಟ ಮಾಡಿ ಹಣ ಪಡೆಯಬಹುದಾಗಿದೆ.
ಹಳೆಯ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿರುವ ಅನೇಕ ಮಂದಿ ಜಗತ್ತಿನೆಲ್ಲೆಡೆ ಇದ್ದಾರೆ. ಇಂತಹ ಕೆಲಸದಲ್ಲಿ ಅವರು ತುಂಬಾ ಉತ್ಸಾಹವನ್ನೂ ಹೊಂದಿರುತ್ತಾರೆ. ನಿಮ್ಮ ಬಳಿ ಪ್ರಾಚೀನ ಕಾಲದ ವಸ್ತುಗಳೇನಾದರೂ ಇದ್ದರೆ, ಎಷ್ಟೇ ಹಣ ಕೊಟ್ಟು ಅಂತಹ ವಸ್ತುಗಳನ್ನು ಕೊಂಡುಕೊಳ್ಳಲಿದ್ದಾರೆ. ಹೀಗಾಗಿ 1913ರಲ್ಲಿ ತಯಾರಾದ 1 ರೂಪಾಯಿ ನಾಣ್ಯ ಇದೀಗ ನಿಮಗೆ ಲಾಟರಿಯಂತಾಗಿದೆ.
ಇದನ್ನೂ ಓದಿ:ಕೆಲಸ ಹುಡುಕುವ ಬದಲು ಉದ್ಯಮಿಗಳಾಗಿ… ಅದಕ್ಕಾಗಿ ಕನ್ನಡದಲ್ಲೇ ಇದೆ ಹ್ಯಾಂಡಿ ಕ್ರಾಫ್ಟ್ಸ್ ಕೋರ್ಸ್

ಶುಭ ಸುದ್ದಿಯೇನೆಂದರೆ ನೀವು ಹೊರಗಡೆ ಹೋಗಿ ಮಾರಾಟ ಮಾಡಬೇಕೆಂದಿಲ್ಲ. ಮನೆಯಲ್ಲೇ ಕುಳಿತು ಮಾರಾಟ ಮಾಡಬಹುದು. ಅದಕ್ಕಾಗಿ ನೀವು ಮಾಡಬೇಕಾಗಿರುವುದಿಷ್ಟೇ ಇಂಡಿಯಾ ಮಾರ್ಟ್ (IndiaMart)​ ವೆಬ್​ಸೈಟ್​ಗೆ ಭೇಟಿ ನೀಡಿ, ನಿಮ್ಮದೇ ಖಾತೆಯನ್ನು ತೆರೆಯಿರಿ. ಬಳಿಕ ಮಾರಾಟಗಾರನೆಂದು ನೋಂದಾಯಿಸಿಕೊಳ್ಳಿ.
ನೋಂದಣಿ ಮಾಡಿದ ಬೆನ್ನಲ್ಲೇ ನಿಮ್ಮ ಬಳಿಯಿರುವ ನಾಣ್ಯದ ಚಿತ್ರವನ್ನು ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಮಾಡಿ. ನಾಣ್ಯವು ಮಾರಾಟಕ್ಕಿದೆ ಎಂದು ಬರೆಯಿರಿ. ಯಾರು ಯಾರು ಪ್ರಾಚೀನ ನಾಣ್ಯಗಳಿಗೆ ಹುಡುಕಾಡುತ್ತಿರುತ್ತಾರೋ ಅವರು ವೆಬ್​ಸೈಟ್​ಗೆ ಭೇಟಿ ನೀಡುತ್ತಾರೆ. ನಿಮ್ಮ ನಾಣ್ಯವನ್ನು ನೋಡಿದ ಬಳಿಕ ನಿಮ್ಮನ್ನು ಆನ್​ಲೈನ್​ ಮೂಲಕ ಸಂಪರ್ಕಿಸಲಿದ್ದಾರೆ. ನಿಮಗೆ ಹಣ ನೀಡಿ ನಾಣ್ಯವನ್ನು ಕೊಂಡುಕೊಳ್ಳಲಿದ್ದಾರೆ.(ಏಜೆನ್ಸೀಸ್​)
ವೆಡ್ಡಿಂಗ್​ ಫೋಟೋಶೂಟ್​ಗೆ ಹರಿದುಬಂತು ಅಶ್ಲೀಲ ಕಮೆಂಟ್ಸ್​: ನವದಂಪತಿ ಸಮರ್ಥನೆ ಹೀಗಿದೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 2 =
Remember me
