ನವದೆಹಲಿ:ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಇಂದು ಚಿನ್ನದ ಬೆಲೆ 10 ಗ್ರಾಂಗೆ 64,700 ಸಾವಿರ ರೂ. ಇಂದಿನ ಕಾಲದಲ್ಲಿ ಚಿನ್ನವನ್ನು ಕೊಳ್ಳುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಎನ್ನುವ ಮಾತಿದೆ. ಮಧ್ಯಮ ವರ್ಗದ ಕುಟುಂಬಗಳು ಕೂಡ ಮದುವೆಯಂತಹ ವಿಶೇಷ ಸಂದರ್ಭಗಳಲ್ಲಿ ಮಾತ್ರ ಚಿನ್ನವನ್ನು ಖರೀದಿಸಲು ಸಾಧ್ಯವಾಗುತ್ತದೆ. ಚಿನ್ನದ ಬೆಲೆ ಕೇಳಿದ ನಂತರ ಜನರು ಆಭರಣ ಖರೀದಿಸುವ ಯೋಚನೆಯನ್ನೂ ಮಾಡುವುದಿಲ್ಲ, ಆದರೆ ಒಂದು ಕಾಲದಲ್ಲಿ 10 ಗ್ರಾಂ ಚಿನ್ನದ ಬೆಲೆ 113 ರೂ. ಆಗಿತ್ತಂದೆ. ಈ ಕುರಿತಾದ ಬಿಲ್​ವೊಂದು ವೈರಲ್​​ ಆಗುತ್ತಿದೆ.
ಇತ್ತೀಚೆಗೆ 1959 ರಲ್ಲಿ ಚಿನ್ನದ ಖರೀದಿದಾರರ ಬಿಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ 11.66 ಗ್ರಾಂ ಚಿನ್ನದ ಬೆಲೆ ಕೇವಲ 113 ರೂಪಾಯಿ ಎಂದು ಬರೆಯಲಾಗಿದೆ. ಈ ಪೋಸ್ಟ್ ನಲ್ಲಿ ಅದೇ ತೂಕದ ಇಂದಿನ ಚಿನ್ನದ ಬೆಲೆ 70-75 ಸಾವಿರ ರೂ. ಆಗಿದೆ. ಹಿಂದಿನ ಕಾಲದಲ್ಲಿ ಕಡಿಮೆ ಬೆಲೆಯ ಚಿನ್ನದ ಬಗ್ಗೆ ತಿಳಿದರೆ ಜನರು ನಿಜಕ್ಕೂ ಆಶ್ಚರ್ಯ ಪಡುತ್ತಾರೆ.

ಅಂದಿನ 113 ರೂಪಾಯಿ 1 ಲಕ್ಷಕ್ಕೆ ಸಮ:ಈ ಬಿಲ್ ಅನ್ನು ಇನ್​ಸ್ಟಾಗ್ರಾಮ್​​ನಲ್ಲಿ ‘Zindagi Gulzar Hai’ ಹೆಸರಿನ ಪುಟದಿಂದ ಹಂಚಿಕೊಳ್ಳಲಾಗಿದೆ. ಕೆಲವು ದಿನಗಳ ಹಿಂದೆ ವೈರಲ್ ಆಗಿದ್ದ ಈ ಪೋಸ್ಟ್ ಅನ್ನು ಇದುವರೆಗೆ ಲಕ್ಷಗಟ್ಟಲೆ ಜನರು ನೋಡಿ ಕಾಮೆಂಟ್ ಮಾಡಿದ್ದಾರೆ.
A post shared by ज़िन्दगी गुलज़ार है ! (@zindagi.gulzar.h)
ಆಗ 113 ರೂ ಇದ್ದರೆ 1 ಲಕ್ಷಕ್ಕೆ ಸಮ. ಆಗ ದಿನದ ಕೂಲಿ 10-20 ಪೈಸೆ. ಜನರು ಇಷ್ಟು ಹಣ ಸಂಗ್ರಹಿಸಲು 3-4 ವರ್ಷಗಳು ಬೇಕಾಗುತ್ತಿತ್ತು. ಆಗ ಜನರ ಸಂಬಳವೂ 10-20 ರೂ ಆಗಿತ್ತು ಎಂದು ಕಾಮೆಂಟ್​​ ಮಾಡಿದ್ದಾರೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:8 + four =
Remember me
