ಕೊಚ್ಚಿ:ಚಪ್ಪಲಿ ಒಲಿಯುವುದು ಹಾಗೂ ಶೂ ಕ್ಲೀನ್​ ಮಾಡುವ ಕೆಲಸ ಎಂದರೆ ಮೂಗು ಮುರಿಯುವವರೇ ಹೆಚ್ಚು. ಈ ಕೆಲಸ ಮಾಡುವರನ್ನು ಸಮಾಜ ನೋಡುವ ದೃಷ್ಟಿಯೇ ಬೇರೆ ರೀತಿ ಇರುತ್ತದೆ. ಆದರೆ, ಯಾವ ಕೆಲಸವೂ ಕೀಳಲ್ಲ ಎಂಬ ಮಾತು ನೆನಪಿರಬೇಕು. ಶೂ ಕ್ಲೀನ್​ ಮಾಡಿಯೂ ಲಕ್ಷಾಂತರ ರೂಪಾಯಿ ದುಡಿಯಬಹುದು ಎಂಬುದಕ್ಕೆ ಕೇರಳ ಮೂಲದ ಈ ಯುವತಿ ತಾಜಾ ನಿದರ್ಶನವಾಗಿದ್ದಾರೆ.
ಕೃಷ್ಣ ಎಂಬಾಕೆ ಕೇರಳದ ಫೋರ್ಟ್​ ಕೊಚ್ಚಿ ನಿವಾಸಿ. ಕೆಸರು ಹಾಗೂ ಕೊಳಕಿನಿಂದ ಕೂಡಿದ ಶೂಗಳನ್ನು ಒಂದೇ ಒಂದು ಕಲೆ ಇಲ್ಲದಂತೆ ನೀಟಾಗಿ ಕ್ಲೀನ್​ ಮಾಡಿ ವಾಪಸ್​ ಕೊಡುವುದೇ ಕೃಷ್ಣಳ ಕೆಲಸ. 25 ವರ್ಷದ ಕೃಷ್ಣ ಹಿಧ ದಿ ಶೋ ಶೈನಿ ಹೆಸರಿನ ಕಂಪನಿಯನ್ನು ನಡೆಸುತ್ತಿದ್ದು, ತಿಂಗಳಿಗೆ 1.20 ಲಕ್ಷ ರೂ. ಆದಾಯ ತೆಗೆಯುತ್ತಿದ್ದಾರೆ. ಸಿನಿಮಾ ಕಲಾವಿದರು ಹಾಗೂ ಉದ್ಯಮಿಗಳು ಕೂಡ ಕೃಷ್ಣಳ ಗ್ರಾಹಕರಾಗಿದ್ದಾರೆ.
ಇಂಟಿರಿಯರ್​​​ ಡಿಸೈನ್​ನಲ್ಲಿ ಪದವಿ ಪಡೆದ ಕೃಷ್ಣ, ಸಿನಿಮೋಟೋಗ್ರಫಿ ಮತ್ತು ಫೋಟೋಗ್ರಫಿ ಪ್ರಯತ್ನಿಸಿದಳು. ಆದರೆ, ಅಂದುಕೊಂಡಂತಹ ಸಕ್ಸಸ್​ ಪಡೆಯಲಿಲ್ಲ. ಈ ವೇಳೆ ಆಕೆಯ ಫ್ರೆಂಡ್​ ‘ಶೂ ಲಾಂಡ್ರಿ’ಯ ಐಡಿಯಾ ಕೊಟ್ಟರು. ವಿದೇಶಗಳಲ್ಲಿ ಇದು ತುಂಬಾ ಸಾಮಾನ್ಯ. ಇದಾದ ಬಳಿಕ ಯೂಟ್ಯೂಬ್​ ನೋಡಿ ಶೂ ಲಾಂಡ್ರಿ ಬಗ್ಗೆ ಕಲಿತುಕೊಂಡಳು. ಇದಾದ ಬಳಿಕ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೂ ಲಾಂಡ್ರಿಯ ಬಗ್ಗೆ ವಿಡಿಯೋ ಒಂದನ್ನು ಪೋಸ್ಟ್​ ಮಾಡಿದರು. ಆಕೆಯ ವಿಡಿಯೋ ವೈರಲ್​ ಆದ್ದಂತೆ ಅನೇಕರು ಆಕೆಯನ್ನು ಸಂಪರ್ಕಿಸಲು ಶುರು ಮಾಡಿದರು. ಇದಾದ ಬಳಿಕ ಹಿಧ ದಿ ಶೂ ಶೈನಿ ಹುಟ್ಟಿಕೊಂಡಿತು.
ಬ್ಯಾಂಕ್​ನಿಂದ ಸಾಲ ಪಡೆದು ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಕೃಷ್ಣ ಶೂ ಲಾಂಡ್ರಿ ಸೆಟಪ್​ ಅಳವಡಿಸಿದರು. ಇದಾದ ಬಳಿಕ ತಾನು ಖರ್ಚು ಮಾಡಿದ ಹಣವನ್ನು ಕೇವಲ ಎರಡೇ ತಿಂಗಳಲ್ಲಿ ಕೃಷ್ಣ ಮರಳಿ ಪಡೆದರು. ಇದೀಗ ಥಿರುವಳ್ಳ, ವೈಪಿನ್​ ಮತ್ತು ಇತರೆ ಜಿಲ್ಲೆಗಳಲ್ಲಿ ಶಾಖೆಗಳನ್ನು ತೆರೆಯಲು ಕೃಷ್ಣ ಪ್ಲ್ಯಾನ್​ ಮಾಡಿದ್ದಾರೆ. ಇಷ್ಟೇ ಅಲ್ಲದೆ, ನ್ಯೂಜಿಲೆಂಡ್​ ಮತ್ತು ಯುಎಇನಲ್ಲೂ ಶಾಖೆ ತೆರೆಯಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ನಟಿ ನಜ್ರಿಯಾ ಕೂಡ ಗ್ರಾಹಕಿನಟಿಯರಾದ ನಜ್ರಿಯಾ ಮತ್ತು ಮರೀನಾ ಮೈಕೆಲ್, ಕೃಷ್ಣ ಅವರ ಶೂ ಲಾಂಡ್ರಿಯಲ್ಲಿ ಸಾಮಾನ್ಯ ಗ್ರಾಹಕರು. ಆರಂಭದಲ್ಲಿ ಇಲ್ಲಿ ಶೂಗಳನ್ನು ಮಾತ್ರ ಸ್ವಚ್ಛಗೊಳಿಸಲಾಗುತ್ತಿತ್ತು. ಈಗ, ಕ್ರಾಕ್ಸ್​, ಲೋಫರ್ಸ್​, ಸ್ಲೈಡ್ಸ್​, ಐಷಾರಾಮಿ ಬ್ಯಾಗ್ಸ್​ ಮತ್ತು ಸೂಟ್‌ಕೇಸ್‌ಗಳನ್ನು ಸಹ ಸ್ವಚ್ಛಗೊಳಿಸಲಾಗುತ್ತಿದೆ. ಪ್ರತಿದಿನ 15ಕ್ಕೂ ಹೆಚ್ಚು ಜೋಡಿ ಶೂಗಳನ್ನು ಕ್ಲೀನ್​ಗೆಂದು ತರಲಾಗುತ್ತಿದೆ.(ಏಜೆನ್ಸೀಸ್​)
ಮಹೇಶ್​ ಬಾಬು ವಿಗ್​ ಬಳಸುತ್ತಾರಾ? ಮೇಕಪ್​ ಮ್ಯಾನ್​ ಬಿಚ್ಚಿಟ್ಟ ಅಸಲಿ ಸಂಗತಿ ಇಲ್ಲಿದೆ ನೋಡಿ…

ಊರ್ವಶಿಗೆ ದುಬಾರಿ ಗಿಫ್ಟ್​ ಕೊಟ್ಟ ಹನಿಸಿಂಗ್! ಈ ಚಿನ್ನದ ಕೇಕ್​ ಬೆಲೆ ನಿಮ್ಮಿಂದ ಊಹಿಸಲು ಸಾಧ್ಯವಿಲ್ಲ

100 ಕೋಟಿ ರೂ. ಕೊಟ್ಟರು ಈ ಹೀರೋ ಜತೆ ನಟಿಸುವುದಿಲ್ಲವಂತೆ ನಯನತಾರಾ! ಯಾರು ಆ ನಟ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 16 =
Remember me
