ಪಾಟ್ನಾ:ಕೇರಳದಲ್ಲಿ ಗರ್ಭಿಣಿ ಆನೆ ‘ವಿನಾಯಕಿ’ ಪಟಾಕಿ ತಿಂದು ಮೃತಪಟ್ಟ ನೋವಿನ ಸಂಗತಿ ಇನ್ನೂ ಸುದ್ದಿಯಲ್ಲಿರುವಾಗಲೇ, ವ್ಯಕ್ತಿಯೊಬ್ಬ ತಮ್ಮ ಐದು ಕೋಟಿ ಆಸ್ತಿಯನ್ನು ಎರಡು ಆನೆಗಳ ಹೆಸರಿಗೆ ಬರೆದು ಸುದ್ದಿ ಮಾಡಿದ್ದಾರೆ.
ಬಿಹಾರ್​ ಮೂಲದ ಜಾನಿಪುರದ ಎರಾವತ್ (ಏಷಿಯನ್​ ಆನೆಗಳ ಪುನರ್ವಸತಿ ಮತ್ತು ವನ್ಯಜೀವಿಗಳ ಟ್ರಸ್ಟ್​) ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಅಖ್ತರ್ ಇಮಾಮ್ ಮೋತಿ ಮತ್ತು ರಾಣಿ ಹೆಸರಿನ ಎರಡು ಆನೆಗಳಲ್ಲಿ ಐದು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬರೆದಿದ್ದಾರೆ. ಕೃಷಿ ಭೂಮಿ, ಐಷಾರಾಮಿ ಕೊಟ್ಟಿಗೆ, ಮನೆ, ಬ್ಯಾಂಕ್ ಬ್ಯಾಲೆನ್ಸ್ ಎಲ್ಲವೂ ಸೇರಿ ಐದು ಕೋಟಿ ರೂಪಾಯಿ ಮೌಲ್ಯವಾಗಿದೆ.
ಇದನ್ನೂ ಓದಿ:ಮಾಜಿ ಕ್ರಿಕೆಟಿಗಿನ ಶವ ಮನೆಯಲ್ಲಿಯೇ ಸಿಕ್ಕಿತು ಕೊಳೆತ ಸ್ಥಿತಿಯಲ್ಲಿ!
ಅಪಾರ ಆಸ್ತಿಗಳ ಒಡೆಯನಾಗಿರುವ ಅಖ್ತರ್​ ಅವರ ಮೇಲೆ ಪಿಸ್ತೂಲ್​ ಹಿಡಿದು ಬಂದ ದರೋಡೆಕೋರರ ಗುಂಪು ದಾಳಿ ನಡೆಸಿದ ಸಂದರ್ಭದಲ್ಲಿ, ಈ ಆನೆಗಳು ಅವರನ್ನು ಓಡಿಸಿ ಮಾಲೀಕನನ್ನು ರಕ್ಷಿಸಿದ್ದವು. ಅಖ್ತರ್​ ನಿದ್ದೆಯಲ್ಲಿದ್ದ ಸಮಯದಲ್ಲಿ ದರೋಡೆಕೋರರು ಬಂದಿದ್ದರು. ಅವರನ್ನು ಎಬ್ಬಿಸಿದ್ದ ಆನೆಗಳು ಕಳ್ಳರನ್ನು ಓಡಿಸಿದ್ದವು. ತನ್ನ ಜೀವ ಉಳಿಸಿದ ಈ ಪ್ರಾಣಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅಖ್ತರ್​ ಈ ಕೆಲಸ ಮಾಡಿದ್ದಾರೆ. ಕಳೆದ 12 ವರ್ಷಗಳಿಂದ ಆನೆಗಳ ಸೇವೆ ಮಾಡುತ್ತಾ ಬಂದಿದ್ದಾರೆ.
ಅಷ್ಟಕ್ಕೂ, ಅಖ್ತರ್​ ಅವರ ಬದುಕೇ ದುರಂತಮಯ. ಕೌಟುಂಬಿಕ ಕಲಹದಿಂದಾಗಿ ಇವರ ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳು 10 ವರ್ಷಗಳ ಹಿಂದೆ ಇವರಿಂದ ದೂರವಾಗಿದ್ದಾರೆ. ಇಷ್ಟೇ ಅಲ್ಲ. ತಮ್ಮ ತಂದೆಗೆ ಇನ್ನೊಬ್ಬಳ ಜತೆ ಸಂಬಂಧ ಇದೆ ಎಂಬ ಸುಳ್ಳು ಕಥೆ ಕಟ್ಟಿದ್ದ ಅವರ ಮಗ, ಅಪ್ಪನ ವಿರುದ್ಧವೇ ಕೇಸ್​ ದಾಖಲು ಮಾಡಿ ಜೈಲಿಗೆ ಅಟ್ಟಿದ್ದ. ನಂತರ ವಿಚಾರಣೆಯಿಂದ ಇದು ಸುಳ್ಳು ಕಥೆ ಎಂದು ತಿಳಿದು ಅಖ್ತರ್​ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ:ಬೈಕ್​ ಕದಿಯಲು ಬರುವೆ, ತಾಕತ್​ ಇದ್ರೆ ಹಿಡೀರಿ: ಪೊಲೀಸರಿಗೆ ಕಳ್ಳನ ಸವಾಲ್​!
ಗಂಡು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎನ್ನುವ ಕಾರಣಕ್ಕೆ ಅವರ ಹೆಸರಿಗೆ ಯಾವುದೇ ಆಸ್ತಿ ಬರೆಯದ ಅಖ್ತರ್​, ತಮ್ಮ ಪತ್ನಿಯ ಹೆಸರಿಗೆ ತಮ್ಮ ಅರ್ಧ ಆಸ್ತಿಯನ್ನು ಬರೆದಿದ್ದಾರೆ. ಆದರೆ ಐದು ಕೋಟಿಯನ್ನು ಆಸ್ತಿಯನ್ನು ಆನೆಗಳ ಹೆಸರಿಗೆ ಮಾಡಿದ ಮೇಲೆ ಇನ್ನಷ್ಟು ಬೆದರಿಕೆ ಬರುತ್ತಿವೆ ಎಂದು ಅಖ್ತರ್​ ಹೇಳಿಕೊಂಡಿದ್ದಾರೆ. ಸಾಲದು ಎಂಬುದಕ್ಕೆ ಆನೆಗಳ ಮೇಲಿನ ಸಿಟ್ಟಿನಲ್ಲಿ ಅವರ ಮಗ, ಕಳ್ಳಸಾಗಣೆ ಮೂಲಕ ಅವುಗಳ ಮಾರಾಟಕ್ಕೆ ಮುಂದಾಗಿದ್ದ. ಅದನ್ನು ಅಖ್ತರ್​ ಹೇಗೋ ತಡೆದು ಆನೆಗಳನ್ನು ರಕ್ಷಿಸಿದ್ದಾರೆ.
ತಮ್ಮ ಬದುಕಿನ ಬಗ್ಗೆ ಯಾವುದೇ ನಿಶ್ಚಿತತೆ ಇಲ್ಲ ಎಂದಿರುವ ಅಖ್ತರ್​, ತಮ್ಮ ಸಾವಿನ ಬಳಿಕ ಈ ಆನೆಗಳನ್ನು ನೋಡಿಕೊಳ್ಳಲು ಹಣವನ್ನು ಬಳಸಿಕೊಳ್ಳುವಂತೆ ‘ಎರಾವತ್’ಗೆ ಮನವಿ ಮಾಡಿಕೊಂಡಿದ್ದಾರೆ.(ಏಜೆನ್ಸೀಸ್​)
ರಿಯಲ್​ ಲೈಫ್​ ಹೀರೋ: ವಲಸೆ ಕಾರ್ಮಿಕರಿಗಾಗಿ ಸಿದ್ಧವಾಯ್ತು ಆರು ವಿಮಾನ, 10 ಬಸ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 1 =
Remember me
