ಚೆನ್ನೈ:ಸಂಚಾರಿ ನಿಯಮ ಉಲ್ಲಂಘನೆಯ ನೆಪದಲ್ಲಿ ಪೊಲೀಸರು ಪದೇಪದೆ ಬೈಕ್​ ಸವಾರರನ್ನು ತಡೆದರೆ ಅದೊಂದು ರೀತಿಯಲ್ಲಿ ಕೆಟ್ಟ ಸುದ್ದಿ ಎನ್ನಬಹುದು. ಆದರೆ, ಇಲ್ಲಿ ಬೈಕ್​ ಸವಾರನನ್ನು ತಡೆದ ತಮಿಳುನಾಡು ಪೊಲೀಸ್​, ಸವಾರನಿಗೆ ಪರೋಪಕಾರಿಯಾಗುವ ಅವಕಾಶವನ್ನು ನೀಡಿದ್ದು, ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋ ಹೃದಯ ಮುಟ್ಟುವಂತಿದೆ.
ವಿವರಣೆಗೆ ಬರುವುದಾದರೆ, ಬೈಕ್​ ಸವಾರ ತಮಿಳುನಾಡಿನ ತೆಂಕಾಸಿ ಹೋಗುತ್ತಿರುತ್ತಾನೆ. ಅಂದಹಾಗೆ ಈ ವಿಡಿಯೋವನ್ನು ಅನ್ನಿಅರುಣ್​ (AnnyArun) ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ಅಪ್​ಲೋಡ ಮಾಡಲಾಗಿದೆ. ವಿಡಿಯೋದಲ್ಲಿ ಬೈಕ್​ ಸವಾರನ್ನು ತಡೆಯುವ ಪೊಲೀಸ್​, ನೀನು ಕರ್ನಾಟಕದವನಾ? ಎಂದು ಪ್ರಶ್ನಿಸುತ್ತಾರೆ. ಬೈಕ್​ ಸವಾರ ಹೌದು ಎನ್ನುತ್ತಾನೆ.
ಇದನ್ನೂ ಓದಿರಿ:ಅಕ್ಕಿ ಪಡೆಯಲು ಬಾಗಿಲು ತೆಗೆದ ಯುವತಿಯನ್ನ ಬೆತ್ತಲೆ ಮಾಡಿ ಚಿತ್ರೀಕರಿಸಿದ! ಮುಂದೆ ಆಗಿದ್ದೆಲ್ಲವೂ ಅವಾಂತರ
ಬಳಿಕ ಪೊಲೀಸ್​ ಪೇದೆ ಮಾತನಾಡಿ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ತಮಿಳುನಾಡು ಸಾರಿಗೆ ಬಸ್​ ಅನ್ನು ತೋರಿಸಿ, ನೋಡು ಆ ಬಸ್ಸಿನಲ್ಲಿದ್ದ ಹಿರಿಯ ಮಹಿಳೆ ತನ್ನ ಔಷಧಿಯ ಬಾಟಲ್​ ಅನ್ನು ಬೀಳಿಸಿಕೊಂಡಿದ್ದಾರೆ. ನೀನು ಬಸ್​ ಚೇಸ್​ ಮಾಡಿ ಈ ಔಷಧವನ್ನು ಆ ಅಜ್ಜಿಗೆ ತಲುಪಿಸುಬಿಡು ಎನ್ನುತ್ತಾರೆ.
ಔಷಧ ತೆಗೆದುಕೊಳ್ಳುವ ಬೈಕ್​ ಸವಾರ ಬಸ್​ ಚೇಸ್​ ಮಾಡಿ ಡ್ರೈವರ್​ ಪಕ್ಕಕ್ಕೆ ತೆರಳಿ ಸ್ವಲ್ಪ ಬಸ್​ ನಿಲ್ಲಿಸುವಂತೆ ಕೇಳಿಕೊಳ್ಳುತ್ತಾನೆ. ಬಳಿಕ ಡ್ರೈವರ್​ ಬಸ್​ ನಿಲ್ಲಿಸಿದಾಗ ಔಷಧ ಬಾಟಲ್​ ತೆಗೆದು ಅದನ್ನು ಕಳೆದುಕೊಂಡ ಮಹಿಳೆಗೆ ಕೊಡುತ್ತಾನೆ.

ಇನ್ನು ವಿಡಿಯೋವನ್ನು 3 ದಿನಗಳ ಹಿಂದೆ ಯೂಟ್ಯೂಬ್​ನಲ್ಲಿ ಶೇರ್​ ಮಾಡಲಾಗಿದೆ. ಈಗಾಗಲೇ ವಿಡಿಯೋವನ್ನು 2 ಲಕ್ಷ 70 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, 5 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿರುವ ಬಹುತೇಕರು ಉತ್ತಮ ಕ್ಷಣಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕನ್ನಡಿಗರು ಮತ್ತು ತಮಿಳಿಗರ ಪಾಲಿಗೆ ಈ ವಿಡಿಯೋ ವಿಶೇಷ ಅರ್ಥವನ್ನು ನೀಡಿದೆ.(ಏಜೆನ್ಸೀಸ್​)
ಇದನ್ನೂ ಓದಿರಿ:ಅಕ್ರಮ ಸಂಬಂಧಕ್ಕೆ ತಿರುಗಿದ ಮದುವೆ ಸಮಾರಂಭದಲ್ಲಿನ ಪರಿಚಯ: ಎರಡೇ ವರ್ಷದಲ್ಲಿ ನಡೆಯಿತು ಹೀನ ಕೃತ್ಯ
ನಾನು ಗೆದ್ರೆ ಚಂದ್ರನಲ್ಲಿಗೆ ಟ್ರಿಪ್‌, ಹೆಲಿಕಾಪ್ಟರ್‌-ಮೂರಂತಸ್ತಿನ ಬಂಗ್ಲೆ ಕೊಡುವೆ… ಪ್ರಣಾಳಿಕೆ ನೋಡಿ ಹುಬ್ಬೇರಿಸಿದ್ರು, ಕಾರಣ ಕೇಳಿ ಭೇಷ್ ಎಂದ್ರು!

ಪತ್ನಿಯ ಗುಪ್ತಾಂಗಕ್ಕೆ ಮದ್ಯದ ಬಾಟಲಿ ನುಗ್ಗಿಸಿದ ಪತಿ: ಕಾರಣ ಕೇಳಿದ್ರೆ ಇವನೆಂಥಾ ನೀಚ ಅನಿಸದೇ ಇರದು!

9 ತಿಂಗಳ ಹಿಂದೆ ಫೇಸ್​ಬುಕ್​ನಲ್ಲಿ ಶುರುವಾದ ಪ್ರೀತಿ ದುರಂತ ಅಂತ್ಯ: ಯುವಜೋಡಿಗೆ ಮುಳುವಾಗಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + ten =
Remember me
