ನಾಗ್ಪುರ:ದೇಶದ ಒಂದಲ್ಲ ಒಂದು ಕಡೆಯಿಂದ ಬಾಣಸಿಗರ ಕೈಚಳಕ ವಿಡಿಯೋಗಳು ಆಗಾಗ ವೈರಲ್​ ಆಗುತ್ತಲೇ ಇರುತ್ತವೆ. ಕೆಲವರು ತಯಾರಿಸುವ ತಿಂಡಿ-ತಿನಿಸುಗಳ ರುಚಿಗಿಂತ ಅವರು ಅದನ್ನು ಮಾಡುವ ಪರಿಗೇ ಜನರು ಮಾರುಹೋಗುತ್ತಾರೆ. ಇಲ್ಲೊಬ್ಬ ಚಾಯ್​ವಾಲಾ​ ಅದೇ ರೀತಿ ತನ್ನ ಕೈಚಳಕದಿಂದಲೇ ಹಲವರ ಗಮನ ಸೆಳೆಯುತ್ತಿದ್ದು, ಅದರ ಝಲಕ್​ನ ವಿಡಿಯೋ ತುಣುಕು ವೈರಲ್ ಆಗಲಾರಂಭಿಸಿದೆ.
ಡಾಲಿ ಎಂಬ ಹೆಸರಿನ ಈತ ‘ಡಾಲಿ ಕಿ ಟಪ್ರಿ’ ಎಂಬ ಟೀ ಅಂಗಡಿ ನಡೆಸುತ್ತಿದ್ದು, ಈತ ಟೀ ಮಾಡುವ ಸ್ಟೈಲ್​ ಮಾತ್ರವಲ್ಲ, ಗ್ರಾಹಕರ ಕೈಗೆ ಚಿಲ್ಲರೆ ಕೊಡುವುದರಲ್ಲೂ ಡಿಫರೆಂಟ್ ಎನಿಸಿಕೊಂಡಿದ್ದಾನೆ. ಚಹಾ ಮಾಡಲು ಸಲುವಾಗಿ ಪಾತ್ರೆಗೆ ಹಾಲನ್ನು ಹಾಕುವುದಿರಲಿ, ಬಳಿಕ ಚಹಾವನ್ನು ಹಾಲಿಗೆ ಸುರಿಯುವುದಷ್ಟೇ ಅಲ್ಲ, ಚಿಲ್ಲರೆ ಮರಳಿಸುವುದರಲ್ಲೂ ಕೂಡ್ ಫುಲ್​ ಸ್ಟೈಲ್​.
ಇದನ್ನೂ ಓದಿ:ಒಬ್ಬನಿಗೆ ಒಂದೇ ಸಲಕ್ಕೆ ಅಷ್ಟೆಲ್ಲ ಮಾಡಲಿಕ್ಕೆ ಸಾಧ್ಯವಿಲ್ಲ; ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿದ ಹೈಕೋರ್ಟ್​ ಅಭಿಪ್ರಾಯವಿದು…
ಗ್ರಾಹಕರಿಂದ ಹಣ ಪಡೆಯುವ ಮೊದಲೇ ಚಿಲ್ಲರೆ ಎಣಿಸಿಟ್ಟುಕೊಂಡು ಥಟ್ ಅಂತ ಅವರ ಕೈಗಿಟ್ಟು, ಹಣ ಸ್ವೀಕರಿಸುವ ಮೂಲಕವೂ ಈತ ತನ್ನ ಕೈಚಳಕ ಮೆರೆಯುತ್ತಿದ್ದಾನೆ. ಅಂದಹಾಗೆ ಈತನ ಕೈಚಳಕ, ಚಹಾ ಮಾಡುವ, ಕೊಡುವ ಸ್ಟೈಲ್​ ಬಗ್ಗೆ ಕೇಳಿದರೆ, ದಕ್ಷಿಣಭಾರತದ ಸಿನಿಮಾಗಳನ್ನು ನೋಡಿ ನೋಡಿಯೇ ಹೀಗಾಗಿದ್ದೇನೆ ಎನ್ನುತ್ತಾನೆ. ಜತೆಗೆ ತಾನು ಸ್ಟೈಲ್​ಕಿಂಗ್ ರಜನಿಕಾಂತ್​ ಅಭಿಮಾನಿ ಎಂದೂ ಹೇಳುತ್ತಾನೆ.
ನಾಗ್ಪುರದ ಸದರ್​ನ ರವೀಂದ್ರನಾಥ್​ ಠಾಗೋರ್​ ಮಾರ್ಗದಲ್ಲಿ ಈತ ‘ಡಾಲಿ ಕಿ ಟಪ್ರಿ’ ಎಂಬ ಚಹಾದಂಗಡಿಯನ್ನು 20 ವರ್ಷಗಳಿಂದ ನಡೆಸುತ್ತಿದ್ದಾನೆ. ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ತೆರೆದಿರುವ ಈ ಟೀ ಅಂಗಡಿಯಲ್ಲಿ ಈತನ ಚಹಾ ತಯಾರಿಯ ಕೌಶಲ ಹಾಗೂ ಕೈಚಳಕವೇ ಗ್ರಾಹಕರನ್ನು ಸೆಳೆಯುವ ಪ್ರಮುಖ ಆಕರ್ಷಣೆ. (ಏಜೆನ್ಸೀಸ್)
ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್​ ಕ್ಲಿಕ್ ಮಾಡಿ..
https://www.facebook.com/VVani4U/videos/630836537693352
ಬೈಕ್​ ಸವಾರರಿಗೆ ಬರಲಿದೆ ಪೆಟ್ರೋಲ್​ ಉಳಿಸುವ ಸ್ಮಾರ್ಟ್​ ಹೆಲ್ಮೆಟ್​..!

Video| ಸ್ಟ್ಯಾಚ್ಯು ಇಡುವುದೇ ದೊಡ್ಡ ಕತೆ, ಆಫೀಸ್ ಬೇರೆ ಮಾಡ್ಬೇಕಾ?: ಡಾ.ರಾಜ್​ ಕುರಿತು ನಾಲಿಗೆ ಹರಿಬಿಟ್ಟ ಶಾಸಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − eight =
Remember me
