ನವದೆಹಲಿ :ಬಿಗ್ ಬಾಸ್​ ಶೋಗೂ ಈಕೆಗೂ ಅದೇನೋ ನಂಟು! 2006 ರಲ್ಲಿ ಹಿಂದಿ ಬಿಗ್ ಬಾಸ್ ಸರಣಿಯ ಮೊದಲನೇ ಕಂತು ಬಂದಾಗ ಅದರಲ್ಲಿ ಭಾಗಿಯಾಗಿ ಭಾರೀ ಸುದ್ದಿ ಮಾಡಿದ್ದಳು. ಇತ್ತೀಚೆಗೆ ಪೂರೈಸಿದ ಬಿಗ್ ಬಾಸ್ 14 ರಲ್ಲೂ ಚಾಲೆಂಜರ್ ಆಗಿ ವಾಪಸ್ ಬಂದಿದ್ದಳು. ಯಾರೆಂದು ಗೊತ್ತಾಯಿತೇ? ಹೌದು, ಇದು ನಟಿ ಮತ್ತು ರೂಪದರ್ಶಿಯಾದ ರಾಖಿ ಸಾವಂತ್.
ನಲವತ್ತೆರಡು ವರ್ಷ ವಯಸ್ಸಿನ ರಾಖಿ, ಇತ್ತೀಚೆಗೆ ತಮ್ಮ ಇನ್ಸ್​ಸ್ಟಾಗ್ರಾಂ ಖಾತೆಯಲ್ಲಿ ಕೆಲವು ಹಳೆಯ ಫೋಟೋಗಳನ್ನು ಶೇರ್ ಮಾಡಿದ್ದರು. ಅವುಗಳಲ್ಲಿ ತಮ್ಮ ಮಗುವಾಗಿನ ಫೋಟೋ ಜೊತೆಗೆ ಮಾಡೆಲ್ಲಿಂಗ್ ದಿನಗಳ ಫೋಟೋಗಳೂ ಇದ್ದವು. ಎಷ್ಟೋ ಚಿತ್ರಗಳಲ್ಲಿ ಅವರನ್ನು ಗುರುತು ಹಿಡಿಯುವುದೂ ಕಷ್ಟವಾಗಿತ್ತು. ಈ ಆಲ್ಬಂನೊಂದಿಗೆ ರಾಖಿ, “ಬಾಲ್ಯದಿಂದ ಇಲ್ಲಿನವರೆಗಿನ ಪಯಣ.. ನನ್ನ ಜೀವನದಲ್ಲಿ ಏಳುಬೀಳುಗಳನ್ನು ಕಂಡಿರುವ ಬಗ್ಗೆ ನನಗೆ ಸಂತೋಷವಿದೆ” ಎಂದು ಬರೆದಿದ್ದರು.
A post shared by Rakhi Sawant (@rakhisawant2511)

ರಾಖಿ ಸಾವಂತ್, 2006 ರಲ್ಲಿ ಮೊದಲ ಬಾರಿ ಬಿಗ್ ಬಾಸ್ ಮನೆಗೆ ಬಂದಾಗ ತಮ್ಮ ವಿಭಿನ್ನ ಶೈಲಿಗಳಿಂದ ಪ್ರೇಕ್ಷಕರ ಗಮನ ಸೆಳೆದಿದ್ದರು. ಇದೀಗ ಬಿಗ್ ಬಾಸ್ 14 ಸರಣಿಯಲ್ಲಿ ಭಾಗವಹಿಸಿದ ಹಲವಾರು ಸೆಲೆಬ್ರಿಟಿಗಳೊಂದಿಗೆ ಚಾಲೆಂಜರ್ ಆಗಿ ಪುನಃ ಎಂಟ್ರಿ ಕೊಟ್ಟಿದ್ದರು. 2021 ರ ಫೆಬ್ರವರಿ 21 ರ ಕೊನೆಯ ಎಪಿಸೋಡ್​ನ ದಿನ ಆಕೆ 14 ಲಕ್ಷ ರೂಪಾಯಿ ಪಡೆದು ಶೋನಿಂದ ಹೊರಬಂದರು. ಈ ಹಣವನ್ನು ಗೆದ್ದ ಸದಸ್ಯರಿಂದ ಮುಂಚಿನ ಒಂದು ಟ್ಯಾಸ್ಕ್ ಸಮಯದಲ್ಲಿ ಕಡಿತಗೊಳಿಸಲಾಗಿತ್ತು. ತಮ್ಮ ತಾಯಿಗೆ ಕ್ಯಾನ್ಸರ್ ಚಿಕಿತ್ಸೆ ಮಾಡಿಸುತ್ತಿರುವ ರಾಖಿ ಈ ಹಣವನ್ನೂ ಅದಕ್ಕಾಗೇ ಬಳಸುವುದಾಗಿ ಹೇಳಿದ್ದರು.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಶಾಲಾ ಕಾಲೇಜುಗಳು ಬಂದ್, 11 ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ
ಎರಡು ಮಕ್ಕಳ ತಂದೆಯನ್ನು ಮದುವೆಯಾದಳು, ತನ್ನದೇ ಮಗು ಹುಟ್ಟಿದಾಗ ಮೆಟರ್ನಿಟಿ ಲೀವ್ ಕೇಳಿದಳು… ಹೈಕೋರ್ಟ್ ಏನು ಹೇಳಿತು ನೋಡಿ…
ನಿಯಮ ಪಾಲಿಸದ ಪ್ರಯಾಣಿಕರನ್ನು ಕೆಳಗಿಳಿಸಿದ ಏರ್ ಏಷಿಯಾ; ಮಾಸ್ಕ್ ಸರಿಯಾಗಿ ಧರಿಸದ 6 ಪ್ರಯಾಣಿಕರು ಭದ್ರತಾ ಪಡೆ ವಶಕ್ಕೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 9 =
Remember me
