ಬಿಹಾರ:ಜೆಡಿಯು ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ಇದೀಗ 9ನೇ ಬಾರಿಗೆ ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಮುಖೇನ ದಾಖಲೆ ನಿರ್ಮಿಸಿದ್ದಾರೆ. ಆರ್​ಜೆಡಿ ಜತೆಗೂಡಿ ಸರ್ಕಾರ ರಚಿಸಿದ್ದ ನಿತೀಶ್, ಈಗ ಮಹಾಘಟಬಂಧನ್​ನಿಂದ ಹೊರಬಂದಿದ್ದು, ಈ ಮೂಲಕ ಬಿಹಾರ ರಾಜ್ಯ ರಾಜಕೀಯದಲ್ಲಿ ಭಾರೀ ಕೋಲಾಹಲವನ್ನು ಸೃಷ್ಟಿಸಿದ್ದಾರೆ.
ಇದನ್ನೂ ಓದಿ:ಕಾಲೇಜು ಶಿಕ್ಷಕನನ್ನು ಕೊಠಡಿಯೊಳಗೆ ಕೂಡಿ ಬೆಂಕಿಯಿಟ್ಟ ದುಷ್ಕರ್ಮಿಗಳು! ಸುಟ್ಟ ಗಾಯಗಳಿಂದ ವ್ಯಕ್ತಿ ಬಲಿ
ಮಹಾಘಟಬಂಧನ್​ನಿಂದ ಹೊರಬಂದ ನಿತೀಶ್​ ಕುಮಾರ್​ ಇದೀಗ ಬಿಜೆಪಿ ಜತೆಗೆ ಕೈಜೋಡಿಸಿ ಸರ್ಕಾರ ರಚಿಸಿದ್ದಾರೆ. 9ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್, ಈ ವೇಳೆ ಕಾರ್ಯಕರ್ತರ ಸಂತಸಕ್ಕೆ ಕಾರಣರಾದರು. ನಿತೀಶ್​ ಅವರ ಪ್ರಮಾಣ ವಚನದ ಬೆನ್ನಲ್ಲೇ ಬಿಜೆಪಿಯ ವಿಜಯ್ ಕುಮಾರ್ ಸಿನ್ಹಾ ಹಾಗೂ ಸಾಮ್ರಾಟ್ ಚೌಧರಿ ಡಿಸಿಎಂ ಆಗಿ ಪ್ರಮಾಣ ವಚನ ಪಡೆದರು.
VIDEO | "Nitish Kumar's decision is a great setback for the INDIA bloc. His decision is for the development of Bihar. This decision is very challenging for Congress. It is not right to call him 'Paltu Ram'. Certain decisions have to be made at the right time, and he did it," says…pic.twitter.com/k5DEMqshLz
— Press Trust of India (@PTI_News)January 29, 2024

ಈ ವಿಚಾರಗಳು ರಾಜಕೀಯ ವಲಯದಲ್ಲಿ ಹಲವು ತಿರುವು ಪಡೆಯುತ್ತಿದ್ದಂತೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರಾಮದಾಸ ಅಠವಳೆ, “ನಿತೀಶ್ ಕುಮಾರ್ ನಿರ್ಧಾರ ಇಂಡಿಯಾ ಒಕ್ಕೂಟಕ್ಕೆ ದೊಡ್ಡ ಹೊಡೆತವಾಗಿದೆ. ಅವರ ಈ ನಿರ್ಧಾರ ಬಿಹಾರದ ಅಭಿವೃದ್ಧಿಗೆ ಹೆಚ್ಚು ಮೀಸಲಾಗಲಿದೆ.
ಇದನ್ನೂ ಓದಿ:ದರ್ಶನ್ ಬಗ್ಗೆ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಈ ರೀತಿ ಉತ್ತರಿಸಿದ ಸುದೀಪ್
ಇದು ಈಗ ಕಾಂಗ್ರೆಸ್‌ಗೆ ದೊಡ್ಡ ಸವಾಲು. ಅವರನ್ನು ‘ಪಲ್ಟು ರಾಮ್’ ಎಂದು ಕರೆಯುವುದು ಸರಿಯಲ್ಲ. ಕಾರಣ ಕೆಲವು ನಿರ್ಧಾರಗಳನ್ನು ನಾವು ಪರಿಗಣಿಸಬೇಕಾಗಿದೆ. ಸರಿಯಾದ ಸಮಯಕ್ಕೆ ಕೆಲವು ನಿರ್ಣಯಗಳನ್ನು ಮಾಡಬೇಕು ಅದನ್ನು ನಿತೀಶ್ ಈಗ ಮಾಡಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ,(ಏಜೆನ್ಸೀಸ್).
ಕಡೆಗೂ ಈಡೇರಿತು ಕಾರ್ತಿಕ್​ ಕನಸು! ಪ್ರೀತಿಯ ತಾಯಿಗೆ ದೇವಸ್ಥಾನ ಕಟ್ಟಿಕೊಡಲು ಮುಂದಾದ ಸೀಸನ್​ 10ರ ವಿಜೇತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − five =
Remember me
