ಮುಂಬೈ:ಗಣೇಶ ಚತುರ್ಥಿ ದಿನ ದೇಶಾದ್ಯಂತ ಹಲವೆಡೆ ನಾನಾ ರೀತಿಯ ಗಣೇಶನನ್ನು ಕೂರಿಸುತ್ತಾರೆ. ಆ ಪೈಕಿ ಈತ ಅಂತ್ಯಂತ ಶ್ರೀಮಂತ ಗಣೇಶ. ಏಕೆಂದರೆ ಈ ಗಣೇಶನ ಅಲಂಕಾರಕ್ಕೇ 69 ಕೆ.ಜಿ. ಚಿನ್ನ ಹಾಗೂ 336 ಕೆ.ಜಿ. ಬೆಳ್ಳಿ ಬಳಸಲಾಗಿದೆ.
ಹೌದು.. ಮುಂಬೈನ ಅತ್ಯಂತ ದೊಡ್ಡ ಗಣೇಶ ಎನ್ನಲಾದ ಕಿಂಗ್ಸ್​ ಸರ್ಕಲ್​​ನ ಈ ಗಣಪತಿಗೆ ಹೀಗೆ ಚಿನ್ನ-ಬೆಳ್ಳಿಯಲ್ಲಿ ಭರ್ಜರಿಯಾಗಿ ಅಲಂಕಾರ ಮಾಡಲಾಗಿದೆ. ಜಿಎಸ್​​ಬಿ ಸೇವಾ ಮಂಡಲದವರು ಅದ್ಧೂರಿಯಾಗಿ ವರ್ಷಂಪ್ರತಿ ಆಚರಿಸುವ ಈ ಗಣೇಶ ಉತ್ಸವ ಪ್ರಸಿದ್ಧಿ ಪಡೆದಿದ್ದು, ಪ್ರತಿ ವರ್ಷವೂ ದೇಶದ ಗಮನ ಸೆಳೆಯುತ್ತದೆ.
ಈ ಗಣೇಶನಿಗೆ ವೈಭವೋಪೇತ ಅಲಂಕಾರ ಮಾಡಲಾಗುತ್ತಿದ್ದು, ಈ ಸಲ ಅಲಂಕಾರಕ್ಕೆಂದೇ 69 ಕೆ.ಜಿ. ಚಿನ್ನ ಹಾಗೂ 336 ಕೆ.ಜಿ. ಬೆಳ್ಳಿ ಬಳಸಲಾಗಿದೆ. ದುಬಾರಿ ಅಲಂಕಾರ ಮತ್ತಿತರ ಕಾರಣಗಳಿಂದಾಗಿ ಈ ಗಣೇಶನಿಗೆ ಪ್ರತಿವರ್ಷ ವಿಮೆ ಕೂಡ ಮಾಡಿಸಲಾಗಿದ್ದು, ಈ ಬಾರಿಯ ವಿಮೆ ಮೊತ್ತವೇ 360 ಕೋಟಿ ರೂಪಾಯಿ. ಕಳೆದ ವರ್ಷ 316 ಕೋಟಿ ರೂ. ವಿಮೆ ಮಾಡಿಸಲಾಗಿತ್ತು. ಈ ಸಲ ಸೆ.19ರಿಂದ 23ರವರೆಗೂ ಇಲ್ಲಿ ಗಣೇಶ ಚತುರ್ಥಿ ಉತ್ಸವ ಆಚರಣೆ ಆಗಲಿದೆ.
#WATCH| Maharashtra | 'Richest' Ganpati of Mumbai – by GSB Seva Mandal – installed for the festival of#GaneshChaturthi.
The idol has been adorned with 69 kg of gold and 336 kg of silver this year.pic.twitter.com/hR07MGtNO6
— ANI (@ANI)September 18, 2023

ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಯಜಮಾನ!; ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಸಿನಿಮಾಗಳಲ್ಲಿರುವ ಸಂದೇಶಗಳು..

ಮೀನನ್ನು ತಿಂದ ಈ ಮಹಿಳೆ ಕೈ-ಕಾಲು ಎರಡೂ ಕಳೆದುಕೊಂಡಳು: ಆಗಿದ್ದಾದರೂ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
