ಹೊಸದಿಲ್ಲಿ:ಬಟಿಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಬ್ಬರೇ ಒಬ್ಬರು ಶಿಕ್ಷಕಿ ಕಾರ್ಯನಿರ್ವಹಿಸುತ್ತಿದ್ದು, ಕೇವಲ ಒಬ್ಬ ವಿದ್ಯಾರ್ಥಿಗೆ ಮಾತ್ರ ಬೋಧನೆ ಮಾಡುವಂತ ಪರಿಸ್ಥಿತಿ ಎದುರಾಗಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಶಾಲೆಗೆ ಕೇವಲ ಒಂದೇ ಒಂದು ದಾಖಲಾತಿ ನಡೆದಿದ್ದು, ವ್ಯಾಸಂಗ ಮಾಡಲು ಉಳಿದ ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ ಎಂಬುದು ಶಿಕ್ಷಕಿ ಸರಬ್ಜಿತ್ ಕೌರ್ ಅಳಲು.
ಇದನ್ನೂ ಓದಿ:ಈ ರಾಶಿಯವರು ಹಣಕಾಸಿನ ಹೂಡಿಕೆ ಮಾಡಬಾರದು: ನಿತ್ಯಭವಿಷ್ಯ
ಈ ಸರ್ಕಾರಿ ಶಾಲೆಗೆ ಶಿಕ್ಷಕಿಯಾಗಿ ಕೆಲಸ ಪ್ರಾರಂಭಿಸಿದ ಸರಬ್ಜಿತ್ ಕೌರ್ ತಮ್ಮ ಮಾರ್ಗದರ್ಶನದಲ್ಲಿ ಓದಲು ಆಸಕ್ತಿ ತೋರಿ ದಾಖಲಾದ ಒಬ್ಬ ವಿದ್ಯಾರ್ಥಿಗೆ ಮಾತ್ರ ಸದ್ಯ ಬೋಧನೆ ಮಾಡುತ್ತಿದ್ದಾರೆ. ಈ ಬಗ್ಗೆ ಅತೀವ ಬೇಸರ ಹೊರಹಾಕಿರುವ ಶಿಕ್ಷಕಿ, ಇದಕ್ಕೆ ಕಾರಣವೇನು ಎಂಬುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ.
ಮೇ 2023ರಲ್ಲಿ ಶಾಲೆಗೆ ಆಗಮಿಸಿದ ಶಿಕ್ಷಕಿ, ಕೋಥೆ ಬುಧ್ ಸಿಂಗ್ ಗ್ರಾಮದ ಹಲವಾರು ಮನೆಗಳಿಗೆ ಭೇಟಿ ನೀಡಿ, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಪೋಷಕರ ಬಳಿ ಮನವಿ ಮಾಡಿದ್ದಾರೆ. ಆದ್ರೆ, ಸರ್ಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ ಪೋಷಕರು, ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ:ಅಜೇಯ ಭಾರತಕ್ಕೆ ಆಫ್ರಿಕಾ ಸವಾಲು: ಕಿರಿಯರ ವಿಶ್ವಕಪ್‌ನಲ್ಲಿ ಇಂದು ಮೊದಲ ಸೆಮಿಫೈನಲ್
“ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಸ್ಕೂಲ್ ಸೌಲಭ್ಯ ಇದ್ದರೂ ಕೂಡ ಪೋಷಕರು ಖಾಸಗಿ ಶಾಲೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಗ್ರಾಮದ ಹಲವು ಮನೆಗಳಿಗೆ ಭೇಟಿ ನೀಡಿ ಪಾಲಕರೊಂದಿಗೆ ಮಾತನಾಡಿ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಂತೆ ಮನವರಿಕೆ ಮಾಡಿದೆ. ಈ ಸರಕಾರಿ ಪ್ರಾಥಮಿಕ ಸ್ಮಾರ್ಟ್‌ ಶಾಲೆಯಲ್ಲಿ ಎಲ್ಲ ಸೌಲಭ್ಯಗಳಿವೆ, ಯಾವ ಕೊರತೆಯೂ ಇಲ್ಲ. ಆದ್ರೂ ಸಹ ಈಗಲೂ ಗ್ರಾಮಸ್ಥರು ಇದನ್ನು ಮರೆತು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ” ಎಂದು ಕೌರ್ ಬೇಸರ ಹೊರಹಾಕಿದ್ದಾರೆ.
ಈ ಕುರಿತು ಭಟಿಂಡ ಶಿಕ್ಷಣ ಇಲಾಖೆ ಶೀಘ್ರದಲ್ಲೇ ಸರಕಾರಕ್ಕೆ ಸಮಗ್ರ ವರದಿ ಸಲ್ಲಿಸಲು ಮುಂದಾಗಿದೆ,(ಏಜೆನ್ಸೀಸ್).
IPL 2024: ರೋಹಿತ್ ಬದಲಿಗೆ ಹಾರ್ದಿಕ್​ನ ಕ್ಯಾಪ್ಟನ್​ ಮಾಡಲು ಇದೇ ಬಲವಾದ ಕಾರಣ! ಕಡೆಗೂ ಸ್ಪಷ್ಟನೆ ಕೊಟ್ಟ ಕೋಚ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 7 =
Remember me
