ಮಹಾರಾಷ್ಟ್ರ:ಆಧುನಿಕ ಜೀವನ ಶೈಲಿಯಲ್ಲಿ 40ನೇ ವಯಸ್ಸಿಗೆ ಕೈ-ಕಾಲು ನೋವು ಎಂದು ಗೋಳಾಡುವ ಅನೇಕ ಜನರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಅಜ್ಜ ತನ್ನ ಇಳಿವಯಸ್ಸಿನಲ್ಲಿಯೂ ದೇಶ-ವಿದೇಶಗಳಲ್ಲಿ ಆಯೋಜಿಸಲಾದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಈವರೆಗೆ ಒಟ್ಟು 114 ಪದಕಗಳನ್ನು ಗಳಿಸಿದ್ದಾರೆ.ಮೂಲತಃ ಮಹಾರಾಷ್ಟ್ರ ನಿವಾಸಿಯಾಗಿರುವ ಜನರಾವ್ ಲೋಂಕರ್ ಅವರು ನಿವೃತ್ತ ಪೋಲಿಸ್​ ಅಧಿಕಾರಿ. 18ನೇ ವಯಸ್ಸಿನಲ್ಲಿ ಪೊಲೀಸ್ ಸೇವೆಗೆ ಬಂದು ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿ 48ನೇ ವಯಸ್ಸಿನಲ್ಲಿ ನಿವೃತ್ತರಾದರು.ಇದನ್ನೂ ಓದಿ:ಸೆಪ್ಟಿಕ್​ ಟ್ಯಾಂಕ್​ ಶುಚಿಗೊಳಿಸುವ ವೇಳೆ ದುರಂತ: 5 ಸಾವು
ಸದ್ಯ, ಲೋಂಕರ್ ಅವರಿಗೆ 84 ವರ್ಷ ವಯಸ್ಸಾಗಿದ್ದರೂ ಸಹ, ಅವರ ಈ ಸಾಧನೆ ಯುವಕರಿಗೆ ಸ್ಪೂರ್ತಿದಾಯಕವಾಗಿದೆ. ಓಟ, ಜಾವೆಲಿನ್ ಎಸೆತ, ಗುಂಡು ಎಸೆತ, ಟೇಬಲ್ ಥ್ರೋ, ಜಂಪಿಂಗ್, ಹರ್ಡಲ್ಸ್​ ಹೀಗೆ 26 ರಿಂದ 27 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ.ಆರೋಗ್ಯ ಮತ್ತು ದೈಹಿಕ ಕಸರತ್ತಿಗೆ ಮಹತ್ವ ನೀಡುವ ಲೋಂಕಾರ್​ ಪ್ರತಿನಿತ್ಯ ತಪ್ಪದೇ ವ್ಯಾಯಮ ಮಾಡಿ, ಸಮಯಕ್ಕೆ ಸರಿಯಾಗಿ ಊಟ ಮಾಡುತ್ತಾರೆ. ಅವರಿಗೆ 81 ವರ್ಷದ ಪತ್ನಿ ಸುಮನ್ ಜನರಾವ್ ಕೂಡ ಸಹಾಯ ಮಾಡುತ್ತಾರೆ. ಇವನ ಬಗ್ಗೆ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಈಗಾಗಲೇ ಹಲವು ಸ್ಪರ್ಧೆಯಲ್ಲಿ ಗೆದ್ದಿರುವ ಈ ಅಜ್ಜನ ಗೆಲ್ಲುವ ಉತ್ಸಾಹವು ಕಡಿಮೆಯಾಗಿಲ್ಲ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + two =
Remember me
