ನವದೆಹಲಿ:ದೇಶದಲ್ಲಿ ಮಳೆ ಜೋರಾಗಿ ಸುರಿಯುತ್ತಿದೆ. ಬೇಸಿಗೆಯ ಬಿಸಿಲಿನ ತಾಪಕ್ಕೆ ಬೆಂದು ಒಣಗಿದ್ದ ಪ್ರಕೃತಿ ಎಡೆಬಿಡದೆ ಸುರಿಯುತ್ತಿರುವ ಮಳೆಹನಿಗಳ ಮುತ್ತಿಗೆ ನಾಚಿ ಹಸಿರಾಗಿದ್ದರೂ, ಇನ್ನೂ ಬೇಕಾಗಿದೆ ಎಂದು ಗುನುಗುನಿಸುತ್ತಾ ಕೈಯಗಲಿಸಿ ವರ್ಷಧಾರೆಯನ್ನು ಆಲಿಂಗನಕ್ಕೆ ಕರೆಯುತ್ತಿದೆ. ಭೂಮಿ ಮೈತುಂಬಿ ನಿಂತು ಹಸಿರು ಸೀರೆಯುಟ್ಟ ಚೆಲುವೆಯಮತೆ ಕಂಗೊಳಿಸುತ್ತಿದೆ.
ಮಳೆ ಮತ್ತು ಪ್ರಕೃತಿಯ ಈ ಸಮೃದ್ಧ ಮಿಲನಕ್ಕೆ ಸಾಕ್ಷಿಯಾಗಿರುವ ವನ್ಯಜೀವಿಗಳು ಕೂಡ ಸಂತೋಷಗೊಂಡಂತಿವೆ. ಆನೆಯೊಂದು ಸುರಿಯುತ್ತಿರುವ ಮಳೆಗೆ ತನ್ನ ಮೈಯೊಡ್ಡಿ ಮಾವುತನ ಜೊತೆ ಹೆಜ್ಜೆ ಹಾಕಿ ಆ ಕ್ಷಣಗಳನ್ನು ಸಂಭ್ರಮಿಸುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಮಾವುತ ಮತ್ತು ಆನೆಯ ನಡುವಿನ ಆ ಸುಂದರ ಮಳೆ ಪ್ರೀತಿಯ ದೃಶ್ಯಗಳಿಗೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ತಮಿಳುನಾಡಿನ ಅಣ್ಣಾಮಲೈ ಹುಲಿಸಂರಕ್ಷಿತಾರಣ್ಯದ ಆನೆ ಶಿಬಿರದಲ್ಲಿ ಆನೆ ಮತ್ತು ಮಾವುತ ಜತೆ ಸಾಗುತ್ತಿರುವುದನ್ನು ವನ್ಯಜೀವಿ ಛಾಯಾಗ್ರಾಹಕ ಧನು ಪರನ್ ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದಿದ್ದಾರೆ. ಆನೆ ಮತ್ತು ಮಾವುತನ ಆ ಆತ್ಮೀಯ ದೃಶ್ಯಗಳು ವೈರಲ್ ಆಗಿದ್ದು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅದನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡು ಇದೊಂದು ಮ್ಯಾಜಿಕಲ್ ಕ್ಷಣಗಳಾಗಿವೆ ಎಂದು ಬರೆದುಕೊಂಡಿದ್ದಾರೆ.
Magical moments between a Mahout and his elephant in Monsoon showers at the Kozhikamudi elephant camp in Anamalai Tiger Reserve, Tamil Nadu
Video@dhanu_paran#elephantspic.twitter.com/nvQU3eMm1t
— Supriya Sahu IAS (@supriyasahuias)August 2, 2024

ವಿಡಿಯೋದಲ್ಲಿ ಆನೆಯ ದಂತವನ್ನು ಮಾವುತ ಅಂಗೈಯಂತೆ ಹಿಡಿದು ನಡೆದು ಬರುವುದನ್ನು ಕಾಣಬಹುದು. ಕೊಡೆ ಹಿಡಿದು ಮುಂದೆ ಸಾಗುತ್ತಿರುವ ಮಾವುತನನ್ನು ಆನೆ ಹಿಂಬಾಲಿಸುತ್ತದೆ. ಸುರಿಯುತ್ತಿರುವ ಮಳೆಗೆ ತನ್ನ ವಿಶಾಲವಾದ ಮೈಯೊಡ್ಡಿರುವ ಆನೆಯ ಸೊಂಡಿಲು, ತಲೆ, ಕಿವಿಗಳನ್ನು ಪ್ರೀತಿಯಿಂದ ಸವರುವ ಮಾವುತ ಮತ್ತು ಆ ಕ್ಷಣವನ್ನು ಆನಂದಿಸುತ್ತಿರುವ ಆನೆ, ಇವರಿಬ್ಬರು ತಮ್ಮದೇ ಸ್ವರ್ಗರಾಜ್ಯದಲ್ಲಿರುವಂತೆ ಕಾಣುತ್ತದೆ.
ಮಳೆಯಲಿ ಜೊತೆಯಲಿ ದಿನವಿಡಿ ನೆನೆಯಲು ಎನ್ನುವ ಮಳೆ ಹಾಡುಗಳ ಹನಿಮುತ್ತುಗಳ ಹಾಗೆ ಗಜರಾಜ ಮತ್ತು ಮಾವುತನ ಒಡನಾಟದ ಈ ದೃಶ್ಯ ಹೃದಯಸ್ಪರ್ಶಿಯಾಗಿದೆ.(ಏಜೇನ್ಸಿಸ್)
ವಯನಾಡು ಸಂತ್ರಸ್ತರಿಗೆ ಸಹಾಯ ಮಾಡಿದ್ರೂ ನಿಲ್ಲದ ಟೀಕೆ: ರಶ್ಮಿಕಾ ವಿರುದ್ಧ ಭಾರಿ ಆಕ್ರೋಶ, ಕಾರಣ ಹೀಗಿದೆ…

ವಕ್ಫ್‌ ಬೋರ್ಡ್ ಅಧಿಕಾರಕ್ಕೆ ಬ್ರೇಕ್ ಹಾಕಲು ಸಿದ್ಧತೆ, ಕಾಯಿದೆ ಬದಲಿಸುತ್ತಾ ಮೋದಿ ಸರ್ಕಾರ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine − 3 =
Remember me
