ನವದೆಹಲಿ:ಆತ ಬಸ್​​ಗೆ ಹತ್ತುತ್ತಿದ್ದಂತೆ ಬಸ್​ನಲ್ಲಿ ನಿಂತಿದ್ದ ಆಕೆ ಅವನಿಗೆ ಥೂ ಎಂದು ಉಗಿಯುತ್ತಾಳೆ. ಕೋಪಗೊಂಡ ಆತ ಆಕೆಯನ್ನು ತಳ್ಳಿಬಿಡುತ್ತಾನೆ. ಮುಂದಾಗಿದ್ದು ಎಲ್ಲರನ್ನೂ ಒಮ್ಮೆ ಎದೆ ಝಲ್ಲೆನಿಸುವಂತೆ ಮಾಡಿಬಿಡುತ್ತದೆ. ಇಂಥದ್ದೊಂದು ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅವರಿಬ್ಬರೂ ಯಾರು, ಯಾಕೆ ಹೀಗಾಯಿತು ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.
ಕೆನಡದ ವ್ಯಾಂಕೋವರ್​ನ ಬಸ್​ನಲ್ಲಿ ಈ ಘಟನೆ ನಡೆದಿದ್ದು, ಆ ಯುವಕ ಸಿಟ್ಟಿನಿಂದ ತಳ್ಳಿದ ರಭಸಕ್ಕೆ ಬಸ್​ನಿಂದ ಆಕೆ ಸೀದಾ ಫುಟ್​ಪಾತ್ ಮೇಲೆ ಬೀಳುತ್ತಾಳೆ. ಆಗ ಬಸ್​ನಲ್ಲಿದ್ದ ಪ್ರಯಾಣಿಕರೆಲ್ಲ ಒಮ್ಮೆ ಓ ಮೈ ಗಾಡ್ ಎಂದು ಉದ್ಗರಿಸಿದ್ದು, ಆತ ಬಳಿಕ ಆಕೆ ಉಗಿದಳು ಎಂದಿದ್ದು ಈ ವಿಡಿಯೋದಲ್ಲಿ ದಾಖಲಾಗಿದ್ದು ಬಿಟ್ಟರೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಇದು ಹಳೇ ವಿಡಿಯೋ ಆಗಿದ್ದು, ಈಗ ವೈರಲ್​ ಆಗಿದೆ ಎನ್ನಲಾಗುತ್ತಿದೆ.
ಒರಿಜಿನಲ್ ಆಗಿ ಪೋಸ್ಟ್​ ಮಾಡಿದ್ದ ವಿಡಿಯೋ ಡಿಲೀಟ್​ ಆಗಿದೆ, ಡೌನ್​ಲೋಡೆಡ್​ ವಿಡಿಯೋ ಹರಿದಾಡುತ್ತಿದೆ. ಈ ಘಟನೆ ಬಗ್ಗೆ ಅಲ್ಲಿನ ಸಾರಿಗೆ ಸಂಸ್ಥೆ ಟ್ರಾನ್ಸ್​​ಲಿಂಕ್ ವಿಷಾದ ವ್ಯಕ್ತಪಡಿಸಿದ್ದರೆ, ಪೊಲೀಸರು ಆ ಯುವಕ ಹಾಗೂ ಯುವತಿಯ ಪತ್ತೆ ಹಚ್ಚುವ ಯತ್ನದಲ್ಲಿದ್ದಾರೆ. (ಏಜೆನ್ಸೀಸ್​)
https://bit.ly/34nH3Qi
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + two =
Remember me
