ನವದೆಹಲಿ:ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.
ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ನೆಟಿಗ್ಗರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ತಮ್ಮನ್ನು ಮನರಂಜಿಸುವ ಮೋಜಿನ ಮಾರ್ಗವಾಗಿದೆ ಮತ್ತು ಸ್ನೇಹಿತರೊಂದಿಗೆ ತಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುವ ಮಾರ್ಗವಾಗಿದೆ ಎಂದು ಭಾವಿಸುತ್ತಾರೆ. ಇದರ ಹೊರತಾಗಿ, ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್​ಗಳು ಸಹ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
ಇದನ್ನೂ ಓದಿ:ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್​ ಒಂಭತ್ತು ಪ್ರಶ್ನೆ; ಮುಸ್ಲಿಮರ ಮೀಸಲಾತಿ ವಿಚಾರವನ್ನು ಕೆದಕಿದ ಸುರ್ಜೇವಾಲ, ಡಿಕೆಶಿ…
ಕೆಲವೊಮ್ಮೆ ಕೆಲವೊಂದು ಫೋಟೋಗಳು ನಮ್ಮ ಯೋಚನೆಯನ್ನೇ ಒಂದು ಕ್ಷಣ ಬದಲಿಸಿಬಿಡುತ್ತವೆ. ನೋಡಲು ಥಟ್ಟನೆ ಅಶ್ಲೀಲವಾಗಿ ಕಂಡರೂ ಸೂಕ್ಷ್ಮವಾಗಿ ನೋಡಿದಾಗ ವಿಷಯ ಬೇರೆಯೇ ಆಗಿರುತ್ತದೆ. ಅದಕ್ಕೆ ದೊಡ್ಡವರು ಹೇಳೋದು ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಅಂತ. ಅದಕ್ಕೆ ಉದಾಹರಣೆಯಂತಿದೆ ಈ ಕೆಳಗಿನ ಫೋಟೋ.

ಮೇಲಿರುವ ಫೋಟೋವನ್ನು ತಕ್ಷಣ ನೋಡಿದರೆ ವಿಹಾರದ ಬೋಟಿನಲ್ಲಿ ಪುರುಷ ಮತ್ತು ಮಹಿಳೆ ತಬ್ಬಿಕೊಂಡಿರುವಂತೆ ಕಾಣುತ್ತದೆ. ಆದರೆ, ವಾಸ್ತವ ಬೇರೆಯೇ ಇದೆ. ಫೋಟೋವನ್ನು ಸೂಕ್ಷ್ಮವಾಗಿ ಅಥವಾ ಜೂಮ್​ ಮಾಡಿ ನೋಡಿದಾಗ ಅಸಲಿ ವಿಚಾರ ಗೊತ್ತಾಗುತ್ತದೆ. ಅದೇನೆಂದರೆ ಅಲ್ಲಿ ಯಾರು ಯಾರನ್ನೂ ತಬ್ಬಿಕೊಂಡಿಲ್ಲ. ಬದಲಾಗಿ ಬೋಟ್​ನಲ್ಲಿ ಕುಳಿತಿರುವ ವ್ಯಕ್ತಿ ಜೀವ ರಕ್ಷಕ ಜಾಕೆಟ್​ ಅಥವಾ ಲೈಫ್​ ಜಾಕೆಟ್​ ಧರಿಸಿದ್ದಾರೆ. ಅವರ ಪಕ್ಕದಲ್ಲಿ ಓರ್ವ ಮಹಿಳೆ ಕುಳಿತಿದ್ದಾಳೆ. ಆಕೆ ಆ ವ್ಯಕ್ತಿ ಪತ್ನಿ ಇರಬಹುದು.
ಇದನ್ನೂ ಓದಿ:ಮಂಡ್ಯದಲ್ಲಿಂದು ಯೋಗಿ ಆದಿತ್ಯನಾಥ್ ಅಬ್ಬರ: ಒಕ್ಕಲಿಗ ಸಮುದಾಯದ ಮನಗೆಲ್ಲಲು ಬಿಜೆಪಿಯಿಂದ ಯೋಗಿ ಅಸ್ತ್ರ!
ಆದರೆ, ಫೋಟೋ ಮಾತ್ರ ನೋಡುಗರಿಗೆ ಎರಡು ರೀತಿಯ ಆಲೋಚನೆಯನ್ನು ಹುಟ್ಟುಹಾಕುವುದಂತೂ ಸತ್ಯ. ಮೊದಲಿಗೆ ತಪ್ಪಾಗಿ ಭಾವಿಸಿದರೂ ಮತ್ತೊಮ್ಮೆ ಸೂಕ್ಷ್ಮವಾಗಿ, ತಾಳ್ಮೆಯಿಂದ ಗಮನಿಸಿದಾಗ ಸರಿಯಾಗಿ ಕಾಣುತ್ತದೆ. ಅದಕ್ಕೆ ಯಾವುದೇ ವಿಚಾರವನ್ನಾಗಲಿ ಯೋಚಿಸಿ ನಿರ್ಣಯ ತೆಗೆದುಕೊಳ್ಳಬೇಕು. ಅದಕ್ಕೆ ಹಿರಿಯರು ಹೇಳುವುದು ಪ್ರತ್ಯಕ್ಷ ಕಂಡರು ಪ್ರಮಾಣಿಸಿ ನೋಡು ಅಂತ.
ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ಫೋಟೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.(ಏಜೆನ್ಸೀಸ್​)
ವಿಜಯಪುರದಲ್ಲಿ ಲೈವ್ ವಿಡಿಯೋ ಆನ್​ ಮಾಡಿ ವಿವಾಹಿತೆ ಸಾವಿಗೆ ಶರಣು!

ಕಿವಿಯ ಕೂದಲು ಉಲ್ಲೇಖಿಸಿ ನಿರ್ಮಾಪಕನಿಗೆ ತಿರುಗೇಟು ನೀಡಿದ ಸಮಂತಾ!

ಸ್ಟಾರ್​ ನಟಿ ಪಟ್ಟ ಕಳೆದುಕೊಂಡ ಬಳಿಕ ಬದಲಾದ ಸಮಂತಾ: ತೆಲುಗು ನಿರ್ಮಾಪಕನ ಸ್ಪೋಟಕ ಹೇಳಿಕೆ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:twelve − 7 =
Remember me
