ನವದೆಹಲಿ:ಗೂಡಿನಲ್ಲಿ ತುಂಬಿಟ್ಟಿದ್ದ ನೂರಾರು ಹಸಿರು ಗಿಣಿಗಳನ್ನು ಬಿಡುಗಡೆ ಮಾಡುತ್ತಿರುವ ವೀಡಿಯೋ ತುಣುಕೊಂದು ನೆಟ್ಟಿಗರ ಮನ ಗೆದ್ದಿದೆ. ಕೆಲವೇ ಗಂಟೆಗಳಲ್ಲಿ 30,000 ಕ್ಕೂ ಹೆಚ್ಚು ವ್ಯೂಗಳನ್ನು ಪಡೆದಿರುವ ಈ ಟ್ವೀಟ್​ಗೆ “ಸ್ವಾತಂತ್ರ್ಯ ಅನ್ನೋದು ಕಾಣೋದು ಹೀಗೆ” ಎಂಬ ತಲೆಬರಹ ನೀಡಲಾಗಿದೆ.
ಇಂಡಿಯನ್ ಫಾರೆಸ್ಟ್ ಸರ್ವೀಸ್ (ಐಎಫ್​ಎಸ್) ಅಧಿಕಾರಿ ಪರ್ವೀನ್ ಕಾಸ್ವಾನ್ ಅವರು ಭಾನುವಾರ ಬೆಳಿಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಹಲವಾರು ಗಿಣಿಗಳ ಮುಖವನ್ನು ಬಟ್ಟೆಯಿಂದ ಮುಚ್ಚಿ ಗೂಡಿನಲ್ಲಿಟ್ಟಿದ್ದ ಫೋಟೋ ಒಂದನ್ನು ಶೇರ್ ಮಾಡಿದ್ದರು. “ನೀವು ಸ್ಥಳೀಯ ಮಾರುಕಟ್ಟೆಗಳಲ್ಲಿ ಖರೀದಿಸುವ ಹಕ್ಕಿಗಳನ್ನು ಈ ರೀತಿಯಾಗಿ ಸಾಗಣೆ ಮಾಡುತ್ತಾರೆ. ಖರೀದಿಸಬೇಡಿ” ಎಂದವರು ಮನವಿ ಮಾಡಿದ್ದರು. ಈ ಟ್ವೀಟ್​ಗೆ ಪ್ರತಿಕ್ರಯಿಸಿದ್ದ ಹಲವರು ಕ್ಷಣಿಕ ಸಂತೋಷಕ್ಕಾಗಿ ಪಕ್ಷಿಗಳನ್ನು ಗೂಡಿನಲ್ಲಿಟ್ಟು ಸಾಕುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಇಂದು ಬೆಳಿಗ್ಗೆ 11 ಗಂಟೆಗೆ ಕಾಸ್ವಾನ್ ಮತ್ತೊಂದು ಟ್ವೀಟ್ ಮಾಡಿದರು, ಗೂಡಿನಲ್ಲಿಟ್ಟಿದ್ದ ಪಕ್ಷಿಗಳನ್ನು ಕಾಡಿನಲ್ಲಿ ಹಾರಿಸುತ್ತಿರುವ ವೀಡಿಯೋ ತುಣುಕದು. ಈ ಬಾರಿಯ ತಲೆಬರಹ ಬೇರೆಯೇ ಇತ್ತು. “ಸ್ವಾತಂತ್ರ್ಯ ಅನ್ನೋದು ಕಾಣೋದು ಹೀಗೆ” ಎಂದು ಬರೆದು ಪಕ್ಷಿಗಳನ್ನು ಭಾನುವಾರ ಬಂಧನದಿಂದ ಪಾರಾಗಿಸಿದ ಬಗ್ಗೆ ಹೇಳಿಕೊಂಡಿದ್ದರು.
This is how freedom looks like. Yesterday. Team.pic.twitter.com/0OojqLyv6n— Parveen Kaswan, IFS (@ParveenKaswan)February 1, 2021
This is how freedom looks like. Yesterday. Team.pic.twitter.com/0OojqLyv6n
ಸಾವಿರಾರು ವೀಕ್ಷಣೆಗಳನ್ನು ಪಡೆದ ಈ ವೀಡಿಯೋ ತುಣುಕು ಹಲವರ ಮೆಚ್ಚುಗೆಯನ್ನೂ ಪಡೆಯಿತು. ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಾ ಎಂದು ಹೊಗಳಿದವರು ಕೆಲವರಾದರೆ, “ಪಕ್ಷಿಗಳನ್ನು ಹಾರಲು ಬಿಡಬೇಕು; ಆಕಾಶವೇ ಅವುಗಳ ಮನೆ” ಎಂದು ಮತ್ತೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
VIDEO | “ವೆಲ್​ಕಮ್​ ಟು ದ ಕ್ಲಬ್, ಅಮೆರಿಕ…!”
ಬೇಗೂರು ರಸ್ತೆಯ ಬಳಿ ಕಾಣಿಸಿಕೊಂಡ ಚಿರತೆಯನ್ನು ಹಿಡಿದ ಅರಣ್ಯ ರಕ್ಷಕರು


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − one =
Remember me
