ನವದೆಹಲಿ:ಹೇಗಿದ್ದ ಬದುಕು ಎಲ್ಲಿಗೆ ಹೋಗಿ ಮುಟ್ಟಿರುತ್ತದೆ ಎಂದು ಹೇಳುವುದು ಕಷ್ಟ. ಅನಿರೀಕ್ಷಿತ ತಿರುವುಗಳು ಯಾವ ಕೊನೆಯನ್ನೂ ಮುಟ್ಟಿಸಬಹುದು. ಅಂಥ ಒಂದು ಸಂಕಷ್ಟಗಳ ಸರಮಾಲೆಯನ್ನೇ ಅನುಭವಿಸಿದ ‘ಒಬ್ಬಳು’ ಈಗ ಬ್ಯೂಟಿಕ್ವೀನ್​. ಈಕೆಯ ಸಾಧನೆ ಇತರರಿಗೆ ಪ್ರೇರಣೆ ಹಾಗೂ ಮಾದರಿ ಎಂದರೂ ತಪ್ಪಲ್ಲ. ಏಕೆಂದರೆ ಈಕೆ ಒಂದು ಕಾಲದಲ್ಲಿ ಭಿಕ್ಷುಕಿ, ಅತ್ಯಾಚಾರ ಸಂತ್ರಸ್ತೆ. ಇದು ಫಸ್ಟ್​ ಟ್ರಾನ್ಸ್​ಜೆಂಡರ್​ ಇಂಟರ್​ನ್ಯಾಷನಲ್​ ಬ್ಯೂಟಿಕ್ವೀನ್ ಎನಿಸಿಕೊಂಡಿರುವ ನಾಝ್​ ಜೋಶಿಯ ದುರಂತಮಯ ಹಿನ್ನೆಲೆ.
ನಾಝ್ ಜೋಶಿ 2021-22ರ ಎಂಪ್ರೆಸ್​ ಅರ್ಥ್​ ಶೀರ್ಷಿಕೆಗೆ ಪಾತ್ರರಾಗಿದ್ದು, ಪ್ರಪ್ರಥಮ ತೃತೀಯಲಿಂಗಿ ಬ್ಯೂಟಿಕ್ವೀನ್ ಎನಿಸಿಕೊಂಡಿರುತ್ತಾರೆ. ನಾಝ್​ ದೆಹಲಿಯಲ್ಲಿ ಹುಟ್ಟಿದ್ದು, ಆರಂಭದಲ್ಲಿ ನೋಡಲು ಹುಡುಗನಂತೆ ಕಾಣಿಸಿದರೂ ವರ್ತನೆ ಹುಡುಗಿಯಂತಿತ್ತು. ಕೊನೆಗೆ ಈಕೆ ತೃತೀಯಲಿಂಗಿ ಎಂದು ಗೊತ್ತಾದ ತಕ್ಷಣ ತಾಯಿ ತನ್ನ ತಮ್ಮನಿಗೆ ನಾಝ್​ಳನ್ನು ಸಲಹಲು ನೀಡಿದ್ದಳು. ಆದರೆ ಸೋದರಮಾವ ಹತ್ತರ ವಯಸ್ಸಿನ ನಾಝ್​ ಮೇಲೆ ತನ್ನ ಗೆಳೆಯರೊಂದಿಗೆ ಸೇರಿ ಅತ್ಯಾಚಾರ ಮಾಡಿಬಿಟ್ಟಿದ್ದ.
ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಅಸ್ವಸ್ಥಗೊಂಡಿದ್ದ ನಾಝ್​ ಆಸ್ಪತ್ರೆಯಲ್ಲಿದ್ದಾಗ ಇನ್ನೊಬ್ಬ ತೃತೀಯಲಿಂಗಿ ವ್ಯಕ್ತಿಯನ್ನು ಕರೆದೊಯ್ದು ತನ್ನೊಂದಿಗೆ ಇರಿಸಿಕೊಂಡಿದ್ದರು. ಬಳಿಕ ಬೀದಿಯಲ್ಲಿ ಭಿಕ್ಷಾಟನೆ ಮಾಡಿದ್ದ ನಾಝ್​, ಜೀವನ ನಿರ್ವಹಣೆಗಾಗಿ ಪಾರ್ಲರ್​ಗಳಲ್ಲಿ ಮಸಾಜ್ ಮಾಡುವ ಕೆಲಸ ಕೂಡ ಮಾಡಿದ್ದಳು.
ಈ ಎಲ್ಲ ಸಂಕಷ್ಟಗಳ ನಡುವೆಯೂ ಫ್ಯಾಷನ್​ ಡಿಸೈನಿಂಗ್ ಕೋರ್ಸ್ ಮಾಡಿಕೊಂಡಿದ್ದ ನಾಝ್​, 2013ರಲ್ಲಿ ಲಿಂಗಪರಿವರ್ತನೆ ಮಾಡಿಕೊಂಡು ರೂಪದರ್ಶಿಯಾದರು. ಈಗ ಬ್ಯೂಟಿಕ್ವೀನ್ ಆಗಿ ಹೊರಹೊಮ್ಮಿದ್ದಾರೆ. ನಂತರ ಟ್ರಾನ್ಸ್​ಜೆಂಡರ್​ ಸೆಕ್ಸ್​ವರ್ಕರ್ ಒಬ್ಬರ ಫೋಟೋಶೂಟ್​ಗಾಗಿ ನಿರೀಕ್ಷೆಯಲ್ಲಿ ಫೋಟೋಗ್ರಾಫರ್​ವೊಬ್ಬರನ್ನು ಭೇಟಿಯಾದ ನಾಝ್​, ಅಲ್ಲಿ ಒಂದು ಫೋಟೋಶೂಟ್ ಮಾಡಿಸಿಕೊಂಡರು. ಇದು ಸೆನ್ಸೇಷನಲ್ ಎನಿಸಿ ಮ್ಯಾಗಜಿನ್​ ಕವರ್​​ಪೇಜ್​ನಲ್ಲಿ ರಾರಾಜಿಸಿತು. ನಂತರ ಭಾರತದ ಪ್ರಥಮ ತೃತೀಯಲಿಂಗಿ ಬ್ಯೂಟಿಕ್ವೀನ್ ಆಗಿ ಹೊರಹೊಮ್ಮಿದ ನಾಝ್​, ಕ್ರಮೇಣ 8 ಸೌಂದರ್ಯಸ್ಪರ್ಧೆಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದು, ಈಗ ಪ್ರಪ್ರಥಮ ಟ್ರಾನ್ಸ್​ಜೆಂಡರ್​ ಇಂಟರ್​ನ್ಯಾಷನಲ್ ಬ್ಯೂಟಿಕ್ವೀನ್​ ಆಗಿ ಹೊರಹೊಮ್ಮಿದ್ದಾರೆ. –ಏಜೆನ್ಸೀಸ್
ಸಂಸಾರ ನಿಭಾಯಿಸಲಿಕ್ಕೂ ಇಲ್ಲಿದೆ ಒಂದು ಕೋರ್ಸ್​; ಮದುವೆ ಆಗುವವರಿಗೂ-ಆದವರಿಗೂ ನೀಡ್ತಾರೆ ತರಬೇತಿ!

ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 6 =
Remember me
