ಚಂಡೀಗಢ:ಚೀನಾ ಕಾಲ್ಕೆರೆಯುತ್ತ ಮೈಮೇಲೆ ಬಂದಾಗ ಹೆದರಿ ಹಿಮ್ಮೆಟ್ಟೋದಕ್ಕೆ ಈಗ ನಡೀತಿರೋದು 1962 ಅಲ್ಲ ಎಂಬುದು ಬೀಜಿಂಗ್​ಗೆ ನೆನಪಿರಲಿ. ನಮಗೆ ಯುದ್ಧ ಬೇಡ, ಆದರೆ ಬೆದರಿಸುವ ಬೀಜಿಂಗ್​ನ ಪ್ರವೃತ್ತಿಯನ್ನು ಸಹಿಸಿಕೊಂಡು ಹೋಗೋದಕ್ಕೆ ಸಾಧ್ಯವಿಲ್ಲ ಎಂದು ಪಂಜಾಬ್​ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಎಚ್ಚರಿಸಿದ್ದಾರೆ. ಅವರು ಭಾರತೀಯ ಸೇನೆಯಲ್ಲಿ ಈ ಹಿಂದೆ ಕ್ಯಾಪ್ಟನ್ ಆಗಿದ್ದವರು.
ಇದನ್ನೂ ಓದಿ:ಲಡಾಖ್​ ಬಿಕ್ಕಟ್ಟು ಪರಿಹಾರಕ್ಕೆ ಚೀನಾದೊಂದಿಗೆ ಮಾತುಕತೆಯ ಹಾದಿ
ಗಡಿಭಾಗದಲ್ಲಿ ಅತಿಕ್ರಮಣ, ಆಕ್ರಮಣಕಾರಿ ನೀತಿಯನ್ನು ಚೀನಾ ಅನುಸರಿಸಿದರೆ ಅದಕ್ಕೆ ತಕ್ಕ ಬೆಲೆಯನ್ನೂ ಅದು ತೆರಬೇಕಾದೀತು. ಭಾರತೀಯ ಸೇನೆ ಈಗಾಗಲೇ ತಕ್ಕ ಉತ್ತರವನ್ನು ನೀಡುವುದಕ್ಕೆ ಸಿದ್ಧವಾಗಿದೆ. ಚೀನಾ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಅವರು ಕೋಲ್ಕತ್ತದ ನಿವಾಸಿಯೊಬ್ಬರ ಪ್ರಶ್ನೆಗೆ ಫೇಸ್​ಬುಕ್ ಲೈವ್ ಕಾರ್ಯಕ್ರಮದಲ್ಲಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ:ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳಲು ಬದ್ಧ: ಚೀನಾದ ಮೊದಲ ಪ್ರತಿಕ್ರಿಯೆ
ಯಾವುದೇ ದೇಶದೊಂದಿಗೆ ನಮಗೆ ಯುದ್ಧ ಬೇಡ ಮತ್ತು ಅಂತಹ ಸಂಕಷ್ಟದ ಸನ್ನಿವೇಶ ತಿಳಿಗೊಂಡು ಬಾಂಧವ್ಯ ವೃದ್ಧಿಯಾಗಬೇಕು ಎಂಬ ಅಪೇಕ್ಷೆ ನಮ್ಮದು. ಆದರೆ, ಅವರಾಗಿಯೇ ಆ ರೀತಿ ಮುಂದುವರಿದರೆ ನಮ್ಮ ಬಳಿ ಬೇರೆ ಆಯ್ಕೆ ಇರುವುದಿಲ್ಲ. ಇದನ್ನು ಚೀನಾದವರೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ಭೌಗೋಳಿಕ ವ್ಯಾಪ್ತಿಯೊಳಗೆ ಬಂದು ರಸ್ತೆ ನಿರ್ಮಿಸುತ್ತಿರುವ ಅವರು ನಮ್ಮ ಆಕ್ಷೇಪಣೆಗಳನ್ನು ಕೇಳುವುದಿಲ್ಲ. ಆದರೆ, ನಮ್ಮ ಭೌಗೋಳಿಕ ವ್ಯಾಪ್ತಿ ಅಕ್ಸಾಯ್​ ಚಿನ್​ನಲ್ಲಿ ನಾವು ರಸ್ತೆ ನಿರ್ಮಿಸಿದರೆ ಆಕ್ರಮಕಾರಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. (ಏಜೆನ್ಸೀಸ್)
ಟಾರ್ಗೆಟ್​ ಚೀನಾ, ಡಬ್ಲ್ಯುಎಚ್​ಒ ಜತೆಗಿನ ಸಂಬಂಧ ಕಟ್​: ಅಮೆರಿಕ ಅಧ್ಯಕ್ಷ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
