ಜಾಮ್​ನಗರ:ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಈ ವರ್ಷ ರಾಧಿಕಾ ಮರ್ಚೆಂಟ್ ಅವರೊಂದಿಗೆ ವಿವಾಹವಾಗಲಿದ್ದಾರೆ. ಇದಕ್ಕೂ ಮುನ್ನ ಅಂಬಾನಿ ಕುಟುಂಬದ ತವರು ಜಾಮ್‌ನಗರದಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಾರ್ಚ್ 1 ರಿಂದ 3 ರವರೆಗೆ ಮೂರು ದಿನಗಳ ಕಾಲ ನಡೆಯುವ ಸಮಾರಂಭದಲ್ಲಿ ಸ್ಟಾರ್​​ಗಳ ದಂಡೇ ಇರಲಿದೆ.
ಮೂರು ದಿನಗಳ ಕಾಲ ವಿವಿಧ ವಿಷಯಗಳ ಮೇಲೆ ಕಾರ್ಯಕ್ರಮಗಳು ನಡೆಯಲಿದ್ದು, ಬಾಲಿವುಡ್ ಮತ್ತು ಹಾಲಿವುಡ್ ತಾರೆಯರು ಪ್ರದರ್ಶನ ನೀಡಲಿದ್ದಾರೆ. ಈ ಸಮಯದಲ್ಲಿ, ಹಾಲಿವುಡ್ ಗಾಯಕಿ ರಿಹಾನ್ನಾ ಕೂಡ ಪ್ರದರ್ಶನ ನೀಡಲಿದ್ದಾರೆ. ಅವರ ತಂಡ ಮತ್ತು ಅವರು ಜಾಮ್‌ನಗರ ತಲುಪುತ್ತಿದ್ದಾರೆ. ರಿಹಾನ್ನಾ ಅವರನ್ನು ಅತ್ಯಂತ ಭವ್ಯವಾದ ಶೈಲಿಯಲ್ಲಿ ಸ್ವಾಗತಿಸಲಾಗುವುದು.
ಕಾರ್ಯಕ್ರಮಕ್ಕೆ ಆಗಮಿಸಿರುವ ಜನಪ್ರಿಯ ಗಾಯ ರಿಹಾನ್ನಾ ಅವರು ಅಂಬಾನಿ ಪುತ್ರನ ವಿವಾಹ ಸಮಾರಂಭದಲ್ಲಿ ಕಾರ್ಯಕ್ರಮ ನೀಡಲು ಚಾರ್ಜ್​ ಮಾಡಿರುವ ಸಂಭಾವನೆ ಕೇಳಿ ಎಲ್ಲರೂ ಶಾಕ್​ ಆಗಿದ್ದಾರೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ರಿಹಾನಾ ಅವರ ಹೆಸರು ವಿಶ್ವದ ಅತಿ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
Look at Rihanna Reaction as she is arrives at Jamnagar to perform at Anant Ambani Radhika Merchant Wedding 😍#AnantAmbani#RadhikaMerchant#MukeshAmbani#AnantRadhikaWeddingpic.twitter.com/bE0fcgxHRF
ಇದನ್ನೂ ಓದಿ:ಸಿದ್ದರಾಮಯ್ಯ ನಮ್ಮ ಮಾತು ಎಲ್ಲಿ ಕೇಳ್ತಾರೆ; ಜಾತಿಗಣತಿ ವಿರುದ್ಧ ಮತ್ತೊಮ್ಮೆ ಗುಡುಗಿದ ಶಾಮನೂರು ಶಿವಶಂಕರಪ್ಪ
ಶ್ರೀಮಂತರ ಮದುವೆಗಳಲ್ಲಿ ಸೆಲೆಬ್ರಿಟಿಗಳು ಮನರಂಜನೆ ನೀಡುವುದು ಕಾಮನ್​. ಮುಕೇಶ್​ ಅಂಬಾನಿ ಅವರು ನೇರವಾಗಿ ವಿದೇಶದ ಟಾಪ್​ ಗಾಯಕರನ್ನು ಆಹ್ವಾನಿಸಿದ್ದಾರೆ. ಅವರಿಗೆ ಹತ್ತಾರು ಕೋಟಿ ರೂಪಾಯಿ ಸಂಭಾವನೆ ನೀಡುತ್ತಿದ್ದಾರೆ. ಸಿಂಗರ್​ ರಿಹಾನ್ನಾ ಅವರು ಕೇವಲ ಒಂದು ದಿನ ಸಂಗೀತ ಕಾರ್ಯಕ್ರಮ ನೀಡಲು 74 ಕೋಟಿ ರೂ. ಸಂಭಾವನೆ ಪಡೆದಿರುವುದು ಎಲ್ಲರ ಹುಬ್ಬೇರಿಸಿದೆ.
ರಿಹಾನ್ನಾ ಪಡೆಯುತ್ತಿರುವ ಈ ಸಂಭಾವನೆಯಲ್ಲಿ ಹಲವು ಬಿಗ್ ಬಜೆಟ್​ ಸಿನಿಮಾಗಳನ್ನು ನಿರ್ಮಿಸಬಹುದು. ಅಷ್ಟು ದೊಡ್ಡ ಮೊತ್ತವನ್ನು ಅವರು ಒಂದೇ ದಿನಕ್ಕೆ ಪಡೆಯುತ್ತಿದ್ದಾರೆ. ಇನ್ನು ರಿಹಾನಾ ಅವರ ಜೊತೆ ತಂಡ ಒಂದು ಆಗಮಿಸಿದ್ದು, ಅವರ ಜೊತೆ ನಾಲ್ಕು ಲಾರಿ ಲಗ್ಗೇಜ್​ ಕೂಡ ಬಂದಿದೆ. ಜಾಮ್​ನಗರ ವಿಮಾನ ನಿಲ್ದಾಣದಿಂದ ಅವರ ಲಗ್ಗೇಜ್​ಗಳನ್ನು ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Rihanna's luggage ❎Middle class family shifting home ✅pic.twitter.com/Eks0aUozum
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × two =
Remember me
