ಡೆಹ್ರಾಡೂನ್​:ಕಾರು ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಡೆಹ್ರಾಡೂನ್​ನ ಮ್ಯಾಕ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಟೀಮ್​ ಇಂಡಿಯಾ ಆಟಗಾರ ರಿಷಭ್​ ಪಂತ್​ ಅವರನ್ನು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಭೇಟಿಯ ವೇಳೆ ಅಪಘಾತಕ್ಕೆ ಅಸಲಿ ಕಾರಣ ಏನು ಎಂಬುದನ್ನು ಪಂತ್​ ಅವರು ಮುಖ್ಯಮಂತ್ರಿಗಳ ಬಳಿ ತಿಳಿಸಿದ್ದಾರೆ. ಪಂತ್ ಅವರ ತಾಯಿ ಮತ್ತು ಕುಟುಂಬ ಸದಸ್ಯರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಸಿಎಂ ಪುಷ್ಕರ್ ಧಾಮಿ, ಟೀಮ್​ ಇಂಡಿಯಾ ಸ್ಟಾರ್​ ಆಟಗಾರನ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ವಿಚಾರಿಸಿದರು.
ರಸ್ತೆಯಲ್ಲಿನ ಗುಂಡಿ ಮತ್ತು ರಸ್ತೆ ಮಧ್ಯ ಇದ್ದ ಕಪ್ಪು ವಸ್ತು ಅಪಘಾತಕ್ಕೆ ಕಾರಣವಾಯಿತು ಎಂದು ಪಂತ್​, ಮುಖ್ಯಮಂತ್ರಿಗಳೊಂದಿಗಿನ ಚರ್ಚೆಯ ವೇಳೆ ತಿಳಿಸಿದ್ದಾರೆ. ಇದನ್ನು ಪುಷ್ಕರ್​ ಧಾಮಿ ಕೂಡ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ. ಆದರೆ, ಪ್ರಾಥಮಿಕ ತನಿಖೆಯ ಪ್ರಕರ ಪಂತ್​, ಮಾರ್ಗ ಮಧ್ಯೆ ನಿದ್ರಿಸಿದ ಕಾರಣ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
2022 ರ ಡಿಸೆಂಬರ್ 30 ರಂದು ದೆಹಲಿಯಿಂದ ರೂರ್ಕಿಗೆ ತನ್ನ ತಾಯಿಗೆ ಸರ್ಪ್ರೈಸ್​ ಭೇಟಿ ನೀಡಲು ಹೋಗುತ್ತಿದ್ದಾಗ ಕಾರು ಅಪಘಾತದಲ್ಲಿ ಪಂತ್​ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ.(ಏಜೆನ್ಸೀಸ್​)
आज मैक्स अस्पताल, देहरादून पहुंचकर भारतीय क्रिकेटर@RishabhPant17जी का कुशलक्षेम जाना। इस दौरान मैंने ऋषभ जी की माताजी व बहन से मुलाकात करने के साथ ही चिकित्सकों से उनके स्वास्थ्य सुधार संबंधित विभिन्न बिंदुओं की जानकारी भी ली।pic.twitter.com/rpbzD92eMD
— Pushkar Singh Dhami (@pushkardhami)January 1, 2023

ಟಾಲಿವುಡ್​ನಲ್ಲಿ ಮತ್ತೆ ಡ್ರಗ್ಸ್​ ದಂಧೆ ಬಯಲು: ಖ್ಯಾತ ನಟಿಯ ಪತಿಯ ಜತೆ ಉದ್ಯಮಿಯ ಬಂಧನ

ಹೊಸ ವರ್ಷದ ಮೊದಲ ದಿನ ತಾಯಿ, ನಿನ್ನೆ ಮಗನ ಶವ ಪತ್ತೆ: ಮಂಡ್ಯದಲ್ಲಿ ಹೃದಯ ವಿದ್ರಾವಕ ಘಟನೆ

ಬಿಕ್ಕಿಬಿಕ್ಕಿ ಅತ್ತ ಬಸನಗೌಡ ಪಾಟೀಲ್ ಯತ್ನಾಳ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
