ಒಡಿಶಾ:ಈ ವರನಿಗೆ ಮದುವೆಯೇ ಒಂದು ಥರ ಶಾಪದಂತಾಗಿದೆ. ಮದುವೆಯಾಗಲು ಹೊರಟ ಈ ಮದುಮಗನಿಗೆ ಒಂದರ ಮೇಲೊಂದು ತಲೆನೋವು ಎದುರಾಗಿದ್ದು, ಸದ್ಯಕ್ಕದು ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಮದುವೆಗೆ ನಿಶ್ಚಯವಾಗಿದ್ದ ಹುಡುಗಿ ಓಡಿಹೋದರೂ, ಆಕೆಯ ತಂಗಿಯೊಂದಿಗೆ ಮದುವೆ ನಡೆಯಿತು. ಆದರೂ ಈ ವರನಿಗೆ ಮದುವೆಯ ಖುಷಿಯೇ ಸಿಕ್ಕಿಲ್ಲ.
ಒಡಿಶಾದ ಕಾಳಹಂಡಿ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಈ ಮದುವೆ ನಡೆಯಬೇಕಿತ್ತು. ಆದರೆ ಮದುವೆಗೆ ಇನ್ನೇನು ಕೆಲವೇ ನಿಮಿಷಗಳು ಇದೆ ಎನ್ನುವಾಗ ಮಾಲ್ಪಡ ಗ್ರಾಮದವಳಾದ ಮದುಮಗಳು 26 ವರ್ಷದ ಯುವತಿ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಎಷ್ಟು ಹೊತ್ತಾದರೂ ವಧು ಕಾಣಿಸದಿದ್ದಾಗ ಎರಡೂ ಕುಟುಂಬಗಳ ಕಡೆಯವರು ಆತಂಕಕ್ಕೆ ಈಡಾಗಿದ್ದರು. ಆದರೆ ಅಷ್ಟರಲ್ಲಿ ಮರ್ಯಾದೆ ಪ್ರಶ್ನೆ ಎಂದು ವಧುವಿನ ಕಡೆಯವರು 15 ವರ್ಷದ ಇನ್ನೊಬ್ಬ ಮಗಳನ್ನು ವರನಿಗೆ ಧಾರೆ ಎರೆದರು.
ಇನ್ನೇನು ಹೇಗೋ ಮದುವೆಯಾಯಿತು ಎಂಬ ಸಮಧಾನದೊಂದಿಗೆ ಪತ್ನಿಯ ಜತೆ ಮನೆಗೆ ತೆರಳಿದ್ದ ವರನಿಗೆ ಮತ್ತೊಂದು ಶಾಕ್ ಕಾದಿತ್ತು. ಹುಡುಗಿಗೆ 15 ವರ್ಷವಷ್ಟೇ ಆಗಿರುವುದರಿಂದ ಅದು ಬಾಲ್ಯವಿವಾಹ ಎಂದಾಗುತ್ತದೆ ಎಂದು ವರನ ಮನೆಗೆ ಆಗಮಿಸಿದ್ದ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಆಕೆಯನ್ನು ರಕ್ಷಣೆ ಮಾಡಿ, ಆಕೆಯ ಮನೆಯವರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:ಭೀಕರ ಅಪಘಾತ: ಮದುವೆ ದಿಬ್ಬಣದ ಬಸ್​ ಉರುಳಿ ಬಿದ್ದು ಮೂವರು ಸ್ಥಳದಲ್ಲೇ ಸಾವು; 30ಕ್ಕೂ ಹೆಚ್ಚು ಮಂದಿಗೆ ಗಾಯ
ಆಕೆಗೆ 18 ವರ್ಷ ಆಗುವವರೆಗೂ ಮದುವೆ ಊರ್ಜಿತವಾಗುವುದಿಲ್ಲ ಎಂದು ಎರಡೂ ಕಡೆಯವರಿಗೆ ತಿಳಿಹೇಳಿದ ಅಧಿಕಾರಿಗಳು ನವವಧುವನ್ನು ತವರು ಮನೆಯವರಿಗೆ ಒಪ್ಪಿಸಿದ್ದಾರೆ. ಎರಡೂ ಕಡೆಯವರಿಗೂ ಬಾಲ್ಯವಿವಾಹ ಕಾನೂನುಬಾಹಿರ ಎಂಬ ಅರಿವಿಲ್ಲ ಎಂದಿರುವ ಅಧಿಕಾರಿಗಳು, ಇದೀಗ ಎರಡೂ ಕುಟುಂಬಗಳಿಗೆ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಒಳಉಡುಪಿನಲ್ಲಿರೋ ಫೋಟೋ ಪೋಸ್ಟ್​ ಮಾಡಿದ ನಿರ್ದೇಶಕನ ಮಗಳಿಗೆ ಬಿಗ್​ ಶಾಕ್​..!

ಟಿವಿ ರಿಪೋರ್ಟರ್​ಗೆ ಪಿಸ್ತೂಲ್​ ತೋರಿಸಿ ಬೆದರಿಸಿ ಸುಲಿಗೆ; ಲೈವ್​ನಲ್ಲಿದ್ದಾಗಲೇ ನಡೆಯಿತು ಕಿಡಿಗೇಡಿಯ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + eleven =
Remember me
