ನವದೆಹಲಿ:ನಾವು ಮಾಡುವ ಪ್ರತಿಯೊಂದು ಕೆಲಸವನ್ನು ದೇವರು ಗಮನಿಸುತ್ತಿರುತ್ತಾನೆ. ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದಾಗಿರಲಿ ಮಾಡಿದ ಕರ್ಮಕ್ಕೆ ಫಲವನ್ನು ಅನುಭವಿಸಲೇಬೇಕು. ಕೆಲವರಿಗೆ ಕರ್ಮಫಲ ತಡವಾಗಿ ಸಿಗಬಹುದು. ಇನ್ನು ಕೆಲವರಿಗೆ ತಕ್ಷಣವೇ ಅವರ ಕರ್ಮಫಲ ದೊರೆಯುತ್ತದೆ ಎಂಬ ಹಿರಿಯರ ಮಾತಿಗೆ ಪುಷ್ಠಿ ನೀಡುವಂತಹ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ರಸ್ತೆಯ ಸಿಗ್ನಲ್‌ನಲ್ಲಿ ಮಹಿಳೆಯೊಬ್ಬರು ಭಿಕ್ಷೆ ಬೇಡುತ್ತಿದ್ದಾಗ ಅಲ್ಲಿಗೆ ಬರುವ ಮಹಿಳಾ ಟ್ರಾಫಿಕ್ ಪೊಲೀಸ್​ ಆಕೆಯನ್ನು ಹಲವು ಬಾರಿ ಒದ್ದು ಅಲ್ಲಿಂದ ಓಡಿಸುತ್ತಾರೆ. ಭಿಕ್ಷುಕಿ ಪರಿಪರಿಯಾಗಿ ಬೇಡಿಕೊಂಡರು ಕರುಣೆ ತೋರದ ಲೇಡಿ ಪೊಲೀಸ್​ ಮೃಗೀಯವಾಗಿ ನಡೆದುಕೊಳ್ಳುತ್ತಾರೆ. ಮೇಲೆ ಏಳಲು ಆಗದೇ ಭಿಕ್ಷುಕಿ ನೆಲದಲ್ಲಿ ತೆವಳುತ್ತಾ ಪಕ್ಕಕ್ಕೆ ಸರಿಯುವ ದೃಶ್ಯ ವಿಡಿಯೋ ನೋಡಿದವರ ಮನಕಲಕುತ್ತದೆ.
ಆದರೆ, ಕರ್ಮ ರಿಟರ್ನ್ಸ್​ ಅನ್ನೋದು ಲೇಡಿ ಪೊಲೀಸ್​ ವಿಚಾರದಲ್ಲಿ ತಕ್ಷಣವೇ ಆಗಿದೆ. ಮಹಿಳೆಯನ್ನು ಒದ್ದು, ಬಲವಂತವಾಗಿ ಜಾಗ ಖಾಲಿ ಮಾಡಿಸಿದ ಮಹಿಳಾ ಟ್ರಾಫಿಕ್ ಪೋಲೀಸ್, ತನ್ನ ಕೆಲಸವನ್ನು ಬಹಳ ಸಮಯದವರೆಗೆ ಉತ್ತಮವಾಗೇ ನಿರ್ವಹಿಸುತ್ತಾರೆ. ಆದರೆ, ಇದ್ದಕ್ಕಿದ್ದಂತೆ ಆಕೆಗೆ ಏನಾಯಿತೋ? ತಲೆ ತಿರುಗಿ ಒಮ್ಮೆಲೇ ಕೆಳಗೆ ಬೀಳುತ್ತಾರೆ. ಅದು ಕೂಡ ಭಿಕ್ಷುಕ ಮಹಿಳೆ ಕುಳಿತಿದ್ದ ಜಾಗದಲ್ಲಿಯೇ ಪ್ರಜ್ಞೆ ತಪ್ಪಿ ಬೀಳುತ್ತಾರೆ.
ಆದರೆ, ಲೇಡಿ ಪೊಲೀಸ್ ಬೀಳುತ್ತಿರುವುದನ್ನು ಕಂಡ ಭಿಕ್ಷುಕಿ ತಕ್ಷಣ ನೀರಿನ ಬಾಟಲಿಯಲ್ಲಿದ್ದ ನೀರನ್ನು ತೆಗೆದುಕೊಂಡು ಆಕೆಯ ಮುಖಕ್ಕೆ ಚಿಮುಕಿಸಿ ನಿಧಾನವಾಗಿ ಎಬ್ಬಿಸುತ್ತಾರೆ. ಬಳಿಕ ಭಿಕ್ಷುಕಿಯ ಕೈಹಿಡಿದುಕೊಂಡು ಲೇಡಿ ಪೊಲೀಸ್​ ನಿಧಾನವಾಗಿ ಮೇಲೇಳುತ್ತಾರೆ. ಈ ದೃಶ್ಯ ಮಾನವೀಯತೆ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ.
దేవుడు అన్ని గమనిస్తూనే ఉంటాడు అనే దానికి ఈ వీడియో నిదర్శనం…
ఒకసారి ఈ వీడియో చూడండి ఫ్రెండ్స్ 🙏🙏🙏pic.twitter.com/7MVRvojRve
— Sreenath Boyapati (@sreenath1089)May 31, 2024

ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಡೀ ಘಟನೆ ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿದೆ. ಆದರೆ, ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿದೆ. ವಿಡಿಯೋ ಮಾತ್ರ ವೈರಲ್​ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ವೀಡಿಯೋ ನೋಡಿದ ಹಲವು ನೆಟ್ಟಿಗರು ಕರ್ಮ ಮಾಡಿದರೆ ಫಲ ಹೀಗೇ ಇರುತ್ತದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಲ್ಲದೇ ದೇವರು ಎಲ್ಲವನ್ನೂ ನೋಡುತ್ತಿದ್ದಾನೆ ಎಂದರ್ಥ ಎಂದು ಕೆಲವರು ಕಾಮೆಂಟ್ ಕೂಡ ಮಾಡುತ್ತಿದ್ದಾರೆ.(ಏಜೆನ್ಸೀಸ್​)
ಮಲಯಾಳಂ ಬ್ಯೂಟಿ ಪಾರ್ವತಿ ಮದುವೆ ಫೋಟೋ ವೈರಲ್! ಅಭಿಮಾನಿಗಳಿಗೆ ಬೇಸರ, ಇಲ್ಲಿದೆ ಅಸಲಿ ಸಂಗತಿ…​

ಸೂಕ್ಷ್ಮಾಣು ಜೀವಿಗಳನ್ನು ನಿಯಂತ್ರಿಸಿ ಆರೋಗ್ಯ ಕಾಪಾಡುವ ತುಳಸಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:20 − 18 =
Remember me
