ಮುಂಬೈ:ವಿಶ್ವದ ಟಾಪ್​ ಮೋಸ್ಟ್​ ಬಿಲೇನಿಯರ್​ಗಳಲ್ಲಿ ಒಬ್ಬರಾದ ಮುಖೇಶ್​ ಅಂಬಾನಿ ಅವರ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಅವರ ವಿವಾಹ ಕಾರ್ಯಕ್ರಮವು ಜುಲೈ 12ರಂದು ಮುಂಬೈನಲ್ಲಿ ನಡೆಯಲಿದ್ದು, ಇದಕ್ಕೂ ಮುನ್ನ ನಡೆದ 2ನೇ ಪ್ರೀ ವೆಡ್ಡಿಂಗ್​ ಇವೆಂಟ್​ ಯಶಸ್ವಿಯಾಗಿ ನಡೆದಿದ್ದು, ಇದರಲ್ಲಿ ರಾಧಿಕಾ ಮರ್ಚೆಂಟ್​ ಧರಿಸಿದ್ದ ಗೌನ್​ ಎಲ್ಲರ ಗಮನ ಸೆಳೆಯುತ್ತಿದೆ.
ಬಾಲ್ಯದ ಸ್ನೇಹಿತರಾಗಿದ್ದ ಅನಂತ್​ ಹಾಗೂ ರಾಧಿಕಾ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಅನಂತ್ ಅಂಬಾನಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರು, ಈ ಎಲ್ಲಾ ಸಂದರ್ಭದಲ್ಲಿ ರಾಧಿಕಾ ಜೊತೆಯಾಗಿದ್ದರು. ಇದೀಗ ರಾಧಿಕಾ ತಮ್ಮ 2ನೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ಬರೆದಿದ್ದ ಲವ್‌ ಲೆಟರನ್ನೇ ಪ್ರಿಂಟ್​​ ಮಾಡಿಸಿದ ಗೌನ್‌ ತೊಟ್ಟು ಮಿಂಚಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ:ಆಂಧ್ರಪ್ರದೇಶ ಡಿಸಿಎಂ ಆಗಿ ಪವನ್​ ಕಲ್ಯಾಣ್​ ನೇಮಕ; ಪ್ರಭಾವಿ ಖಾತೆ ಪಡೆದ ಗಬ್ಬರ್​ ಸಿಂಗ್​
ಈ ಕುರಿತು ಮಾತನಾಡಿರುವ ರಾಧಿಕಾ ಮರ್ಚೆಂಟ್​, ನಾನು 22 ವರ್ಷದವಳಿದ್ದಾಗ ಅನಂತ್​ ನನ್ನ ಜನುಮ ದಿನಕ್ಕೆ ಬರೆದಿರುವ ಪತ್ರಗಳಿವು. ಆತನ ಪಾಲಿಗೆ ನಾನು ಎಷ್ಟು ವಿಶೇಷ ಎಂಬುದು ಆತ ಪತ್ರದಲ್ಲಿ ಬರೆದಿದ್ದಾನೆ. ಇದು ನಮ್ಮ ಪ್ರೀತಿಯ ಸಂಕೇತವಾಗಿದ್ದು, ಇದನ್ನು ನಾನು ನನ್ನ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ತೋರಿಸುತ್ತೇನೆ ಎಂದು ರಾಧಿಕಾ ಮರ್ಚೆಂಟ್​ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್​ ಆಗಿದ್ದು, ಹಲವರು ಈ ಕ್ಯೂಟ್​ ಜೋಡಿಯನ್ನು ನೋಡಿ ಮೆಚ್ಚಿ ಕಮೆಂಟ್​ ಹಾಕುತ್ತಿದ್ದಾರೆ. ಇವರಿಬ್ಬರು ಬಾಲ್ಯದ ಸ್ನೇಹಿತರಾಗಿದ್ದು, 2018ರಲ್ಲಿ ಇವರ ನಡುವಿನ ಪ್ರೇಮ ಬೆಳಕಿಗೆ ಬಂದಿತ್ತು. ಇಶಾ ಅಂಬಾನಿಯ ಮದುವೆಯಿಂದ ಹಿಡಿದು ಅಂಬಾನಿ ಕುಟುಂಬದ ಪ್ರತಿಯೊಂದು ವಿಶೇಷ ಸಮಾರಂಭಗಳಲ್ಲಿ ರಾಧಿಕಾ ಮರ್ಚೆಂಟ್​ ಭಾಗಿಯಾಗುತ್ತಿದ್ದರು.
ವಿಶ್ವದ ಟಾಪ್​ ಮೋಸ್ಟ್​ ಬಿಲೇನಿಯರ್​ಗಳಲ್ಲಿ ಒಬ್ಬರಾದ ಮುಖೇಶ್​ ಅಂಬಾನಿ ಅವರ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಅವರ ವಿವಾಹ ಕಾರ್ಯಕ್ರಮವು ಜುಲೈ 12ರಂದು ಮುಂಬೈನಲ್ಲಿ ನಡೆಯಲಿದೆ. ಮುಂಬೈ ನಗರದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿರುವ ಜಿಯೋ ಕನ್ವೆನ್ಷನ್​ ಸೆಂಟರ್​ನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಸಾಂಪ್ರದಾಯಿಕ ಕೆಂಪು ಮತ್ತು ಚಿನ್ನದ ಕಾರ್ಡ್ ಆಗಿರುವ ‘ಸೇವ್‌ ದಿ ಡೇಟ್‌’ ಆಮಂತ್ರಣ ಪತ್ರಿಕೆಯನ್ನು ಅತಿಥಿಗಳು ಸ್ವೀಕರಿಸುತ್ತಿದ್ದಾರೆ.

A post shared by Ambani Family (@ambani_update)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 10 =
Remember me
