ಕಣ್ಣೂರು:ರಾತ್ರಿಯಾಗುತ್ತಿದ್ದಂತೆ ಸೀಮೆಎಣ್ಣೆ ದೀಪ ಉರಿಸುವುದು ಮೂರು ವರ್ಷಗಳಿಂದ ನಿತ್ಯ ಪರಿಪಾಠ. ಆದರೂ ವಿದ್ಯುತ್ ಬಿಲ್ ಮಾತ್ರ ಪ್ರತಿ ತಿಂಗಳೂ ತಪ್ಪದೇ ಪಾವತಿಸುತ್ತಿದ್ದಾರೆ ಈ 60 ವರ್ಷದ ಮಹಿಳೆ! ಯಾಕೆ ಏನು ಎಂಬ ಸಹಜ ಕುತೂಹಲ ಎಲ್ಲರನ್ನೂ ಕಾಡುತ್ತದೆ. ಆದರೆ, ಕೇರಳ ಸ್ಟೇಟ್ ಇಲೆಕ್ಟ್ರಿಸಿಟಿ ಬೋರ್ಡ್ (ಕೆಎಸ್​ಇಬಿ) ಅಧಿಕಾರಿಗಳಿಗೆ ಇಂಥ ಕುತೂಹಲವೇ ಇಲ್ಲವಂತೆ!
ಕಣ್ಣೂರಿನ ಕೆಳಕ್ಕಂ ಎಂಬಲ್ಲಿನ ನಿವಾಸಿ ಇವರು. ಹೆಸರು ಶಕುಂತಲಾ ಪಳ್ಳಿಕನಕೊನತ್ತು.ಬಡತನ ರೇಖೆಗಿಂತ ಕಡಿಮೆ ಆದಾಯ ಹೊಂದಿರುವ ಮಹಿಳೆ ಈಕೆ.ಮೂರು ವರ್ಷದ ಹಿಂದೆ ಈಕೆಯ ಮನೆಯ ಒಂದು ಭಾಗ ಕುಸಿದು ಬಿದ್ದ ಸಂದರ್ಭದಲ್ಲಿಕೇರಳ ಸ್ಟೇಟ್ ಇಲೆಕ್ಟ್ರಿಸಿಟಿ ಬೋರ್ಡ್ (ಕೆಎಸ್​ಇಬಿ), ಆ ಮನೆಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಮೀಟರನ್ನು ಮನೆಯ ಇನ್ನೊಂದು ಭಾಗಕ್ಕೆ ಅಳವಡಿಸಿ ವಿದ್ಯುತ್ ನೀಡಬೇಕಾಗಿತ್ತು. ಆದರೆ, ಅಲ್ಲಿ ಹೊಸ ಪೋಸ್ಟ್ ಹಾಕದೆ ಮೀಟರ್ ಅಳವಡಿಸಲಾಗದು ಎಂಬ ವರದಿ ಸಲ್ಲಿಸಿದ್ರು ಕೆಎಸ್​ಇಬಿ ನೌಕರರು.ಹೀಗಾಗಿ ವಿದ್ಯುತ್ ಸಂಪರ್ಕ ಮತ್ತೆ ಸಿಗಲಿಲ್ಲ. ಆದರೂ, ಬಿಲ್ ಮಾತ್ರ ಬರುತ್ತಿತ್ತು!
ಈ ಬಗ್ಗೆ ಮಾಧ್ಯಮದವರ ಜತೆಗೆ ಅಳಲು ತೋಡಿಕೊಂಡಿರುವ ಶಕುಂತಲಾ, ಹಳೆ ಕಂಬದಿಂದ 5 ಮೀಟರ್ ದೂರದಲ್ಲಿ ಹೊಸ ಕಂಬ ಹಾಕಿಸುವುದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿದೆ. ಆದರೆ, ಕೆಎಸ್​ಇಬಿ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕೊಡುವುದಕ್ಕೆ ಹಿಂದೇಟು ಹಾಕಿದ್ರು. ನಾಲ್ಕು ತಿಂಗಳ ಹಿಂದೆ ಕಂಬದಿಂದಲೂ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಬಿಪಿಎಲ್ ಕುಟುಂಬದವರಾದ ಕಾರಣ, ಮನೆಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಒದಗಿಸಬೇಕು. ಈ ಬಗ್ಗೆ ಸಾಕಷ್ಟು ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾಗಿ ಮಾತೃಭೂಮಿ ವರದಿ ಮಾಡಿದೆ. (ಏಜೆನ್ಸೀಸ್)
ಕಲ್ಲಿದ್ದಲು ಗಣಿಯಲ್ಲಿ ಪ್ರಾಣಕಳೆದುಕೊಂಡ್ರು 18 ಕಾರ್ಮಿಕರು- ಕಾರ್ಬನ್ ಮೊನೋಕ್ಸೈಡ್ ಪ್ರಮಾಣ ಹೆಚ್ಚಿದ್ದು ಕಾರಣವಂತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + seventeen =
Remember me
