ಬೆಂಗಳೂರು: ಸರ್ಕಾರ ಕೆಲವು ಯೋಜನೆಗಳ ಹಣವನ್ನು ಫಲಾನುಭವಿಗಳ ಖಾತೆಗೇ ನೇರವಾಗಿ ರವಾನೆ ಮಾಡುತ್ತದೆ. ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್​ ಎನ್ನಲಾಗುವ ಈ ವ್ಯವಸ್ಥೆ ಕೆಲವು ಯೋಜನೆಗಳಲ್ಲಿದೆ. ಆದರೆ ಇಲ್ಲೊಂದು ಕಡೆ ಡಿಜಿಟಲ್ ತಂತ್ರಜ್ಞಾನದ ಪರಾಕಾಷ್ಠೆ ಎನ್ನುವಂಥ ಪ್ರಕರಣವೊಂದು ನಡೆದಿದೆ.
ಡಿಜಿಟಲ್ ತಂತ್ರಜ್ಞಾನವನ್ನು ಜನರು ಹಲವಾರು ರೀತಿಯಲ್ಲಿ ಬಳಸುತ್ತಿದ್ದು, ಹಣದ ವಹಿವಾಟಿನಲ್ಲೂ ಇದನ್ನೂ ಪೂರ್ಣಪ್ರಮಾಣದಲ್ಲಿ ಹಲವರು ಬಳಸಿಕೊಳ್ಳುತ್ತಿದ್ದಾರೆ. ಆ ಮೂಲಕ ನಗದುರಹಿತ ವ್ಯವಹಾರ ಮಾಡುತ್ತಿದ್ದಾರೆ. ಅರ್ಥಾತ್, ಮನೆಯಿಂದ ಹೊರಡುವಾಗ ಮರೆತು ಪರ್ಸ್ ಬಿಟ್ಟು ಹೋದರೂ ಚಿಂತೆ ಇಲ್ಲ ಎಂಬ ನಿರಾಳತೆಯಲ್ಲಿ ಈಗಿನ ಜನರಿದ್ದಾರೆ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಇನ್ನು ಕೆಲವು ಕಡೆ ದೇವಸ್ಥಾನದಲ್ಲಿ ಆರತಿ ತಟ್ಟೆಗೆ ಕಾಣಿಕೆ ಹಾಕಲಿಕ್ಕೂ, ಮತ್ತೆ ಕೆಲವು ಕಡೆ ಭಿಕ್ಷೆ ಹಣಕ್ಕೂ ಯುಪಿಐ ಪೇಮೆಂಟ್​, ಕ್ಯೂಆರ್​ ಕೋಡ್ ಮೂಲಕ ಹಣ ಪಾವತಿ ನಡೆದ ಅನೇಕ ನಿದರ್ಶನಗಳಿಗೆ. ಆದರೆ ಈ ಪ್ರಕರಣ ಇನ್ನೂ ಒಂದು ಹೆಜ್ಜೆ ಮುಂದೆ ಎಂಬಂಥದ್ದು.
ಇದನ್ನೂ ಓದಿ:ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಇಲ್ಲೊಬ್ಬಳು ಯುವತಿ ಡಿಜಿಟಲ್ ಮೆಹಂದಿ ಹಾಕಿಕೊಂಡಿದ್ದಾಳೆ. ಅರ್ಥಾತ್ ಈಕೆಯಿಂದ ರಾಖಿ ಕಟ್ಟಿಸಿಕೊಂಡವರು ಉಡುಗೊರೆಯಾಗಿ ನಗದನ್ನೇ ಕೊಡಬೇಕಾಗಿಲ್ಲ. ಬದಲಿಗೆ ಈಕೆಯ ಕೈಯನ್ನು ಸ್ಕ್ಯಾನ್ ಮಾಡಿದರೂ ಸಾಕು, ಹಣ ಸಂದಾಯ ಮಾಡಿ ಬಿಡಬಹುದು. ಅರ್ಥಾತ್, ಖಾತೆಯ ಕ್ಯೂಆರ್​ ಕೋಡ್​ ಈಕೆಯ ಕೈ ಮೇಲಿನ ಮೆಹಂದಿಯಲ್ಲಿ ಮೂಡಿ ಬರುವಂತೆ ಮಾಡಲಾಗಿದೆ. ಕೈ ಮೇಲಿನ ಆ ಮೆಹಂದಿ ಮೇಲೆ ಮೊಬೈಲ್​ಫೋನ್​ನಿಂದ ಸ್ಕ್ಯಾನ್ ಮಾಡಿದರೆ ಖಾತೆಯ ಪೇಮೆಂಟ್ ಗೇಟ್​ವೇ ತೆರೆದುಕೊಳ್ಳುತ್ತದೆ.
ಈ ಕುರಿತ ವಿಡಿಯೋ ತುಣುಕನ್ನು ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಮೂಲಕ ವೈರಲ್ ಆಗುತ್ತಿದೆ.
This is Peak Digital India Moment 😂🇮🇳🚀pic.twitter.com/ciuVuObxcQ
— Ravisutanjani (@Ravisutanjani)August 29, 2023

ಉಡುಪಿ-ದಕ್ಷಿಣಕನ್ನಡ ಜಿಲ್ಲೆಗಳ ಬಳಿಕ ಸ್ವಂತ ಜಿಲ್ಲೆ ಬಗ್ಗೆಯೂ ಸಿದ್ದರಾಮಯ್ಯ ತೀವ್ರ ಬೇಸರ!; ಕಾರಣ?

ಅಪಾರ್ಟ್​​ಮೆಂಟ್​ನ 12ನೇ ಮಹಡಿಯಿಂದ ಹಾರಿ ಪ್ರಾಣ ಕಳ್ಕೊಂಡ್ಲು 10ನೇ ತರಗತಿ ವಿದ್ಯಾರ್ಥಿನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
