ಬರ್ನ್:ದಯಾಮರಣ ಬಯಸುವವರು ಹೆಚ್ಚಿನ ಯಾತನೆ ಇಲ್ಲದೆ ಒಂದೇ ನಿಮಿಷದಲ್ಲಿ ಕೊನೆಯುಸಿರೆಳೆಯುವ ಶವಪೆಟ್ಟಿಗೆ ರೂಪದ ಕ್ಯಾಪ್ಸೂಲ್ ಅನ್ನು ಸ್ವಿಜರ್ಲೆಂಡ್ ಸರ್ಕಾರ ಕಾನೂನುಬದ್ಧ ಗೊಳಿಸಿದೆ. ದಯಾಮರಣ ವಿರೋಧಿ ಗಳು ಈ ಯಂತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕ್ಯಾಪ್ಸೂಲ್​ನಲ್ಲಿ ಆಮ್ಲಜನಕ ಮಟ್ಟ ತೀರಾ ಕಡಿಮೆಯಾಗಿ ಹೈಪೋಕ್ಸಿಯಾ (ಜೀವಕೋಶಕ್ಕೆ ಆಮ್ಲಜನಕ ಲಭ್ಯತೆ ಕುಸಿಯುವುದು) ಮೂಲಕ ಸಾವು ಬರುತ್ತದೆ. ದಯಾ ಮರಣ ಬಯಸಿದವರು ಇಚ್ಛಿಸಿದ ಜಾಗಕ್ಕೆ ಕ್ಯಾಪ್ಸೂಲ್ ಒಯ್ಯಲಾಗುತ್ತದೆ ಎಂದು ಈ ಕ್ಯಾಪ್ಸೂಲ್ ತಯಾರಿಸಿರುವ ಕಂಪನಿ ಹೇಳಿದೆ. ಜೈವಿಕವಿಘಟನೆಯ (ಬಯೋಡಿಗ್ರೆಡೇಬಲ್) ಕ್ಯಾಪ್ಸೂಲ್ ಅನ್ನು ಶವಪೆಟ್ಟಿಗೆಯಾಗಿ ಕಾರ್ಯ ನಿರ್ವಹಿಸುವಂತಾಗಲು ಅದನ್ನು ಬೇಸ್​ನಿಂದ ಬೇರ್ಪಡಿಸಲಾಗುತ್ತದೆ. ‘ಸಾರ್ಕೆ’ ಎಂದು ಹೆಸರಿಸಲಾಗಿರುವ ಈ ಯಂತ್ರ ಮುಂದಿನ ವರ್ಷ ಬಳಕೆಗೆ ಲಭ್ಯವಾಗುವ ಸಂಭವವಿದೆ.
‘ಡಾಕ್ಟರ್ ಡೆತ್’:ಆತ್ಮಹತ್ಯೆ ಕೋಶ (ಸೂಸೈಡ್ ಪಾಡ್) ‘ಡಾಕ್ಟರ್ ಡೆತ್’ ಎಂದೇ ಕುಖ್ಯಾತನಾಗಿರುವ ಫಿಲಿಪ್ ನಿಶ್ಚೆಕ್ ಈ ಚಿಂತನೆಯ ಕೂಸು ಈ ಕ್ಯಾಪ್ಸೂಲ್ ಎಂದು ಹೇಳಲಾಗಿದೆ. ನ್ಯೂಜಿಲೆಂಡ್​ನಲ್ಲಿ ಅಸಿಸ್ಟೆಡ್ ಸೂಸೈಡ್ ಕಾನೂನುಬದ್ಧ ವಾಗಿದ್ದು ಕಳೆದ ವರ್ಷ ಸುಮಾರು 1,300 ಜನರು ದಯಾಮರಣ ಸಂಸ್ಥೆಗಳ ಸೇವೆಯನ್ನು ಬಳಸಿಕೊಂಡಿದ್ದಾರೆ.
26 ಮಕ್ಕಳಿದ್ದ ಶಾಲಾ ಬಸ್​ ಅಪಘಾತ; ದಾರಿ ತಪ್ಪಿ ಹೊಲದ ಏರಿಗೆ ಡಿಕ್ಕಿ ಹೊಡೆದ ಬಸ್…

ರಾಜಧಾನಿ ಬೆಂಗಳೂರಿನಲ್ಲಿ ಮದ್ಯ ಸಿಗಲ್ಲ; ಯಾಕೆ, ಎಷ್ಟು ದಿನ, ಎಲ್ಲೆಲ್ಲಿ..? ಇಲ್ಲಿದೆ ವಿವರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 14 =
Remember me
