ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋ ಹರಿದಾಡುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳು ವಿಶೇಷ ಕಾರಣಕ್ಕೆ ಜನರ ಗಮನ ಸೆಳೆಯುತ್ತವೆ. ಅಂಥದ್ದೇ ವಿಡಿಯೋವೊಂದು ಇದೀಗ ಭಾರಿ ವೈರಲ್​ ಆಗಿದೆ.
ಕೂಲಿ ಕಾರ್ಮಿಕನೊಬ್ಬ ತನ್ನ ತೆಲೆ ಮೇಲೆ ಬೈಕ್​ ಹೊತ್ತುಕೊಂಡು ಏಣಿ ಮೂಲಕ ಬಸ್​ ಏರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ. ಕಾರ್ಮಿಕನ ಸಾಮರ್ಥ್ಯ ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ.
ಗುಲ್ಜಾರ್​ ಸಾಹಬ್​ ಹೆಸರಿನ ಟ್ವಿಟರ್​ ಖಾತೆಯಲ್ಲಿ ಶುಕ್ರವಾರ ವಿಡಿಯೋ ಅಪ್​ಲೋಡ್​ ಆಗಿದ್ದು, ಇದುವರೆಗೂ 76 ಸಾವಿರಕ್ಕೂ ಅಧಿಕ ವೀಕ್ಷಣೆ ಹಾಗೂ 5 ಸಾವಿರಕ್ಕೂ ಹೆಚ್ಚು ಲೈಕ್ಸ್​ ಪಡೆದುಕೊಂಡಿದೆ. ಆತ ನಿಜಕ್ಕೂ ಸೂಪರ್​ ಮಾನವ ಎಂದು ವಿಡಿಯೋಗೆ ಅಡಿಬರಹ ನೀಡಲಾಗಿದೆ.
They are really super human 👏🔥❤️pic.twitter.com/kNruhcRzE1
— ज़िन्दगी गुलज़ार है ! (@Gulzar_sahab)November 25, 2022

ವಿಡಿಯೋದಲ್ಲಿ, ಭಾರಿ ಗಾತ್ರ ಬೈಕ್ ಅನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಬೀಳದಂತೆ ಬ್ಯಾಲೆನ್ಸ್​ ಮಾಡಿಕೊಂಡು, ಬಸ್​ ಬಳಿ ಬಂದು, ಏಣಿ ಏರಿ ಬಸ್​ ಮೇಲೆ ಬೈಕ್​ ಸಾಗಿಸುತ್ತಾನೆ. ಸ್ವಲ್ಪ ಬ್ಯಾಲೆನ್ಸ್​ ಕಳೆದುಕೊಂಡು ಬೈಕ್​ ಬಿದ್ದರೂ ಕಾರ್ಮಿಕನಿಗೆ ಅಪಾಯ ತಪ್ಪಿದ್ದಲ್ಲ. ಅಂತಹುದರಲ್ಲಿ ಕಾರ್ಮಿಕ ಬೈಕ್​ ಸಾಗಿಸಿದ ಪರಿಯಂತೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಡಿಯೋ ನೋಡಿದ ನೆಟ್ಟಿಗರು ಹುಬ್ಬೇರಿಸುವ ಮೂಲಕ ಬಗೆ ಬಗೆಯ ಕಾಮೆಂಟ್​ ಮಾಡಿದ್ದಾರೆ. ನನಗೆ ಅಕ್ಷರಶಃ ಆ ಕುತ್ತಿಗೆಯ ಶಕ್ತಿ ಬೇಕು ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದರೆ, ಈತನೇ ನಿಜವಾದ ಬಾಹುಬಲಿ ಎಂದು ಮತ್ತೊಬ್ಬ ನೆಟ್ಟಿಗ ಟ್ವೀಟ್​ ಮಾಡಿದ್ದಾನೆ. ಮೂರನೆ ಕಾಮೆಂಟಿಗ ಆ ವ್ಯಕ್ತಿಯನ್ನು “ಸೂಪರ್ ಮ್ಯಾನ್” ಎಂದು ಕರೆದರೆ, ನಾಲ್ಕನೆಯವನು “ವಾವ್ ಮಹಾನ್ ಶಕ್ತಿ” ಎಂದು ಕಾಮೆಂಟ್ ಮಾಡಿದ್ದಾರೆ.
ಅಂದಹಾಗೆ ವಿಡಿಯೋದ ಮೂಲ ಯಾವುದು ಎಂಬುದು ತಿಳಿದಿಲ್ಲ. ಆದರೆ, ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.(ಏಜೆನ್ಸೀಸ್​)
ಸೀಟಿನಲ್ಲಿ ಕೂರದೇ ಟ್ರಕ್ ಪಾರ್ಕ್​ ಮಾಡಿದ ಚಾಲಕ: ವಿಡಿಯೋ ನೋಡಿದ್ರೆ ಹುಬ್ಬೇರೋದು ಗ್ಯಾರೆಂಟಿ!​

ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್​ರ​ ಗಾನ ಬಜಾನಕ್ಕೆ ಮನಸೋತ ತುಮಕೂರು ಮಂದಿ!

ನಟಿ ರಶ್ಮಿಕಾ ಮಂದಣ್ಣರಿಂದಾಗಿ ಈ ಎರಡು ಸಿನಿಮಾಗಳಿಗೆ ಎದುರಾಯ್ತು ಸಂಕಷ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 17 =
Remember me
