ಪ್ರಸ್ತುತ ಕಾಲಘಟ್ಟದಲ್ಲಿಒಂದು ಸಿಂಪಲ್ ಕೆಲಸ ಸಿಕ್ಕಿದರೆ ಸಾಕಪ್ಪಾ ಸ್ವಾಮಿ, ಹೇಗಾದರೂ ಜೀವನ ಮಾಡಿಕೊಂಡು ಹೋಗಬಹುದು ಎಂಬುದೇ ಹಲವರ ಲೆಕ್ಕಾಚಾರ. ಅದರಲ್ಲೂ ಕೆಲವರಿಗೆ ಇಂತಹದ್ದೇ ಹುದ್ದೆ ಇರಬೇಕು, ಇಷ್ಟೇ ಸಂಬಳವಿರಬೇಕು ಎಂಬ ನಿರ್ದಿಷ್ಟ ಗುರಿಯಿರುತ್ತದೆ. ಆದರೆ, ಅದು ಅಂದಕೊಂಡಂತೆ ಈಡೇರುವುದಿಲ್ಲ. ಕಾರಣ, ಇಂದು ಒಂದು ಸಣ್ಣ ಸಂಸ್ಥೆಯಲ್ಲಿಯೇ ಜಾಬ್ ಗಿಟ್ಟಿಸಿಕೊಳ್ಳುವುದು ಬಹಳ ಕಷ್ಟಕರವಾಗಿದೆ. ಹೀಗಿದ್ದಮೇಲೆ ನಿರೀಕ್ಷಿಸಿದ ಕೆಲಸ ಸಿಕ್ಕರು, ಬಯಸಿದ ಸಂಬಳ ಸಿಗುವುದು ಮಾತ್ರ ಬಹುತೇಕ ಡೌಟ್​.
ಇದನ್ನೂ ಓದಿ:ಬಸವ ವಚನಗಳು ದಾರಿದೀಪ ಆವರಗೆರೆಯಲ್ಲಿ ವಿಶ್ವಗುರು ಜಯಂತಿ
ಪ್ರತಿದಿನ ಸಾವಿರಾರು ಕಂಪನಿಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಉದ್ಯೋಗ ಅರಸಿ ಬರುವ ಅಭ್ಯರ್ಥಿಗಳ ರೆಸ್ಯೂಮ್​ ನೋಡುವ ಸಂಸ್ಥೆಗಳು, ಅದರಲ್ಲಿ ಕೆಲವನ್ನು ಆಯ್ದು, ಸಂದರ್ಶನ ಮಾಡಬೇಕಿದೆ ಬನ್ನಿ ಎಂದು ಆಹ್ವಾನ ನೀಡಿದರೆ, ಇನ್ನೂ ಕೆಲವು ಕಂಪನಿಗಳು ಮಾತ್ರ ಕೆಲಸಕ್ಕಾಗಿ ಬಂದ ಅರ್ಜಿಗಳನ್ನು ತಿರುಗಿಯೂ ಸಹ ನೋಡುವುದಿಲ್ಲ. ಇದು ಕೆಲವರಿಗೆ ಅತೀವ ನೋವು ಉಂಟುಮಾಡುತ್ತದೆ. ಆದರೂ ಸಹ ಉದ್ಯೋಗ ಸಿಗಬೇಕು ಎಂಬ ಹಂಬಲದಿಂದ ನಿರಂತರವಾಗಿ ಶ್ರಮಿಸುತ್ತಾರೆ.
ಸಂಸ್ಥೆ ತಮ್ಮನ್ನು ನಿರಾಕರಿಸಿದರು ಮತ್ತೊಮ್ಮೆ ಪ್ರಯತ್ನಿಸಿ ನೋಡಬಹುದೇ ಎಂದು ಯೋಚಿಸುವ ಈ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ, ನಾನೇ ನಿಮಗೆ 41,690 ರೂ. ಹಣ ಕೊಡ್ತೀನಿ, ನನ್ನ ಕೆಲಸಕ್ಕೆ ತಗೋಳಿ ಎಂದು ಸಂಸ್ಥೆಯೊಂದಕ್ಕೆ ರೆಸ್ಯೂಮ್​ ಸಮೇತ ಮೇಲ್ ಮಾಡಿದ್ದಾನೆ. ಇಷ್ಟೊಂದು ಹಣ ನೀಡಿ, ಕೆಲಸ ಪಡೆಯುವುದರ ಹಿಂದಿನ ಉದ್ದೇಶವೇನು ಎಂಬುದು ಮಾತ್ರ ತಿಳಿಯದಂತಾಗಿದೆ. ಈ ವಿಷಯ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.
ಇದನ್ನೂ ಓದಿ:ಪಕ್ಕಾ ಇದೇ ಧೋನಿ ಲಾಸ್ಟ್​ ಮ್ಯಾಚ್​? ಜಸ್ಟ್​ ಎರಡೇ ಪದಗಳಲ್ಲಿ ಖಡಕ್​ ಉತ್ತರ ಕೊಟ್ಟ ಸುರೇಶ್​ ರೈನಾ, ಫ್ಯಾನ್ಸ್​ ಶಾಕ್!
ಕೇವಲ ಇಷ್ಟು ಹೇಳಿ ಮುಗಿಸದ ಅಭ್ಯರ್ಥಿ, ನನ್ನ ಕೆಲಸಕ್ಕೆ ಕರೆದುಕೊಳ್ಳಿ ಎಂದು ಪ್ರಾರಂಭದಲ್ಲಿ ಹೇಳಿ, ಕಡೆಯಲ್ಲಿ ಮಾತ್ರ ನಿಮ್ಮ ತಿರಸ್ಕಾರಕ್ಕಾಗಿ ಕಾಯುತ್ತಿರುವೆ ಎಂದು ಬರೆದು ಕಳಿಸಿದ್ದಾನೆ. ಇದನ್ನು ನೋಡಿದ ದೆಹಲಿಯ ಸಾಫ್ಟ್​ವೇರ್​ ಸಂಸ್ಥೆಯ ಅಧ್ಯಕ್ಷರು ಭಾರೀ ಅಚ್ಚರಿಪಡಿಸಿದ್ದು, ಈತನ ಉದ್ದೇಶ ಏನಿರಬಹುದು ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ. ಇದನ್ನು ತಾನು ಮಾತ್ರ ನೋಡಿದರೆ ಸಾಲಲ್ಲ, ನೆಟ್ಟಿಗರು ಸಹ ನೋಡಲಿ ಎಂದು ಅದರ ಸ್ಕ್ರೀನ್​ಶಾಟ್​ಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಗಮನಿಸಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದು, ಈತ ಬೇರೆಯೇ ಹಾದಿ ಹಿಡಿದಿದ್ದಾನೆ. ಖಂಡಿತ ಇವನ ಲೆಕ್ಕಾಚಾರ ಮಾತ್ರ ಸಖತ್ ಸ್ಮಾರ್ಟ್​ ಆಗಿದೆ ಎಂದು ಅಭಿಪ್ರಾಯಿಸಿದ್ದಾರೆ. ಇನ್ನು ಅಭ್ಯರ್ಥಿಯ ಆಫರ್​ಗೆ ಉತ್ತರಿಸಿದ ಸಂಸ್ಥೆಯ ಅಧ್ಯಕ್ಷರಾದ ಚೋಪ್ರಾ, ಕೆಲಸ ಸಿಗದೆ ಹೋದರೂ ಕೊಟ್ಟ ಹಣವನ್ನು ವಾಪಾಸ್​ ಪಡೆಯೋದಿಲ್ಲ ಎಂಬ ಈತನ ನಿರ್ಧಾರ ನಿಜಕ್ಕೂ ಇಂಪ್ರೆಸ್​ ಮಾಡಿತು ಎಂದಿದ್ದಾರೆ. ಅದರೆ, ಆ ವ್ಯಕ್ತಿಗೆ ಉದ್ಯೋಗ ಸಿಕ್ಕಿತೋ, ಇಲ್ಲವೋ ಎಂಬುದು ಮಾತ್ರ ಸದ್ಯ ಅಸ್ಪಷ್ಟ,(ಏಜೆನ್ಸೀಸ್).
ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?

ಇಂಥವರಿಗೆ ಸಂಬಳ ಕಟ್​ ಮಾಡಿ, ಕಳಿಸಿ! ಕ್ರಮ ಕೈಗೊಳ್ಳುವಂತೆ ಸುನಿಲ್ ಗವಾಸ್ಕರ್​​ ಆಗ್ರಹ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen − ten =
Remember me
