ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋ ಹರಿದಾಡುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳು ವಿಶೇಷ ಕಾರಣಕ್ಕೆ ಜನರ ಗಮನ ಸೆಳೆಯುತ್ತವೆ. ಅವುಗಳಲ್ಲಿ ಚಾಲಕರ ಕೌಶಲ್ಯದ ವಿಡಿಯೋಗಳು ಕೂಡ ಒಂದು. ಕೆಲ ಚಾಲಕರು ವಾಹನವನ್ನು ನಿಭಾಸಿಸುವ ರೀತಿ ಜನಮನ್ನಣೆ ಗಳಿಸುತ್ತದೆ. ವಾಹನ ಚಲಾಯಿಸುವುದಷ್ಟೇ ಅಲ್ಲ, ಅದನ್ನು ಸರಿಯಾಗಿ ಪಾರ್ಕ್​ ಮಾಡುವುದು ಕೂಡ ಕೌಶಲವೇ. ಅದರಲ್ಲೂ ಡ್ರೈವರ್​ ಸೀಟಿನಲ್ಲಿ ಕುಳಿತುಕೊಳ್ಳದೇ ಭಾರಿ ವಾಹನವನ್ನು ಪಾರ್ಕ್​ ಮಾಡುವುದೆಂದರೆ ಅದು ಅಸಾಧ್ಯದ ಮಾತು. ಆದರೆ, ಈ ವಿಡಿಯೋ ನೋಡಿದರೆ, ಯಾವುದು ಅಸಾಧ್ಯವಲ್ಲ ಎಂದೆನಿಸುತ್ತದೆ.
ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಾಮೂಲಿಯಂತೆ ಡ್ರೈವರ್ ಸೀಟಿನಲ್ಲಿ ಕೂರದೇ ವಾಹನದ ಹೊರಭಾಗದಲ್ಲೇ ನಿಂತು ಬೃಹತ್​ ಟ್ರಕ್​ ಒಂದನ್ನು ನಿರಾಯಸವಾಗಿ ಪಾರ್ಕ್​ ಮಾಡಿದ್ದಾನೆ. ಟ್ರಕ್​ ಹೊರಗೆ ನಿಂತು ಒಂದು ಕೈಯಲ್ಲಿ ಸ್ಟೀರಿಂಗ್​ ಹಿಡಿದು ಫರ್ಪೆಕ್ಟ್​ ಆಗಿ ಪಾರ್ಕ್​ ಮಾಡಿದ್ದಾನೆ.
ಸದ್ಯ ಈ ವಿಡಿಯೋವನ್ನು ಬ್ಲ್ಯಾಕ್​ ಹೆಸರಿನ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈವರೆಗೂ 4 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಅಲ್ಲದೆ, 1 ಲಕ್ಷ 75 ಸಾವಿರಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದು, 21 ಸಾವಿರಕ್ಕೂ ಹೆಚ್ಚು ಮಂದಿ ರೀಟ್ವೀಟ್​ ಮಾಡಿದ್ದಾರೆ.
That man parallel parked a semi truck, without even being inside. The hype men crazypic.twitter.com/wsUo5or3Tg
— Black (@unbothered___81)November 22, 2022

ಈ ವೈರಲ್​ ವಿಡಿಯೋಗೆ ನಿರಂತರವಾಗಿ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಲವರು ವ್ಯಕ್ತಿಯ ಪಾರ್ಕಿಂಗ್ ಕೌಶಲ್ಯವನ್ನು ಮೆಚ್ಚುತ್ತಿದ್ದಾರೆ, ಆದರೆ ಇತರರು ಈ ವಿಡಿಯೋದಿಂದ ಅಷ್ಟೇನೂ ಪ್ರಭಾವಿತರಾಗಿಲ್ಲ. ಈ ವಿಡಿಯೋ ನೋಡಿ ನಿಮಗೆ ಏನನಿಸಿತು ಎಂಬುದನ್ನು ಕಾಮೆಂಟ್​ ಮಾಡಿ ತಿಳಿಸೋದನ್ನು ಮರೆಯಬೇಡಿ.(ಏಜೆನ್ಸೀಸ್​)
ಆಡಿಯೋ ಕೇಳಿ ನನ್ನ ಮಗಳು ಶಾಕ್​ನಲ್ಲಿದ್ದು, ರೂಂ‌ಮಿಂದ ಹೊರ ಬಂದಿಲ್ಲ: ವೈಷ್ಣವಿ ತಂದೆಯ ನೋವಿನ ಮಾತು

ಉನ್ನತ ಶಿಕ್ಷಣಕ್ಕೆ ಹೊಸ ರೂಪ: ಸುಧಾರಣಾ ಕ್ರಮಕ್ಕೆ ಸರ್ಕಾರ ನಿರ್ಧಾರ; ಏಕೀಕೃತ ನೇಮಕ ವ್ಯವಸ್ಥೆ

ಲಷ್ಕರ್ ಸಂಪರ್ಕಕ್ಕೆ ಯತ್ನ: ಎಕೆ-47 ರೈಫಲ್ ತರಿಸಲು ಯತ್ನಿಸಿದ್ದ ಆರೋಪಿ ಶಾರೀಕ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five + eleven =
Remember me
