ನವದೆಹಲಿ:ಕೆಲದಿನಗಳ ಹಿಂದೆ ಅಮೆರಿಕದಲ್ಲಿ ಪೊಲೀಸರು ಪಾನಮತ್ತ ಚಾಲನೆಯ ಪರೀಕ್ಷೆ ಮಾಡುವಾಗ ಒಬ್ಬ ವಾಹನ ಚಾಲಕನನ್ನು ತಡೆದಿದ್ದರು. ಆತ ಮದ್ಯಪಾನ ಮಾಡಿರದಿದ್ದರೂ, ಮದ್ಯಪಾನ ಮಾಡಿದವನಂತೆ ಕಾಣಿಸುತ್ತಿದ್ದ. ಆದರೆ ಆ ವ್ಯಕ್ತಿ ಮಾತ್ರ ತಾನು ಮದ್ಯಪಾನ ಮಾಡಿಲ್ಲವೆಂದೂ ಬ್ರೆಥ್​ಅನಲೈಸರ್​ ಪರೀಕ್ಷೆಗೆ ಒಳಪಡುವುದಿಲ್ಲ ಎಂದೂ ಪರಿಪರಿಯಾಗಿ ಬೇಡಿಕೊಳ್ಳಲಾರಂಭಿಸಿದ್ದ.
ಆದರೆ ತುಂಬಾ ಬಲವಂತ ಮಾಡಿದ ಬಳಿಕ ಆತ ಬ್ರೆಥ್​ಅನಲೈಸರ್​ ಪರೀಕ್ಷೆಗೆ ಒಳಪಟ್ಟಾಗ, ನಿಗದಿತ ಮಿತಿಗಿಂತಲೂ ಮೂರು ಪಟ್ಟು ಮದ್ಯ ಸೇವಿಸಿರುವುದು ಕಂಡುಬಂದಿತ್ತು! ಈ ಹಿನ್ನೆಲೆಯಲ್ಲಿ ಪೊಲೀಸರು ಡ್ಯಾನಿ ಗಿಯಾನ್ನೊಟ್ಟೋ ಎಂಬ ಆ ಚಾಲಕನನ್ನು ಬಂಧಿಸಿದ್ದರು.
ತಾನು ಮದ್ಯಪಾನ ಮಾಡದಿದ್ದರೂ ಮೂರು ಪಟ್ಟು ಹೆಚ್ಚಾಗಿ ಮದ್ಯಪಾನ ಮಾಡಿರುವುದಾಗಿ ವರದಿ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿಕೊಂಡ ಡ್ಯಾನಿ, ಸಂಪೂರ್ಣ ಆರೋಗ್ಯ ತಪಾಸಣೆಗೆ ಒಳಗಾಗಲು ನಿರ್ಧರಿಸಿದ. ಅದರಂತೆ ಆತ ಪರೀಕ್ಷೆಗೆ ಒಳಪಟ್ಟು ಒಂದು ತಿಂಗಳ ಬಳಿಕ ಬಂದ ವರದಿ ನೋಡಿ ಆತನೇ ಅಚ್ಚರಿಗೊಂಡಿದ್ದ!
ಇದನ್ನೂ ಓದಿ:ಕೊಲೆ ಮಾಡಿ 38 ವರ್ಷಗಳ ನಂತರ ಸಿಕ್ಕಿಬಿದ್ದ ನಟೋರಿಯಸ್‌ ಕ್ರಿಮಿನಲ್‌!
ಏಕೆಂದರೆ ಆತ ಆಟೋ ಬ್ರೆವರಿ ಸಿಂಡ್ರೋಮ್ (ಎಬಿಎಸ್​)​ (ಸ್ವತಃ ದೇಹದಲ್ಲಿ ಮದ್ಯ ತಯಾರಾಗುವುದು) ಸಮಸ್ಯೆಯಿಂದ ಬಳಲುತ್ತಿರುವುದಾಗಿ ವರದಿಯಲ್ಲಿ ಹೇಳಲಾಗಿತ್ತು. ಅಂದರೆ, ಡ್ಯಾನಿ ಸೇವಿಸುವ ಕಾರ್ಬೋಹೈಡರೇಟ್​ ಅನ್ನು ಆತನ ದೇಹ ಮದ್ಯವಾಗಿ, ಅದರಲ್ಲೂ ವಿಶೇಷವಾಗಿ ಬಿಯರ್​ ಆಗಿ ಪರಿವರ್ತಿಸುತ್ತಿತ್ತು. ಹೀಗಾಗಿ, ಆತ ಮದ್ಯಪಾನ ಮಾಡಿರದಿದ್ದರೂ, ಅವನಿಗೆ ಅರಿವಿಲ್ಲದೆ ಮದ್ಯ ಸೇವನೆ ಮಾಡಿರುವ ರೀತಿ ತೋರುತ್ತಿದ್ದ.ಈತನ ವೈದ್ಯಕೀಯ ವರದಿ ಹಾಗೂ ದೇಹದ ಸ್ಥಿತಿಯನ್ನು ಅರಿತುಕೊಂಡ ನಂತರದಲ್ಲಿ ಪೊಲೀಸರು ಈತನ ವಿರುದ್ಧ ದಾಖಲಿಸಿಕೊಂಡಿದ್ದ ಮದ್ಯ ಸೇವಿಸಿ ವಾಹನ ಚಾಲನೆಯ ಪ್ರಕರಣವನ್ನು ಕೈಬಿಟ್ಟಿದ್ದಾರೆ.
ಪೊಲಿಸರು ನನ್ನನ್ನು ಬಂಧಿಸಿದಾಗ ನನಗೆ ಅಚ್ಚರಿಯಾಗಿತ್ತು. ನಾನು ಆಘಾತಕ್ಕೆ ಒಳಗಾಗಿದ್ದೆ. ನಾನು ಮದ್ಯಪಾನ ಮಾಡಿಲ್ಲ ಎಂದು ಎಷ್ಟು ಹೇಳಿದರೂ ಯಾರೊಬ್ಬರೂ ನಂಬಲು ತಯಾರಿರಲಿಲ್ಲ. ಏನು ಮಾಡಬೇಕು ಎಂಬುದು ಗೊತ್ತಾಗದೇ ಹುಚ್ಚು ಹಿಡಿದಂತೆ ಆಗಿತ್ತು ಎಂದು ಡ್ಯಾನಿ ಹೇಳಿದ್ದಾನೆ.ತನ್ನ ದೇಹದಲ್ಲಿನ ಎಬಿಎಸ್​ ಸಮಸ್ಯೆ ತಿಳಿದ ನಂತರದಲ್ಲಿ ಹೆಚ್ಚಿನ ಕಾರ್ಬೋಹೈಡರೇಟ್​ ಬಿಡುಗಡೆ ಮಾಡುವ ಕೇಕ್​ಗಳು, ಬ್ರೆಡ್​, ಪಿಜ್ಜಾಗಳು ಮತ್ತು ಉರುಳೆ ಬ್ರೆಡ್​ (ಬಗೇಲ್​) ತಿನ್ನುವುದನ್ನೇ ನಿಲ್ಲಿಸಿರುವುದಾಗಿಯೂ, ಈಗ ಏನಿದ್ದರೂ ಕುರಿಮಾಂಸ, ಮೀನು ಮತ್ತು ಹಸಿರು ತರಕಾರಿಗಳನ್ನು ಮಾತ್ರ ತಿನ್ನುವುದಾಗಿಯೂ ತಿಳಿಸಿದ್ದಾನೆ.
ಕುಟುಂಬದವರೇ ಅಪ್ರಾಪ್ತಳ ಮರ್ಯಾದಾಗೇಡು ಹತ್ಯೆ ಮಾಡಿದ್ರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − five =
Remember me
