ನವದೆಹಲಿ:2020ರಲ್ಲಿ ಭಾರತದ ಎಕ್ಸ್‌ಪ್ರೆಸ್‌ವೇಗಳು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದ ಅಪಘಾತಗಳಿಂದಾಗಿ 47,984 ಜನರು ಸಾವಪ್ಪಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ವಾಹನ ವಿನ್ಯಾಸ, ರಸ್ತೆ ಇಂಜಿನಿಯರಿಂಗ್ ಮತ್ತು ಕುಡಿದು ಚಾಲನೆ ಮಾಡಿದ್ದು ಈ ಅಪಘಾತಗಳ ಕೆಲವು ಕಾರಣಗಳಾಗಿವೆ ಎಂದಿದ್ದಾರೆ.
ಗುರುವಾರ ಲೋಕಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ರಸ್ತೆ ಸಾರಿಗೆ ಸಚಿವರಾದ ಗಡ್ಕರಿ, 2020ರಲ್ಲಿ ಭಾರತದಾದ್ಯಂತ 3,66,138 ರಸ್ತೆ ಅಪಘಾತಗಳು ಸಂಭವಿಸಿವೆ. ಅವುಗಳಲ್ಲಿ ಹೆದ್ದಾರಿಗಳ ಅಪಘಾತಗಳಲ್ಲೇ 47,984 ಜನರು ಮರಣ ಹೊಂದಿದ್ದಾರೆ. ಈ ಸಂಖ್ಯೆ 2019 ರಲ್ಲಿ ಇನ್ನೂ ಹೆಚ್ಚಾಗಿದ್ದು, ಆಗ ಹೆದ್ದಾರಿ ಅಪಘಾತಗಳಿಂದಾಗಿ 53,872 ಜನರು ಸಾವನ್ನಪ್ಪಿದ್ದರು ಎಂದು ತಿಳಿಸಿದರು.
ಇದನ್ನೂ ಓದಿ:ಗುಜರಾತಲ್ಲಿ ಇನ್ನೆರಡು ಒಮಿಕ್ರಾನ್​ ಪ್ರಕರಣ; ದೇಶದಲ್ಲಿರುವ ಕರೊನಾ ಸೋಂಕಿತರೆಷ್ಟು?
ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣಗಳೇನು ಎಂದು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಪಘಾತಗಳನ್ನು ತಡೆಯಲು ಸರ್ಕಾರ ಹಲವು ಸುರಕ್ಷಾ ಕ್ರಮಗಳನ್ನು ರೂಪಿಸಿದೆ ಎಂದಿದೆ. ರಸ್ತೆ ಸುರಕ್ಷತೆಗಾಗಿ ಬಹುರೂಪೀ ಯೋಜನೆ ಹೊಂದಿದ್ದು, ಶಿಕ್ಷಣ, ರಸ್ತೆಗಳ ಮತ್ತು ವಾಹನಗಳ ಇಂಜಿನಿಯರಿಂಗ್​​ ವಿಧಾನಗಳಲ್ಲಿ ಬದಲಾವಣೆ, ನಿಯಮಗಳ ಪಾಲನೆ ಮತ್ತು ತುರ್ತು ವೈದ್ಯಕೀಯ ಆರೈಕೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಗಡ್ಕರಿ ಹೇಳಿದರು.(ಏಜೆನ್ಸೀಸ್)
ಓ ವಿಧಿಯೇ ನೀನೆಷ್ಟು ಕ್ರೂರಿ… ಶವಪೆಟ್ಟಿಗೆಗೆ ಮುತ್ತಿಟ್ಟು ಕಣ್ಣೀರಿಟ್ಟ ಬ್ರಿಗೇಡಿಯರ್​ ಲಿಡ್ಡರ್​ ಪತ್ನಿ

ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಪೇಜಾವರ ಶ್ರೀಗಳ ತೀವ್ರ ವಿರೋಧ: ಇದು ಜೀವನಶೈಲಿ ಬದಲಿಸುವ ಕೃತ್ಯ ಎಂದ ಸ್ವಾಮೀಜಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 1 =
Remember me
