ನವದೆಹಲಿ:ಕರೊನಾ ಬಂದ ಮೇಲೆ ಮಾಸ್ಕ್​ ಹಾಕಿಕೊಂಡೇ ಇರುವುದು ಅನಿವಾರ್ಯವಾಗಿದೆ. ಆದರೆ ಹಾಗೆ ಮಾಸ್ಕ್ ಹಾಕಿಕೊಂಡಿರುವಾಗ ಮಾತನಾಡಲು ಕಷ್ಟವಾಗುತ್ತದೆ ಎಂದು ಎಷ್ಟೋ ಜನ ಬಾಯಿಯಿಂದ ಕೆಳಗಿಳಿಸಿ ಗಲ್ಲದ ಮೇಲೆ ಮಾಸ್ಕ್​ ಇರಿಸಿಕೊಂಡಿರುವುದನ್ನೂ ಹಲವರು ನೋಡಿರುತ್ತೀರಿ. ಇನ್ನು ಕೆಲವರು ಹಾಗೆ ಪೂರ್ತಿ ಮುಚ್ಚಿಕೊಂಡೇ ಮಾಸ್ಕ್​ ಒಳಗಿನಿಂದಲೇ ಮಾತನಾಡಲು ಯತ್ನಿಸಿದರೂ ಎದುರಿಗಿದ್ದವರಿಗೆ ಎಷ್ಟೋ ಸಲ ಸರಿಯಾಗಿ ಕೇಳಿಸದಿರುವ ಉದಾಹರಣೆಯೂ ಇದೆ.
ಇಂಥದ್ದನ್ನು ತಪ್ಪಿಸಲೆಂದೇ ಇಲ್ಲೊಬ್ಬ ಯುವಕ ಮೈಕ್​-ಸ್ಪೀಕರ್ ಇರುವ ಮಾಸ್ಕ್ ಕಂಡು ಹಿಡಿದಿದ್ದಾನೆ. ಹೀಗೊಂದು ವಿಭಿನ್ನ ಮಾಸ್ಕ್​ ವಿನ್ಯಾಸ ಮಾಡಿದ್ದು ಒಬ್ಬ ವಿದ್ಯಾರ್ಥಿ. ಕೇರಳದ ತ್ರಿಶೂರ್​ನ ಬಿ.ಟೆಕ್ ಮೊದಲ ವರ್ಷದ ವಿದ್ಯಾರ್ಥಿ ಕೆವಿನ್ ಜಾಕೊಬ್​. ಅದರಲ್ಲೂ ಅಪ್ಪ-ಅಮ್ಮ ಮಾಸ್ಕ್​ ಹಾಕಿಕೊಂಡು ಮಾತನಾಡಲು ಕಷ್ಟಪಡುತ್ತಿದ್ದುದೇ ಈ ವಿದ್ಯಾರ್ಥಿ ಇಂಥದ್ದೊಂದು ಮಾಸ್ಕ್​ ಕಂಡುಹಿಡಿಯಲು ಪ್ರೇರಣೆ.
ಇದನ್ನೂ ಓದಿ:ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!
ನನ್ನ ತಂದೆ-ತಾಯಿ ಇಬ್ಬರೂ ಡಾಕ್ಟರ್​. ಕರೊನಾ ಬಂದಾಗಿನಿಂದಲೂ ಅವರು ಮಾಸ್ಕ್ ಧರಿಸುತ್ತಿದ್ದು, ತಮ್ಮ ರೋಗಿಗಳ ಜತೆ ಮಾತನಾಡುವಾಗ ಬಹಳ ಕಷ್ಟಪಡುತ್ತಿದ್ದರು. ಅದರಲ್ಲೂ ಮಾಸ್ಕ್​, ಫೇಸ್​ಶೀಲ್ಡ್​ ಎಲ್ಲ ಹಾಕಿಕೊಂಡು ಮಾತನಾಡುವುದಂತೂ ನಿಜಕ್ಕೂ ಕಷ್ಟ. ಅದನ್ನು ನೋಡಿ ನಾನು ಹೀಗೆ ಮೈಕ್​-ಸ್ಪೀಕರ್ ಅಳವಡಿಸಿರುವ ಮಾಸ್ಕ್​ ರೂಪಿಸಿದ್ದೇನೆ. ಇದರಿಂದ ಅಗತ್ಯ ಸುರಕ್ಷೆಯೂ ಸಿಗುತ್ತದೆ, ಮಾತನಾಡಲೂ ಅನುಕೂಲ ಆಗುತ್ತದೆ ಎನ್ನುತ್ತಾನೆ ಕೆವಿನ್. ಸದ್ಯ ಈತ ಇಂಥ 50ಕ್ಕೂ ಅಧಿಕ ಮಾಸ್ಕ್​ ರೂಪಿಸಿ ದಕ್ಷಿಣ ಭಾರತದ ವೈದ್ಯರನೇಕರಿಗೆ ಕೊಟ್ಟಿರುವುದಾಗಿ ಹೇಳಿದ್ದಾನೆ.
ನೀವೇನಾದ್ರೂ ಈ ಲಿಂಕ್​ ಶೇರ್ ಮಾಡಿದ್ದರೆ ನಿಮಗೆ ವಾಟ್ಸ್​ಆ್ಯಪ್​ ಸೇವೆಯೇ ಸ್ಥಗಿತಗೊಂಡೀತು!; ಕ್ರಮಕೈಗೊಳ್ಳಲು ಸೂಚನೆ ಕೊಟ್ಟ ಹೈಕೋರ್ಟ್​

ಸಾಯುವವನು ಎಲ್ಲಿ ಬೇಕಾದ್ರೂ ಸಾಯಲಿ, ನಾನು ಇಲ್ಲಿ ಕೋವಿಡ್ ಸೆಂಟರ್ ತೆರೆಯಲ್ಲ: ಬಿಜೆಪಿ ಶಾಸಕರ ಖಡಾಖಂಡಿತ ಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
