ನವದೆಹಲಿ:ಪಾನಿಪುರಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ… ನಾಲಿಗೆ ಚಪ್ಪರಿಸಿ ಬೀದಿ ಅಂಚಿನಲ್ಲಿ ನಿಂತು ಸವಿಯುವ ಆಹಾರಗಳಲ್ಲಿ ಪಾನಿಪುರಿ ಕೂಡಾ ಒಂದಾಗಿದೆ. ಸ್ಥಳೀಯ ಅಭಿರುಚಿ ಮತ್ತು ಆದ್ಯತೆಗಳ ಆಧಾರದ ಮೇಲೆ ವಿವಿಧ ಪಾನಿಪುರಿ ಭಾರತದಾದ್ಯಂತ ಕಂಡುಬರುತ್ತದೆ.
ಪಾನಿಪುರಿ ಭಾರತದಲ್ಲಿ ಸಾಕಷ್ಟು ಪ್ರಸಿದ್ಧ ಮತ್ತು ವ್ಯಾಪಕವಾಗಿ ಸೇವಿಸುವ ಬೀದಿ ಆಹಾರವಾಗಿದೆ. ಇವುಗಳನ್ನು ಬೀದಿ ಬದಿ ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಇವುಗಳನ್ನು ಮಾರುವುದರಿಂದ ಏನು ಲಾಭ ಇದ್ಯಾ? ಎಂದು ಪ್ರಶ್ನೆ ಮಾಡುವವರಿ ಪಾನಿಪುರಿ ಮಾರುವ ವ್ಯಾಪಾರಿಯ ದಿನದ ಆದಾಯ ತಿಳಿದು ಅಂತರ್ಜಾಲದಲ್ಲಿ ಚರ್ಚೆಯ ವಿಷಯವಾಗಿದೆ.
ಸೋಶಿಯಲ್​ ಮೀಡಿಯಾ ಬಳಕೆ ದಾರರೊಬ್ಬರು ಪಾನಿಪುರಿ ಮಾರಾಟಗಾರ ಬಳಿ ಹೋಗಿ ‘ನಿಮ್ಮ ದೈನಂದಿನ ಸಂಬಳವನ್ನು ನಾನು ತಿಳಿಯಬಹುದೇ?’ ಎಂದು ಕೇಳುವುದು ಕೇಳುತ್ತಾರೆ. ವ್ಯಾಪಾರಿ 2,500 ರೂ. ‘ದಿನದ ಸಂಬಳ?’ ಎಂದು ಕೇಳಿದಾಗ ಹೌದು ಎಂದು ಉತ್ತರ ನೀಡಿದ್ದಾನೆ.  ಇದನ್ನು ಮಾಸಿಕ ವೇತನ ಎಂದು ಲೆಕ್ಕ ಹಾಕಿದರೆ 75,000 ರೂ. ಆಗುತ್ತದೆ. ಎನ್ನುವುದನ್ನು ನಾವು ವಿಡಯೋದಲ್ಲಿ ನೋಡಬಹುದಾಗಿದೆ.
A post shared by Vijay (@vijay_vox_)
ಈ ಪಾನಿಪುರಿ ವ್ಯಾಪಾರಿಯ ಆದಾಯದ ಬಗ್ಗೆ ಅಂತರ್ಜಾಲದಲ್ಲಿ ಚರ್ಚೆ ಪ್ರಾರಂಭವಾಯಿತು. ಖಾಸಗಿ ಕಂಪನಿ ಉದ್ಯೋಗಿಗಳ ಮಾಸಿಕ ವೇತನಕ್ಕಿಂತ ಪಾನಿಪುರಿ ಬೈಯಾ ಆದಾಯ ಹೆಚ್ಚಿದೆ. ಎಂಬಿಎ ಓದುವುದು ಅನಗತ್ಯ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋ 4 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ. ಈ ವಿಡಿಯೋ ಯಾವ ಸ್ಥಳದಲ್ಲಿ ರೆಕಾರ್ಡ್ ಮಾಡಿರುವುದು ಎನ್ನುವ ನಿಖರವಾದ ಮಾಹಿತಿ ತಿಳಿದು ಬರಬೇಕಿದೆ.
Gold, Silver Price; ಗಗನಕ್ಕೇರಿದ್ದ ಚಿನ್ನದ ಬೆಲೆ..ಈಗ ಎಷ್ಟಿದೆ ನೋಡಿ 10 ಗ್ರಾಂ ಚಿನ್ನದ ದರ


ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:five × 4 =
Remember me
