ಬಿಕನೇರ್​:ದಿನೇದಿನೆ ಹೆಚ್ಚಾಗುತ್ತಿರುವ ಕೋವಿಡ್​-19 ಸೋಂಕನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಬಗೆ ಬಗೆಯ ಕಾರ್ಯತಂತ್ರವನ್ನು ಅನುಸರಿಸುತ್ತಿದೆ. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಿರುವಾಗ ಕೇಂದ್ರ ಸಚಿವ ಅರ್ಜುನ್​ ರಾಂ ಮೇಘವಾಲ್​ ಹೊಸ ಬಗೆಯ ಹಪ್ಪಳವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಈ ಹಪ್ಪಳಗಳನ್ನು ತಿಂದರೆ ದೇಹದಲ್ಲಿ ಪ್ರತಿಕಾಯಗಳು ಹೆಚ್ಚಾಗಿ, ಕರೊನಾ ವೈರಾಣುವಿನ ವಿರುದ್ಧ ಹೋರಾಡಲು ದೇಹಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಇದು ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ.
ಆತ್ಮನಿರ್ಭರ ಭಾರತ ಯೋಜನೆಯಡಿ ತಯಾರಾಗಿರುವ ಭಾಭಿ ಜಿ ಪಾಪಡ್​ ಎಂಬ ಹೆಸರಿನ ಈ ಹಪ್ಪಳವನ್ನು ಬಿಕನೇರ್​ನಲ್ಲಿ ಬಿಡುಗಡೆ ಮಾಡಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅರ್ಜುನ್​ ಮೇಘವಾಲ್​ ಮಾಡಿದ್ದಾರೆ ಎಂಬ ಭಾಷಣದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ. ತಮ್ಮ ಭಾಷಣದಲ್ಲಿ ಭಾಭಿ ಜಿ ಪಾಪಡ್​ ತಿನ್ನುವುದರಿಂದ ಆಗುವ ಆರೋಗ್ಯದ ಲಾಭಗಳನ್ನು ಸಚಿವರು ವಿವರಿಸಿದ್ದು, ಕರೊನಾ ವೈರಾಣು ಸೋಂಕಿನಿಂದ ಹೋರಾಡುವ ಶಕ್ತಿಯನ್ನು ಇದು ಹೆಚ್ಚಿಸುತ್ತದೆ ಎಂದು ಹೇಳಿರುವ ಮಾತು ಆ ವಿಡಿಯೋ ತುಣುಕಿನಲ್ಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಬೇಲಿ ಮೇಲೆ ಕುಳಿತಿರುವವರು ಸ್ವಲ್ಪ ಆಚೀಚೆ ನೆಗೆದರೆ ಸಚಿನ್​ ಪೈಲಟ್​ ಸಿಎಂ
ಕರೊನಾ ವೈರಾಣು ಸೋಂಕಿನ ಪಿಡುಗು ವಿಶ್ವದಾದ್ಯಂತ ಮಾರಕ ಪರಿಣಾಮಗಳನ್ನು ಉಂಟು ಮಾಡುತ್ತಿದ್ದು ಇದುವರೆಗೂ 6 ಲಕ್ಷ ಜನರನ್ನು ಬಲಿ ಪಡೆದಿದೆ. ಅಂದಾಜು 150 ಲಕ್ಷಕ್ಕೂ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಭಾರತವೊಂದರಲ್ಲೇ 12 ಲಕ್ಷ ಸೋಂಕಿತರು ಇದ್ದಾರೆ.
ಭಾರತದಲ್ಲಿನ ಕೋವಿಡ್​ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಶೇ.80ರಿಂದ 90 ಯಶಸ್ವಿಯಾಗಿದೆ ಎಂದು ಏಪ್ರಿಲ್​-ಜೂನ್​ನಲ್ಲಿ ಮಾಡಲಾಗಿದ್ದ ಸಮೀಕ್ಷೆ ತಿಳಿಸಿತ್ತು. ಆದರೆ ಈಗ ಈ ಪ್ರಮಾಣ ಶೇ.77.3ಕ್ಕೆ ಕುಸಿದಿದೆ. ಇಂಥ ಪರಿಸ್ಥಿತಿಯಲ್ಲಿ ಕೇಂದ್ರ ಸಚಿವರೊಬ್ಬರು ಇಂಥ ಅಸಂಬದ್ಧ ಹೇಳಿಕೆ ನೀಡಿರುವುದು ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ.
ಸಾಲಕ್ಕೆ ಅರ್ಜಿ ಸಲ್ಲಿಸಿದ್ದ ಚಹಾ ಮಾರಾಟಗಾರನಿಗೆ ಕಾದಿತ್ತು 50 ಕೋಟಿ ರೂ. ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + twelve =
Remember me
