ನವದೆಹಲಿ:ಯೂಕ್ರೇನ್​ನಲ್ಲಿ ಸಿಲುಕಿರುವ 15 ಸಾವಿರಕ್ಕೂ ಅಧಿಕ ಮಂದಿ ಭಾರತೀಯರನ್ನು ಕೇಂದ್ರ ಸರ್ಕಾರ ಆಪರೇಷನ್​ ಗಂಗಾ ಕಾರ್ಯಾಚರಣೆ ಮೂಲಕ ಸ್ವದೇಶಕ್ಕೆ ಕರೆದುಕೊಂಡು ಬಂದಿದ್ದರೆ, ಇಲ್ಲೊಬ್ಬರು ಭಾರತೀಯ ವ್ಯಕ್ತಿಗೆ ಮಾತ್ರ ಸ್ವದೇಶಕ್ಕೆ ಮರಳಲು ಆಗದ ಪರಿಸ್ಥಿತಿ ಎದುರಾಗಿದೆ.
ಅಂದಹಾಗೆ, ಇವರು ಭಾರತಕ್ಕೆ ಬರಲು ಸಮಸ್ಯೆ ಆಗಿರುವುದು ಬೇರೆ ಯಾರೂ ಅಲ್ಲ, ಪತ್ನಿಯೇ. ಹೌದು.. ಗಗನ್ ಎಂಬ ವ್ಯಕ್ತಿ ಪತ್ನಿಯ ಕಾರಣದಿಂದಾಗಿ ಭಾರತಕ್ಕೆ ಬರಲಾಗದೆ ಪರಿತಪಿಸುವಂತಾಗಿದೆ. ಅಷ್ಟಕ್ಕೂ ತಮ್ಮ ಸಮಸ್ಯೆ ಏನು ಎಂಬುದನ್ನು ಅವರೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಯೂಕ್ರೇನ್​ನಲ್ಲಿ ಸಿಲುಕ್ಕಿದ್ದವರಲ್ಲಿ ಇವತ್ತೊಂದೇ ದಿನ 2,135 ಮಂದಿ ಭಾರತಕ್ಕೆ; ಆಪರೇಷನ್​ ಗಂಗಾದಲ್ಲಿ ರಕ್ಷಣೆ ಆದವರೆಷ್ಟು?
ನಾನೊಬ್ಬ ಭಾರತೀಯ, ನಾನು ಭಾರತಕ್ಕೆ ಹೋಗಬಹುದು. ಆದರೆ ನನ್ನ ಪತ್ನಿ ಭಾರತಕ್ಕೆ ಹೋಗಲು ಸಾಧ್ಯವಿಲ್ಲ, ಏಕೆಂದರೆ ಆಕೆ ಯೂಕ್ರೇನಿನ ಪ್ರಜೆ. ಇಲ್ಲಿ ರಕ್ಷಣಾ ಕಾರ್ಯಾಚರಣೆ ವೇಳೆ ಕೇವಲ ಭಾರತೀಯರನ್ನು ಮಾತ್ರ ಭಾರತಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಹೇಳಿದ್ದಾರೆ. ನನ್ನ ಪತ್ನಿ 8 ತಿಂಗಳ ಗರ್ಭಿಣಿ, ಈಗ ಆಕೆಯನ್ನು ಬಿಟ್ಟು ಹೋಗುವ ಸ್ಥಿತಿಯಲ್ಲಿ ನಾನಿಲ್ಲ ಎಂದು ಹೇಳಿಕೊಂಡಿರುವ ಇವರು ಅದೇ ಕಾರಣದಿಂದಾಗಿ ಪೋಲಂಡ್​ಗೆ ಹೋಗುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಅಲ್ಲದೆ ಸದ್ಯಕ್ಕೆ ಕೀವ್​ನಿಂದ ಹೊರಟು ಲಿವಿವ್​ನಲ್ಲಿರುವ ಗೆಳೆಯರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.
ಸೀಮಂತದಲ್ಲಿ ದುರಂತ, ಪಾಲ್ಗೊಂಡ 15 ಜನರಿಲ್ಲ ಈಗ ಜೀವಂತ!; ಆ 9 ಮಂದಿಯಲ್ಲಿ ಭಾರಿ ಆತಂಕ…

52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ಸಂದೇಶವಿದು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 3 =
Remember me
