ಬೆಂಗಳೂರು:ನಮ್ಮೀ ಪ್ರಪಂಚವು ಅನೇಕ ಆಶ್ಚರ್ಯಕರ ಸಂಗತಿಗಳಿಂದ ತುಂಬಿದೆ. ಆಗಾಗ ನಾವು ಕೇಳುವ, ನೋಡುವ ಚಿತ್ರ ವಿಚಿತ್ರ ವಿಷಯಗಳು ನಂಬಲು ಕಷ್ಟವಾಗುತ್ತದೆ. ಇತ್ತೀಚಿನ ದಿನಗಳಲ್ಲಂತೂ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವೊಮ್ಮೆ ನಾವು ನೋಡಿರದ ಅಪರೂಪದ ಜೀವಿಗಳ ಫೋಟೋಗಳು ವೈರಲ್ ಆಗಿದ್ದರೆ, ಕೆಲವೊಮ್ಮೆ ವಿಚಿತ್ರ ಪ್ರಾಣಿಗಳ ಫೋಟೋಗಳು ವೈರಲ್ ಆಗುತ್ತವೆ. ಇದೀಗ ಇದೇ ರೀತಿಯ ಫೋಟೋ ವೈರಲ್ ಆಗಿದ್ದು, ಇದನ್ನು ರಾತ್ರಿ ನೋಡಿದರಂತೂ ನೀವು ಬೆಚ್ಚಿ ಬೀಳುವುದಂತೂ ಖಂಡಿತ. ಅಂದಹಾಗೆ ಈ ಫೋಟೋ ಯಾವುದೇ ಪ್ರಾಣಿಯದ್ದಲ್ಲ, ಮತ್ತೆ? ಮುಂದೆ ಓದಿ…
ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್
ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಬಹಳ ವೇಗವಾಗಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ, ನೆಲದ ಮೇಲೆ ಇರಿಸಲಾಗಿರುವ ಎರಡು ಭಾರವಾದ ಮರದ ಕೊಂಬೆಗಳ ನಡುವೆ ಯಾರದ್ದೋ ಪಾದ ಇದೆ ಎಂದು ಕಂಡುಬರುತ್ತದೆ. ಇದು ನೋಡಲು  ತುಂಬಾ ಭಯಾನಕವಾಗಿದೆ. ಆದರೆ ಇದು ಯಾವುದೇ ಮನುಷ್ಯನ ಪಾದವಲ್ಲ. ಫೋಟೋ ವೈರಲ್ ಆದಾಗ, ಕಾಮೆಂಟ್‌ಗಳಲ್ಲಿ ಕೆಲವರು ಈ ಪಾದದ ಬಗ್ಗೆ ಸತ್ಯವನ್ನು ಹೇಳಿದರು. ಅಂದಹಾಗೆ ಈ ಪಾದದ ಬಗ್ಗೆ ನಾವು ನಿಮಗೆ ಸತ್ಯವನ್ನು ಹೇಳುವ ಮೊದಲು, ವೈರಲ್ ಫೋಟೋವನ್ನು ನೋಡಿ.
ವೈರಲ್ ಫೋಟೋ ಇಲ್ಲಿದೆ ನೋಡಿ
What if you see this in your garden !! Guess what is this.pic.twitter.com/zsTEkyh4yc
— Parveen Kaswan (@ParveenKaswan)March 31, 2024

ಫೋಟೋದಲ್ಲಿರುವುದು ಶಿಲೀಂಧ್ರ ಅರ್ಥಾತ್ ಫಂಗಸ್ ಫೋಟೋ.  ಕ್ಸಿಲೇರಿಯಾ ಪಾಲಿಮಾರ್ಫಾ ಎಂದೂ ಕರೆಯಲ್ಪಡುವ  ಈ ಶಿಲೀಂಧ್ರ ವನ್ನು “ಸತ್ತ ಮನುಷ್ಯನ ಬೆರಳುಗಳು” ಎಂದು ಕರೆಯಲಾಗುತ್ತದೆ. ಗಾಯಗೊಂಡ ಮರದ ಬುಡಗಳಿಂದ ಮತ್ತು ಕೊಳೆಯುತ್ತಿರುವ ಮರದಿಂದ ಇದು ಬೆಳೆಯುವುದು ಮತ್ತು ಕೊಳೆಯುವುದನ್ನು ಕಾಣಬಹುದು.
ಕೆಲವರು ಈ ಫೋಟೋ ನೋಡಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ. “ಇದು ಪ್ರೇತದ ತರಹ ಕಾಣುತ್ತದೆ… ರನ್, ರನ್ “, “ಪ್ರೇತವು ಕಪ್ಪು ಪಾದವನ್ನು ಹೊಂದಿದೆ”, “ತಾತ್ಯಾ ಸ್ಕಾರ್ಪಿಯಾನ್” ತರಹವಿದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಕೆಲವೆಡೆ ಬಿಸಿಲಿನ ಝಳ, ವಿವಿಧೆಡೆ ಭಾರೀ ಮಳೆ ನಿರೀಕ್ಷೆ; ಏಪ್ರಿಲ್ ಆರಂಭದಲ್ಲಿ ಹವಾಮಾನ ಹೇಗಿರುತ್ತದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 12 =
Remember me
