ನವದೆಹಲಿ:ಹಮಾಸ್ ಬಂದೂಕುಧಾರಿಗಳು ದಕ್ಷಿಣ ಇಸ್ರೇಲ್ ಮೇಲೆ ದಾಳಿ ಮಾಡಿದಾಗ ಸುಮಾರು 1,140 ಜನರು ಸಾವನ್ನಪ್ಪಿದ್ದು, ಯುದ್ಧ-ಹಾನಿಗೊಳಗಾಗಿದೆ. ಪ್ಯಾಲೆಸ್ಟೀನಿಯನ್ ಪ್ರದೇಶದ ಉತ್ತರದಲ್ಲಿ ವಾಸವಾಗಿರುವ ಮಹಿಳೆ ತನ್ನ ಮನೆಯಿಂದ ಮೈಲುಗಳಷ್ಟು ದೂರದಲ್ಲಿರುವ ದಕ್ಷಿಣ ಗಾಜಾದ ಆಸ್ಪತ್ರೆಗೆ ನಡೆದುಕೊಂಡು ಬಂದು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಅಕ್ಟೋಬರ್ 7 ರಂದು ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದ ಕೆಲವು ದಿನಗಳ ನಂತರ, ಯುವತಿ ತನ್ನ ಇತರ ಮೂರು ಮಕ್ಕಳೊಂದಿಗೆ ಕಾಲ್ನಡಿಗೆಯಲ್ಲಿ ಬೀಟ್ ಹನುನ್‌ನಲ್ಲಿರುವ ಕುಟುಂಬ ಮನೆಯಿಂದ ಸುರಕ್ಷತೆಗಾಗಿ ಬೇರೆ ಕಡೆ ತೆರಳುತ್ತಿತ್ತು. ಯುದ್ಧ ವೇಳೆ  ಮಹಿಳೆ ಆರು ತಿಂಗಳ ಗರ್ಭಿಣಿಯಾಗಿದ್ದಳು.
ಇಮಾನ್ ಅಲ್-ಮಸ್ರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ. ಮಹಿಳೆಯು ಜಬಾಲಿಯಾ ನಿರಾಶ್ರಿತರ ಶಿಬಿರಕ್ಕೆ ಐದು ಕಿಲೋಮೀಟರ್‌ ದೂರ ನಡೆದರು. ದಕ್ಷಿಣಕ್ಕೆ ದೇರ್ ಅಲ್-ಬಾಲಾಹ್‌ಗೆ ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆ ಸಿಗಲಿಲ್ಲ. ಈ ವೇಳೆ ನಡೆದುಕೊಂಡು ಹೋಗಿದ್ದಾರೆ.ಯುದ್ಧದಿಂದಾಗಿ ಇತರೆ ರೋಗಿಗಳಿಗೆ ಆಸ್ಪತ್ರೆಯಲ್ಲಿ ಸ್ಥಳಾವಕಾಶ ಕಲ್ಪಿಸಲು, ಮಹಿಳೆಯು ನವಜಾತ ಶಿಶುಗಳೊಂದಿಗೆ ಆಸ್ಪತ್ರೆಯನ್ನು ತೊರೆದಿದ್ದಾರೆ.
ಸದ್ಯ ಇಮಾನ್‌ ಅವರು ಡೀರ್ ಅಲ್-ಬಾಲಾಹ್‌ನಲ್ಲಿ ಇಕ್ಕಟ್ಟಾದ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಜನ್ಮ ನೀಡಿದ ನಾಲ್ಕರಲ್ಲಿ ಮೂರು ಮಕ್ಕಳು ಆರೋಗ್ಯವಾಗಿವೆ. ಮತ್ತೊಂದು ಮಗು ಕೇವಲ 2 kg ತೂಗುತ್ತದೆ. ಈ ಮಗು ಬದುಕುಳಿಯಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರಿಂದ, ಆ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಮಹಿಳೆ ಹೋಗಿದ್ದಾರೆ.
ಅಯೋಧ್ಯೆ ಪ್ರವಾಸ; ಶ್ರೀರಾಮನನ್ನು ನೋಡಲು..ನಿಮ್ಮ ಪ್ರವಾಸವನ್ನು ಈ ರೀತಿ ಪ್ಲ್ಯಾನ್​​ ಮಾಡಿ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 17 =
Remember me
