ಛತ್ತೀಸ್​ಗಢ:ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಆಯಾ ರಾಜ್ಯ ಸರ್ಕಾರ ಮಧ್ಯಾಹದ ಬಿಸಿಯೂಟ ವ್ಯವಸ್ಥೆಯನ್ನು ಈ ಹಿಂದಿನಿಂದಲೂ ಪೂರೈಸುತ್ತ ಬಂದಿದೆ. ಈ ಆಹಾರದಲ್ಲಿ ಮಕ್ಕಳಿಗೆ ಪೌಷ್ಠಿಕತೆಯನ್ನು ನೀಡುವ ಮಹತ್ವದ ಗುರಿಯನ್ನು ಹೊಂದಿರುವ ಸರ್ಕಾರಗಳು, ಕೆಲವೊಮ್ಮೆ ಅಲ್ಲ ಹಲವೊಮ್ಮೆ ಅದನ್ನು ಒದಗಿಸುವಲ್ಲಿ ಎಡವುತ್ತದೆ. ಈ ಸಾಲಿಗೆ ಛತ್ತೀಸಗಢ ಸರ್ಕಾರ ಸೇರಿದೆ.
ಇದನ್ನೂ ಓದಿ:ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ: ಅಧ್ಯಕ್ಷರಾಗಿ ಆರ್​. ಶ್ರೀಧರ್, ಉಪಾಧ್ಯಕ್ಷರಾಗಿ ಮೋಹನ್ ಕುಮಾರ್ ಆಯ್ಕೆ
ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕಿದ್ದ ಜಿಲ್ಲಾಡಳಿತ, ಬಲರಾಮಪುರ ಜಿಲ್ಲೆಯ ಬಿಜಕುರಾದ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅರಿಶಿಣ ಬೆರೆಸಿದ ಅನ್ನ ಬಿಟ್ಟರೆ ಬೇರೇನೂ ಆಹಾರವಾಗಿ ಕೊಡುತ್ತಿಲ್ಲ ಎಂಬುದನ್ನು ಗಮನಹರಿಸಿಲ್ಲ. ಇತರ ರಾಜ್ಯಗಳ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಉಪ್ಪು, ಚಪಾತಿ, ಅನ್ನ ಕೊಡಲಾಗುತ್ತಿದೆ. ಆದ್ರೆ ಇಲ್ಲಿ ಇಂತಹ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ, ಸರ್ಕಾರ ನೀಡುತ್ತಿರುವ ತರಕಾರಿಗಳು ಮತ್ತು ಬೇಳೆಕಾಳುಗಳು ಆಗಾಗ್ಗೆ ಕಾಣೆಯಾಗುತ್ತಿರುವುದು. ಇದರಿಂದ ಮಕ್ಕಳು ಪೌಷ್ಟಿಕಾಂಶದ ಊಟದಿಂದ ವಂಚಿತರಾಗುತ್ತಿದ್ದಾರೆ.
ಬಿಜಕೂರ ಪ್ರಾಥಮಿಕ ಶಾಲೆಯು 43 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ನೀಡುತ್ತಿದ್ದು, ಕಳೆದ ಒಂದು ವಾರದಿಂದ ಸರಬರಾಜು ಮಾಡುತ್ತಿದ್ದ ತಂಡ ಯಾವುದೇ ತರಕಾರಿ, ಬೆಳೆ-ಕಾಳುಗಳನ್ನು ನೀಡಿಲ್ಲ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಬೆಳೆ-ಕಾಳುಗಳ ಬದಲಿಗೆ ಅರಿಶಿನ ಮಿಶ್ರಿತ ಊಟವನ್ನು ಬಡಿಸಲಾಗುತ್ತಿದೆ.
ಇದನ್ನೂ ಓದಿ:ಸೃಜನಶೀಲ ಚಟುವಟಿಕೆಗಳಿಂದ ಮಾತ್ರ ಶಿಕ್ಷಣದಲ್ಲಿ ಉತ್ತಮ ಸಾಧನೆ ಸಾಧ್ಯ
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಶಿಕ್ಷಣಾಧಿಕಾರಿ ದೇವೇಂದ್ರ ನಾಥ್ ಮಿಶ್ರಾ, “ಲೋಪ ಎಲ್ಲಿದೆ ಎಂಬುದನ್ನು ಪರಿಶೀಲಿಸಲು ಸಮಗ್ರ ತನಿಖೆ ನಡೆಸಲಾಗುತ್ತಿದೆ. ಈ ವಿಷಯ ನನ್ನ ಗಮನಕ್ಕೆ ಬಂದಿದ್ದು, ಇಂದೇ ತನಿಖೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ತರಕಾರಿಯನ್ನು ಸರಿಯಾಗಿ ಪೂರೈಸಬೇಕಿದ್ದವರ ನಿರ್ಲಕ್ಷ್ಯದಿಂದ ಮಕ್ಕಳಿಗೆ ಸರಿಯಾದ ಊಟ ಸಿಕ್ಕಿಲ್ಲ ಎಂಬ ಬೇಸರ ನಮಗಿದೆ” ಎಂದಿದ್ದಾರೆ,(ಏಜೆನ್ಸೀಸ್)
ವಿರಾಟ್​ ಕೊಹ್ಲಿ ಫೋನ್​ ವಾಲ್​ಪೇಪರ್​ನಲ್ಲಿರುವ ಈ ವ್ಯಕ್ತಿ ಯಾರು ಗೊತ್ತೇ? ಇವರ ಹಿನ್ನಲೆ ತಿಳಿದ್ರೆ ಅಚ್ಚರಿಪಡ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eleven =
Remember me
