ಇಂದು ಎಂದಿನಂತಲ್ಲ, ತುಸು ವಿಶೇಷ ದಿನ. ಇದಕ್ಕೆ ಕಾರಣ ಇವತ್ತಿನ ದಿನಾಂಕ.
02-02-2020 ಇಂದಿನ ಡೇಟ್​. ನೀವು ಎಡದಿಂದ ಬಲಕ್ಕೆ ಓದಿದರೂ, ಬಲದಿಂದ ಎಡಕ್ಕೆ ಓದಿದರೂ ಒಂದೇ ತರಹ ಇದೆ. ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಇಂತಹ ಅಪರೂಪದ ದಿನಾಂಕ ಬರೋಬ್ಬರಿ 900 ವರ್ಷಗಳ ನಂತರ ಬಂದಿದೆ…!
ಇದಕ್ಕೆ ಪ್ಯಾಲಿಂಡ್ರೋಮ್​ ದಿನಾಂಕವೆಂದು ಕರೆಯಲಾಗುತ್ತದೆ. ಅದರರ್ಥ ನೀವು ಎಡದಿಂದ ಬಲಕ್ಕೆ ಓದಿದರೂ, ಬಲದಿಂದ ಎಡಕ್ಕೆ ಓದುತ್ತ ಹೋದರೂ ಎಲ್ಲ ಒಂದೇ ತರಹ ಇರುತ್ತದೆ. ದಿನಾಂಕವನ್ನು ಬರೆಯುವ ಕ್ರಮ ಒಂದೊಂದು ತರಹ ಇರುತ್ತದೆ. ಕೆಲವು ಕಡೆ ಮೊದಲು ತಾರೀಖು, ನಂತರ ತಿಂಗಳು ಅದಾದ ಬಳಿಕ ವರ್ಷವನ್ನು ನಮೂದಿಸುತ್ತಾರೆ. ಇನ್ನು ಹಲವು ಕಡೆ ಮೊದಲು ತಿಂಗಳು, ಬಳಿಕ ದಿನಾಂಕ, ನಂತರ ವರ್ಷವನ್ನು ಬರೆಯುತ್ತಾರೆ. ಆದರೆ ಈ 02-02-2020ರಂತಹ ತಾರೀಖುಗಳು ಬಂದಾಗ ಹೇಗೇ ಬರೆದರೂ ಏನೂ ವ್ಯತ್ಯಾಸವಿಲ್ಲದಂತಾಗುತ್ತದೆ.
ಅದೇನೆ ಇರಲಿ ಇವತ್ತಿನ ವಿಶೇಷ ದಿನ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ವೈರಲ್​ ಆಗಿದೆ. ಅದರಲ್ಲೂ ಟ್ವಿಟರ್​ನಲ್ಲಂತೂ ಅನೇಕರು ತಮ್ಮದೇ ಕ್ರಿಯೇಟಿವಿಗೆ ತಕ್ಕಂತೆ ಇಂದಿನ ತಾರೀಖನ್ನು ವರ್ಣಿಸಿದ್ದಾರೆ.
ಪೋರ್ಟ್ಲ್ಯಾಂಡ್​ ವಿಶ್ವವಿದ್ಯಾಲಯದ ಪ್ರೊಫೆಸರ್​ ಅಝೀಜ್​ ಇನಾನ್​ ಅವರು, ನಮ್ಮ ಜೀವಿತಾವಧಿಯಲ್ಲಿ ಇಂತಹ ಅಪರೂಪದ ಪ್ಯಾಲಿಂಡ್ರೋಮ್​ ದಿನಾಂಕವನ್ನು ನೋಡಲು ಸಿಕ್ಕಿದ್ದು ನಮ್ಮ ಅದೃಷ್ಟ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಸುಮಾರು 900 ವರ್ಷಗಳ ಹಿಂದೆ 11/11//1111 ಎಂಬ ಅಪರೂಪದ ದಿನ ಬಂದಿತ್ತು. ಅದಾದ ಮೇಲೆ ಮತ್ತೊಮ್ಮೆ 02-02-2020 ಪ್ಯಾಲಿಂಡ್ರೋಮ್​ ಡೇಟ್​ ಬಂದಿದೆ. ಇನ್ನು 101 ವರ್ಷಗಳ ನಂತರ ಅಂದರೆ 12/12/2121ರಂದು ಇಂಥದ್ದೇ ದಿನ ಬರಲಿದೆ.
ಈ ಮಧ್ಯೆ 12/12/1212ರಂದು ಒಂದು ಸ್ಪೆಶಲ್​ ಡೇಟ್ ಬಂದಿತ್ತು. ಆದರೆ ಇದು ಪ್ಯಾಲಿಂಡ್ರೋಮ್​ ಎನ್ನಿಸಿರಲಿಲ್ಲ. ಆದರೆ ಇಲ್ಲೊಂದು ಅಂಶವನ್ನು ಗಮನಿಸಬೇಕು. ಮೊದಲು ತಿಂಗಳು ಬರೆದು ನಂತರ ದಿನಾಂಕ, ಇಸ್ವಿ ಬರೆಯುವ ಪದ್ಧತಿ ಹಾಗೂ ಮೊದಲು ದಿನಾಂಕ ಬರೆದು ನಂತರ ತಿಂಗಳು, ವರ್ಷ ಬರೆಯುವ ಪದ್ಧತಿಗಳಲ್ಲಿ ಮಧ್ಯೆಮಧ್ಯೆ ಇಂತಹ ಪ್ಯಾಲಿಂಡ್ರೋಮ್​ ದಿನಾಂಕಗಳು ಸಿಕ್ಕರೂ ಸಹ ಹೀಗೆ 02-02-2020ರಂತಹ ದಿನ ಸಿಗುವುದು ಅಪರೂಪ. ಇದು ಎಲ್ಲರಿಗೂ ಸಾಮಾನ್ಯವಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − twelve =
Remember me
