ಮುಂಬೈ:ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ (Tata Investment Corporation) ಷೇರುಗಳಲ್ಲಿ ಬಲವಾದ ಏರಿಕೆ ಕಂಡುಬಂದಿದೆ. ಟಾಟಾ ಇನ್ವೆಸ್ಟ್‌ಮೆಂಟ್‌ನ ಷೇರುಗಳು ಬುಧವಾರ ಶೇ. 5ರಷ್ಟು ಏರಿಕೆಯಾಗಿ 9280.40 ರೂಪಾಯಿ ತಲುಪಿದವು. ಅಲ್ಲದೆ, ಈ ಷೇರುಗಳ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿ ದಾಖಲೆ ಸೃಷ್ಟಿಯಾಯಿತು.
ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಷೇರುಗಳ ಬೆಲೆ ಕಳೆ 5 ದಿನಗಳಲ್ಲಿ ಅಂದಾಜು 38% ರಷ್ಟು ಏರಿಕೆಯಾಗಿದೆ. ಕಳೆದ 5 ದಿನಗಳಲ್ಲಿ ಕಂಪನಿಯ ಷೇರುಗಳ ಬೆಲೆ 2500 ರೂಪಾಯಿಗಿಂತ ಹೆಚ್ಚು ಏರಿಕೆಯಾಗಿದೆ. ಈ ಷೇರುಗಳ ಬೆಲೆ 5 ದಿನಗಳಲ್ಲಿ 6734 ರೂ.ನಿಂದ 9280.40 ರೂಪಾಯಿಗೆ ತಲುಪಿದೆ.
ಕಳೆದ ವಾರ, 3 ಸೆಮಿಕಂಡಕ್ಟರ್ ಪ್ಲಾಂಟ್‌ಗಳ ಪ್ರಸ್ತಾವನೆಗಳಿಗೆ ಕ್ಯಾಬಿನೆಟ್ ತನ್ನ ಅನುಮೋದನೆಯನ್ನು ನೀಡಿದ್ದು, ಈ ಪೈಕಿ 2 ಪ್ಲಾಂಟ್‌ಗಳನ್ನು ಟಾಟಾ ಗ್ರೂಪ್ ಗ್ರೂಪ್​ ಸ್ಥಾಪಿಸಲಿದೆ. ಗುಜರಾತ್​ ಮತ್ತು ಅಸ್ಸಾಂನಲ್ಲಿ ಟಾಟಾ ಗ್ರೂಪ್​ ಸೆಮಿಕಂಡಕ್ಟರ್ ಘಟಕಗಳನ್ನು ಸ್ಥಾಪಿಸಲಿದೆ. ಈ ಘಟಕಗಳ ವೆಚ್ಚ 1.26 ಲಕ್ಷ ಕೋಟಿ ರೂ. ಈ ಸ್ಥಾವರಗಳ ನಿರ್ಮಾಣವು 100 ದಿನಗಳಲ್ಲಿ ಪ್ರಾರಂಭವಾಗಲಿದೆ. ತೈವಾನೀಸ್ ಕಂಪನಿ ಪವರ್‌ಚಿಪ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ ಸಹಯೋಗದೊಂದಿಗೆ ಎಲೆಕ್ಟ್ರಾನಿಕ್ಸ್ ಸೆಮಿಕಂಡಕ್ಟರ್ ಫ್ಯಾಬ್ ಸ್ಥಾವರವನ್ನು ಟಾಟಾ ಸ್ಥಾಪಿಸಲಿದೆ. ಈ ಘಟಕವು ಗುಜರಾತ್​ನ ಧೋಲೆರಾದಲ್ಲಿ ಸ್ಥಾಪನೆಯಾಗಲಿದೆ. ಈ ಘಟಕದಲ್ಲಿ 91000 ಕೋಟಿ ರೂಪಾಯಿ ಹೂಡಿಕೆಯಾಗಲಿದೆ. ಇದರ ಜೊತೆಗೆ, ಅಸ್ಸಾಂನಲ್ಲಿ ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ ಪ್ರೈವೇಟ್ ಲಿಮಿಟೆಡ್ ಚಿಪ್ ಅಸೆಂಬ್ಲಿ ಮತ್ತು ಪರೀಕ್ಷಾ ಘಟಕ ಸ್ಥಾಪಿಸಲಾಗುವುದು. ಈ ಸ್ಥಾವರದಲ್ಲಿ 27000 ಕೋಟಿ ರೂಪಾಯಿ ಹೂಡಿಕೆಯಾಗಲಿದೆ. ಟಾಟಾ ಗ್ರೂಪ್​ ಕಂಪನಿಗಳಲ್ಲಿ ಟಾಟಾ ಇನ್ವೆಸ್ಟ್​ಮೆಂಟ್​ ಕಾರ್ಪೋರೇಷನ್​ ಹೂಡಿಕೆ ಮಾಡುತ್ತದೆ.
ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಷೇರುಗಳ ಬೆಲೆ ಕಳೆದ 6 ತಿಂಗಳಲ್ಲಿ 275% ರಷ್ಟು ಹೆಚ್ಚಾಗಿದೆ. ಈ ಷೇರುಗಳ ಬೆಲೆ 6 ತಿಂಗಳಲ್ಲಿ 6807 ರೂ.ಗಳಷ್ಟು ಹೆಚ್ಚಾಗಿದೆ. ಆದರೆ, ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಈ ಷೇರುಗಳ ಬೆಲೆ 117% ಕ್ಕಿಂತ ಹೆಚ್ಚು ಏರಿಕೆಯಾಗಿದೆ.

ಒಂದೇ ವಾರದಲ್ಲಿ 25% ಹೆಚ್ಚಳ ಕಂಡ ಟಾಟಾ ಷೇರು: ಫಿಚ್​ ರೇಟಿಂಗ್ಸ್​ ಹೇಳಿದ್ದೇನು?

ಎನರ್ಜಿ ಷೇರು ಸತತ ಲೋವರ್​ ಸರ್ಕ್ಯೂಟ್​ ಹಿಟ್​: ರೂ 459ರ ಸ್ಟಾಕ್​ ರೂ 38ಕ್ಕೆ ಕುಸಿಯಲು ಕಾರಣವೇನು? ಖರೀದಿಗೆ ಇದು ಸಕಾಲ ಎನ್ನುತ್ತಿದೆ ಬ್ರೋಕರೇಜ್​ ಸಂಸ್ಥೆ

ಗ್ರೇ ಮಾರುಕಟ್ಟೆಯಲ್ಲಿ ರೂ. 61 ರ ಷೇರಿಗೆ ರೂ. 115: ಐಪಿಒ ಆರಂಭವಾಗುವ ಮೊದಲೇ ಬೇಡಿಕೆ, ಹೂಡಿಕೆದಾರರಿಗೆ ಲಾಭ ಖಚಿತ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:6 + 4 =
Remember me
