ಮುಂಬೈ:ರಿಲಯನ್ಸ್ ಸಮೂಹದ ಮಾಲಿಕ ಮುಖೇಶ್ ಅಂಬಾನಿಯವರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಅನೇಕ ಕಂಪನಿಗಳನ್ನು ಹೊಂದಿದ್ದಾರೆ. ಈ ಪೈಕಿ ಷೇರಿನ ಬೆಲೆ 30 ರೂ.ಗಿಂತ ಕಡಿಮೆ ಇರುವ ಒಂದು ಕಂಪನಿ ಇದೆ. ಈ ಕಂಪನಿಯೇ ಹಾಥ್​​ವೇ ಕೇಬಲ್​ ಆ್ಯಂಡ್​ ಡಾಟಾಕಾಮ್​ (Hathway Cable & Datacom). ಈ ಕೇಬಲ್ ಟಿವಿ ಮತ್ತು ಫೈಬರ್ ಇಂಟರ್​ನೆಟ್ ಪೂರೈಕೆದಾರ ಕಂಪನಿಯು 2024 ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಈ ಫಲಿತಾಂಶದ ನಂತರ, ಹೂಡಿಕೆದಾರರು ಗುರುವಾರ ಈ ಷೇರುಗಳ ಮೇಲೆ ಮುಗಿಬಿದ್ದು ಖರೀದಿಸಿದ್ದಾರೆ.
ವಾರದ ನಾಲ್ಕನೇ ದಿನವಾದ ಗುರುವಾರ, ಈ ಷೇರುಗಳ ಬೆಲೆ ಇಂಟ್ರಾ ಡೇ ವಹಿವಾಟಿನಲ್ಲಿ 7% ಕ್ಕಿಂತ ಹೆಚ್ಚು ಜಿಗಿದು ರೂ 22.84 ಕ್ಕೆ ತಲುಪಿತ್ತು. ವಹಿವಾಟಿನ ಅಂತ್ಯಕ್ಕೆ ಈ ಷೇರಿನ ಬೆಲೆ 22.02 ರೂ. ಮುಟ್ಟಿತು. ಹಿಂದಿನ ದಿನಕ್ಕೆ ಹೋಲಿಸಿದರೆ ಈ ಷೇರುಗಳ 4.26% ಹೆಚ್ಚಳವಾಯಿತು. ಫೆಬ್ರವರಿ 6, 2024 ರಂದು, ಈ ಷೇರಿನ ಬೆಲೆ ರೂ 27.90 ಆಗಿತ್ತು, ಇದು 52 ವಾರಗಳ ಗರಿಷ್ಠ ಬೆಲೆಯಅಗಿದೆ.
ಮಾರ್ಚ್ ತ್ರೈಮಾಸಿಕದಲ್ಲಿ (2024 ಜನವರಿಯಿಂದ ಮಾರ್ಚ್​ವರೆಗೆ) ಈ ಕಂಪನಿಯು ರೂ. 34.57 ಕೋಟಿ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಈ ಕಂಪನಿಯು 14.62 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು.ಮಾರ್ಚ್ 31, 2024ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳ ಆದಾಯವು ವರ್ಷದಿಂದ ವರ್ಷಕ್ಕೆ 7.35% ರಷ್ಟು ಏರಿಕೆಯಾಗಿ 493.37 ಕೋಟಿ ರೂ. ತಲುಪಿದೆ.
ಈ ಕಂಪನಿಯು ಭಾರತದಲ್ಲಿ ಅತಿ ದೊಡ್ಡ ಬಹು-ಸಿಸ್ಟಮ್ ಆಪರೇಟರ್ (MSO) ಮತ್ತು ಕೇಬಲ್ ಬ್ರಾಡ್‌ಬ್ಯಾಂಡ್ ಸೇವಾ ಪೂರೈಕೆದಾರರಲ್ಲಿ ಒಂದಾಗಿದೆ.
ಮಾರ್ಚ್ ತ್ರೈಮಾಸಿಕದವರೆಗಿನ ಷೇರುದಾರರ ಮಾದರಿಯ ಬಗ್ಗೆ ಮಾತನಾಡುತ್ತಾ, ಹ್ಯಾಥ್‌ವೇ ಕೇಬಲ್ ಮತ್ತು ಡೇಟಾಕಾಮ್‌ನಲ್ಲಿ ಪ್ರವರ್ತಕರ ಪಾಲು ಶೇಕಡಾ 75 ರಷ್ಟಿದೆ. ಸಾರ್ವಜನಿಕ ಷೇರುದಾರರ ಪಾಲನ್ನು 25 ಪ್ರತಿಶತ ಇದೆ.

6 ರೂಪಾಯಿಯ ಷೇರು ಒಂದೇ ವರ್ಷದಲ್ಲಿ 139 ರೂಪಾಯಿಗೆ ಜಿಗಿತ: ಹೂಡಿಕೆದಾರರು ಶ್ರೀಮಂತ, ಫುಡ್​ ಕಂಪನಿ ಸ್ಟಾಕ್​ ಈಗ ಅಪ್ಪರ್​ ಸರ್ಕ್ಯೂಟ್​ ಹಿಟ್​
ಷೇರು ಮಾರುಕಟ್ಟೆ ಅನುಭವಿ ಹೂಡಿಕೆದಾರ ಕೇಡಿಯಾ ಬೆಟ್ಟಿಂಗ್​: ಮಹೀಂದ್ರಾ ಕಂಪನಿಯ 20.25 ಲಕ್ಷ ಷೇರು ಖರೀದಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + six =
Remember me
