ಮುಂಬೈ:ಸ್ವತಂತ್ರವಾಗಿ ವಿದ್ಯುತ್ ಉತ್ಪಾದಿಸುವ ಸಣ್ಣ ಕಂಪನಿ. ಸ್ಮಾಲ್​ ಕ್ಯಾಪ್​ ಆಗಿ ಈ ಕಂಪನಿಯ ಷೇರುಗಳನ್ನು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾಗಿದೆ. ಕೇವಲ ಮೂರು ವರ್ಷಗಳಲ್ಲಿ ಅನೇಕ ಹೂಡಿಕೆದಾರರ ಅದೃಷ್ಟವನ್ನೇ ಈ ಷೇರು ಬದಲಾಯಿಸಿದೆ.
ಈ ಸ್ಮಾಲ್ ಕ್ಯಾಪ್ ಷೇರು ಮೂರು ವರ್ಷಗಳಲ್ಲಿ ರೂ 100 ರಿಂದ ರೂ 10,000 ರೂಪಾಯಿಗೆ ಹೆಚ್ಚಳ ಕಂಡಿದೆ. ಅಲ್ಲದೆ ಈಗ ಈ ಕಂಪನಿಯು ಜನವರಿ 8 ರಂದು ಷೇರು ವಿಭಜನೆ, ಬೋನಸ್ ನೀಡುವುದನ್ನು ಪರಿಗಣಿಸುತ್ತಿದೆ.
ಫೆಬ್ರವರಿ 2021 ರಲ್ಲಿ ಕೇವಲ 98.70 ರೂಪಾಯಿ ಇದ್ದ ಈ ಕಂಪನಿಯ ಷೇರುಗಳು 2024ರ ಜನವರಿಯಲ್ಲಿ 10,299.15 ರೂಪಾಯಿಗೆ ಏರಿಕೆ ಕಂಡಿವೆ. ಇದು ಶೇಕಡಾ 10,387 ರಷ್ಟು ಬೃಹತ್ ಏರಿಕೆಯನ್ನು ಸೂಚಿಸುತ್ತದೆ. ಅಂದರೆ, 103 ಪಟ್ಟು ಹೆಚ್ಚಳ ಕಂಡಿದೆ.ಮೂರು ವರ್ಷಗಳಲ್ಲಿ ಇದರಲ್ಲಿ 10 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದರೆ, ಅದು ಈಗ 10 ಲಕ್ಷ ರೂಪಾಯಿಗೂ ಹೆಚ್ಚಿನ ಮೊತ್ತ ತಲುಪುತ್ತಿತ್ತು.
ಇದು ಅಹಮದಾಬಾದ್​ನಲ್ಲಿ ಪ್ರಧಾನ ಕಚೇರಿ ಇರುವ ಹಾ ಬಿಎಸ್​ಇಯಲ್ಲಿ ಪಟ್ಟಿ ಮಾಡಿರುವ ಸಂಸ್ಥೆ ಎಸ್​​ಜಿ ಮಾರ್ಟ್. ಇದನ್ನು ಮೊದಲು ಕಿನ್​ಟೆಕ್​ ರಿನ್ಯುವೆಬಲ್ಸ್​ (Kintech Renewables) ಎಂದು ಕರೆಯಲಾಗುತ್ತಿತ್ತು. 1985ರಲ್ಲಿ ಸಂಘಟಿತವಾದ ಕಂಪನಿಯು ನವೀಕರಿಸಬಹುದಾದ ವಿದ್ಯುತ್​ ಸೇರಿದಂತೆ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ.
ಬಿಎಸ್​ಇ ವೆಬ್‌ಸೈಟ್‌ನ ಪ್ರಕಾರ, ಸೆಪ್ಟೆಂಬರ್ 30, 2023ರವರೆಗೆ ಪ್ರವರ್ತಕರು ಈ ಕಂಪನಿಯಲ್ಲಿ 53.79 ಶೇಕಡಾ ಪಾಲನ್ನು ಹೊಂದಿದ್ದಾರೆ. ಚಿಲ್ಲರೆ ಹೂಡಿಕೆದಾರರು ಕಂಪನಿಯಲ್ಲಿ 9.74 ಶೇಕಡಾ ಪಾಲನ್ನು ಹೊಂದಿದ್ದಾರೆ. ಅಲ್ಲದೆ, ಹೆಚ್ಚಿನ ನಿವ್ವಳ ಮೌಲ್ಯದ ಹೂಡಿಕೆದಾರರು 18.70 ಶೇಕಡಾ ಪಾಲನ್ನು ಹೊಂದಿದ್ದಾರೆ. ಒಟ್ಟಾರೆಯಾಗಿ, ಸಾರ್ವಜನಿಕ ಷೇರುದಾರರು ಕಂಪನಿಯಲ್ಲಿ 46.21 ಶೇಕಡಾ ಪಾಲನ್ನು ಹೊಂದಿದ್ದರು. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ, ಎಸ್​ಜಿ ಮಾರ್ಟ್ ಮಾರ್ಚ್ 2023 ರ ಆರ್ಥಿಕ ವರ್ಷದಲ್ಲಿ 20 ಲಕ್ಷ ರೂಪಾಯಿ ಲಾಭ ಮಾಡಿದೆ.
ಜನವರಿ 8 ರಂದು ಕಂಪನಿಯು 10 ರೂಪಾಯಿಗಳ ಮುಖಬೆಲೆಯ ಈಕ್ವಿಟಿ ಷೇರುಗಳ ವಿಭಜನೆಯ ಪ್ರಸ್ತಾಪವನ್ನು ಪರಿಗಣಿಸಿ, ಅನುಮೋದಿಸಲಿದೆ. ಅಲ್ಲದೆ, ಬೋನಸ್​ ಷೇರುಗಳನ್ನು ನೀಡುವುದನ್ನು ಕೂಡ ಪರಿಗಣಿಸಲಿದೆ ಎಂದು ತಿಳಿಸಲಾಗಿದೆ.
ಎಸ್​ಜಿ ಮಾರ್ಟ್ ಕಂಪನಿಯು ಇಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ (EPC) ಟರ್ನ್‌ಕೀ ವಿಂಡ್ ಮತ್ತು ಸೌರ ವಿದ್ಯುತ್ ಪರಿಹಾರಗಳಾದ ವಿಂಡ್ ಫಾರ್ಮ್‌ಗಳು, ಸೌರ ಮೇಲ್ಛಾವಣಿ ಅಭಿವೃದ್ಧಿ, ಪವನ ಶಕ್ತಿ ಉತ್ಪಾದನೆ ಮತ್ತು ಗಾಳಿ ಟರ್ಬೈನ್ ಸ್ಥಾಪನೆ ಮತ್ತು ನಿರ್ವಹಣೆ ಸೇವೆಗಳ ವ್ಯವಹಾರದಲ್ಲಿದೆ.

ಪ್ರತಿಪಕ್ಷಗಳು ಬಹಿಷ್ಕರಿಸಿರುವ ಬಾಂಗ್ಲಾದೇಶ ಚುನಾವಣೆಯ ಮತದಾನ ಮುಕ್ತಾಯ: ಮತ ಎಣಿಕೆ ಆರಂಭ

ದೆಹಲಿ ತಲಾದಾಯ ರೂ. 4.44 ಲಕ್ಷಕ್ಕೆ ಏರಿಕೆ: ಜನರ, ಸರ್ಕಾರದ ಪರಿಶ್ರಮ ಶ್ಲಾಘಿಸಿದ ಕೇಜ್ರಿವಾಲ್​

140 ಭಾಷೆಗಳಲ್ಲಿ ಹಾಡಿ ಗಿನ್ನೆಸ್ ದಾಖಲೆ ಬರೆದ ಕೇರಳದ ಮಹಿಳೆ: ಈ ಸಂಗೀತಗಾರ್ತಿ ಯಾರು ಗೊತ್ತೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − two =
Remember me
