ತಿರುವನಂತಪುರಂ :ಕರೊನಾ ಲಸಿಕೆಯ ಕೊರತೆಯ ಬಗ್ಗೆ ರಾಜ್ಯ ಸರ್ಕಾರಗಳು ತಲೆಕೆಡಿಸಿಕೊಂಡಿದ್ದರೆ, ಲಸಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ತಾಕೀತು ಮಾಡುತ್ತಿದೆ. ಈ ನಡುವೆ ಕೇರಳ ರಾಜ್ಯದಲ್ಲಿ ಲಭ್ಯ ಲಸಿಕೆಗಳಲ್ಲಿ ನಿಗದಿತ ಡೋಸ್​​ಗಳಿಗಿಂತ ಹೆಚ್ಚು ಡೋಸ್​ಗಳನ್ನು ನೀಡಲಾಗಿದೆ !
ಕೇರಳ ಸರ್ಕಾರಕ್ಕೆ ಕೇಂದ್ರ ಸರ್ಕಾರ 73,38,806 ಡೋಸ್​ಗಳಷ್ಟು ಕರೊನಾ ಲಸಿಕೆಗಳನ್ನು ನೀಡಿತ್ತು. ಆದರೆ, ಪ್ರತಿಯೊಂದು ಲಸಿಕೆ ವಯಲ್​ಗಳಲ್ಲಿ ವೇಸ್ಟೇಜ್​ ಫ್ಯಾಕ್ಟರ್​ ಆಗಿ ಲಭ್ಯವಿರುವ ಲಸಿಕೆ ಪ್ರಮಾಣವನ್ನು ಬಿಸಾಡುವ ಬದಲು ಇನ್ನಷ್ಟು ಜನರಿಗೆ ಲಸಿಕೆ ನೀಡುವ ಕೆಲಸವನ್ನು ಕೇರಳದ ಆರೋಗ್ಯ ಕಾರ್ಯಕರ್ತರು ಮಾಡಿದ್ದಾರೆ. ಈ ಕಾರಣದಿಂದಾಗಿ ಒಟ್ಟು 74,26,164 ಡೋಸ್​ಗಳನ್ನು ಸಾಧಿಸಲಾಗಿದೆ ಎಂದು ರಾಜ್ಯದ ಸಿಎಂ ಪಿಣರಾಯಿ ವಿಜಯನ್ ಇಂದು ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ:ಖಾಸಗಿ ಸಹಭಾಗಿತ್ವದಿಂದ ಕರೊನಾ ವಿರುದ್ಧ ಪರಿಣಾಮಕಾರಿ ಸಮರ ಸಾಧ್ಯ : ಜಗದೀಶ ಶೆಟ್ಟರ್
“ನಮ್ಮ ಆರೋಗ್ಯ ಕಾರ್ಯಕರ್ತರು, ವಿಶೇಷವಾಗಿ ನರ್ಸ್​ಗಳು ಸೂಪರ್​ ಎಫಿಷಿಯೆಂಟ್​ ಆಗಿದ್ದಾರೆ. ನಮ್ಮ ಹೃದಯಪೂರ್ವಕ ಪ್ರಶಂಸೆಗೆ ಅವರು ಅರ್ಹರಾಗಿದ್ದಾರೆ” ಎಂದು ವಿಜಯನ್ ಹೇಳಿದ್ದಾರೆ. ಕೇರಳ ಸಿಎಂರ ಈ ಟ್ವೀಟ್​ಅನ್ನು ರೀಟ್ವೀಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ನಮ್ಮ ಆರೋಗ್ಯ ಕಾರ್ಯಕರ್ತರು ಲಸಿಕೆ ವೇಸ್ಟೇಜ್​ಅನ್ನು ಕಡಿಮೆ ಮಾಡುವಲ್ಲಿ ಮಾದರಿಯನ್ನು ಸೃಷ್ಟಿಸಿರುವುದು ಸಂತೋಷ. ಇಂತಹ ಕಾರ್ಯ ಕರೊನಾ ವಿರುದ್ಧದ ಹೋರಾಟವನ್ನು ಸಶಕ್ತಗೊಳಿಸಲು ಬಹುಮುಖ್ಯವಾದುದು” ಎಂದಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಇಂದು ಮೇಘಾಲಯ, ನಾಗಾಲ್ಯಾಂಡ್​, ಬಿಹಾರ, ಪಂಜಾಬ್, ದಾದ್ರ ಮತ್ತು ನಗರ್​ಹವೇಲಿ, ಹರಿಯಾಣ, ಮಣಿಪುರ, ಅಸ್ಸಾಂ, ತಮಿಳುನಾಡು, ಲಕ್ಷದ್ವೀಪಗಳು ಶೇ. 4.01 ರಿಂದ ಶೇ. 9.76 ರಷ್ಟು ಲಸಿಕೆ ವೇಸ್ಟೇಜ್ ವರದಿ ಮಾಡಿವೆ.(ಏಜೆನ್ಸೀಸ್)
ಕ್ರಿಕೆಟಿಗನನ್ನು ಅಪಹರಿಸಿದ ದುಷ್ಕರ್ಮಿಗಳು! ಥಳಿಸಿದರು, ಗನ್​ ಹಿಡಿದು ಬೆದರಿಸಿದರು
ಭಾರತಕ್ಕೆ 1 ಮಿಲಿಯನ್ ಕರೊನಾ ಲಸಿಕೆ ನೀಡಲಿದೆ ಸ್ವೀಡನ್



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
