ಸಿಕ್ಕಿಂ:ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಸರ್ಕಾರವು, ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ 12 ತಿಂಗಳ ಹೆರಿಗೆ ರಜೆ ಮತ್ತು ಮಗುವಿನ ತಂದೆಗೆ ಒಂದು ತಿಂಗಳ ಪಿತೃತ್ವ ರಜೆ ನೀಡಲಿದೆ.

ಇದನ್ನೂ ಓದಿ:ಅಣ್ಣನ ಮಗಳನ್ನು ಮದುವೆಯಾದ ಯುವಕ; ಈ ವಿವಾಹಕ್ಕೆ ಗ್ರಾಮಸ್ಥರಿಂದ ವಿರೋಧ
ಸಿಕ್ಕಿಂ ರಾಜ್ಯ ನಾಗರಿಕ ಸೇವಾ ಅಧಿಕಾರಿಗಳ ಸಂಘದ (ಎಸ್‌ಎಸ್‌ಸಿಎಸ್‌ಒಎ) ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು, ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ 12 ತಿಂಗಳು ಹೆರಿಗೆ ರಜೆ ಹಾಗೂ ಮಗುವಿನ ತಂದೆಗೆ ಒಂದು ತಿಂಗಳ ಪಿತೃತ್ವ ರಜೆ ನೀಡಲಿದ್ದೇವೆ. ಈ ಪ್ರಯೋಜನವನ್ನು ಒದಗಿಸಲು ಸೇವಾ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗುವುದು. ಈ ಪ್ರಯೋಜನವು ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಮತ್ತು ಕುಟುಂಬವನ್ನು ಉತ್ತಮವಾಗಿ ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಶಿಘ್ರವೇ ಈ ನಿಯಮ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಲವರ್ಸ್ ಕಿರಿಕ್; ಡೆತ್ ನೋಟ್​​​ನಲ್ಲಿ ಪ್ರಿಯಕರನ ಹೆಸರು ಬರೆದಿಟ್ಟು ಪ್ರಾಣ ಬಿಟ್ಟ ಯುವತಿ
ಹೆರಿಗೆ ಯೋಜನ ಕಾಯಿದೆ 1961ರ ಪ್ರಕಾರ, ಕೆಲಸ ಮಾಡುವ ಮಹಿಳೆಯು 6 ತಿಂಗಳು ಅಥವಾ 26 ವಾರಗಳ ವೇತನ ಸಹಿತ ಹೆರಿಗೆ ರಜೆಗೆ ಅರ್ಹಳಾಗಿದ್ದಾಳೆ. ಹಿಮಾಲಯನ್ ರಾಜ್ಯವು ಭಾರತದಲ್ಲಿ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ, ಸುಮಾರು 6.32 ಲಕ್ಷ ಮಂದಿ ವಾಸವಾಗಿದ್ದಾರೆ. ಹೀಗಾಗಿ ಸಿಕ್ಕಿಂ ಸರ್ಕಾರವು ಜನರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿದೆ. ಅಧಿಕಾರಿಗಳು ರಾಜ್ಯದ ಆಡಳಿತದ ಬೆನ್ನೆಲುಬು ಎಂದು ಶ್ರೀ ತಮಾಂಗ್ ಹೇಳಿದ್ದಾರೆ.

ಇದನ್ನೂ ಓದಿ:ನೀನು ಮುಸ್ಲಿಂ..ಬುರ್ಖಾ ಧರಿಸದಿದ್ದರೇ ಬಸ್ ಹತ್ತಲು ಬಿಡುವುದಿಲ್ಲವೆಂದು ವಿದ್ಯಾರ್ಥಿನಿಯನ್ನು ಕೆಳಗಿಳಿಸಿದ ಬಸ್​​ ಚಾಲಕ
ನಾಗರಿಕ ಸೇವಾ ಅಧಿಕಾರಿಗಳಿಗೆ ಬಡ್ತಿ ಪ್ರಕ್ರಿಯೆ ಚುರುಕುಗೊಳಿಸುವತ್ತ ಗಮನ ಹರಿಸಲಾಗಿದ್ದು, ಬಡ್ತಿ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಈ ಹೊಸ ಯೋಜನೆ ಕುರಿತಾಗಿ ಶೀಘ್ರದಲ್ಲೇ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.
ಫೋನ್ ಕಳ್ಳನ ಜತೆ ಮಹಿಳೆ ಲವ್; ಇವರಿಬ್ಬರ ಲವ್ ಸ್ಟೋರಿ ಸಾಮಾನ್ಯವಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 9 =
Remember me
