ರಾಂಚಿ:ಸದ್ಯದಲ್ಲೇ ಝಾರ್ಖಂಡ್​ ರಾಜ್ಯವು ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗಳ ರಕ್ಷಣೆಗೆ ಕಾನೂನು ತರುವ ಮೊದಲ ರಾಜ್ಯವಾಗಿ ಹೊರಹೊಮ್ಮಲಿದೆ. ಈ ಉದ್ದೇಶಕ್ಕಾಗಿ, ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ‘ಮೆಡಿಕಲ್ ಪ್ರೊಟೆಕ್ಷನ್​ ಬಿಲ್’​ಅನ್ನು ರಾಜ್ಯ ಸರ್ಕಾರ ಮಂಡಿಸಲಿದೆ ಎನ್ನಲಾಗಿದೆ.
ವೈದ್ಯರು, ನರ್ಸ್​ಗಳು ಮತ್ತು ಇತರ ಆರೋಗ್ಯ ಕಾರ್ಯಕರ್ತರ ಸೇವೆ ಎಷ್ಟು ಮುಖ್ಯ ಎಂಬುದು ಕರೊನಾ ಸಂದರ್ಭದಲ್ಲಿ ಜಗತ್ತಿನಾದ್ಯಂತ ಅನುಭವವಾಗಿದೆ. ಆದರೆ ಇದೇ ಸಂದರ್ಭದಲ್ಲಿ ರೋಗಿಗಳ ಸಾವಿನಿಂದ ದುಃಖಿತರಾಗಿ ವೈದ್ಯಕೀಯ ಸಿಬ್ಬಂದಿ ಮೇಲೆ ಜನರು ಹಲ್ಲೆ ಮಾಡಿದ ಪ್ರಸಂಗಗಳೂ ಭಾರತದಲ್ಲಿ ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯರ ಸಂಘವು ವೈದ್ಯಕೀಯ ಸಿಬ್ಬಂದಿ ರಕ್ಷಣೆ ಒದಗಿಸುವ ಪರಿಣಾಮಕಾರಿ ಕಾನೂನು ತರಲು ಸರ್ಕಾರವನ್ನು ಒತ್ತಾಯಿಸಿತ್ತು.
ಇದನ್ನೂ ಓದಿ:ಒಲಿಂಪಿಕ್ಸ್ ಪದಕ ವಿಜೇತನಿಗೆ ಗೌರವ, ಆರ್ಮಿ ಕ್ರೀಡಾಂಗಣಕ್ಕೆ ‘ನೀರಜ್ ಚೋಪ್ರ’ ಹೆಸರು
ಇದೀಗ ಝಾರ್ಖಂಡ್​ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. “ನಾವು ವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರ ಸುರಕ್ಷತೆಯ ಬಗ್ಗೆ ಕಾಳಜಿ ಹೊಂದಿದ್ದೇವೆ. ಕೋವಿಡ್​ 19 ಸಂದರ್ಭದಲ್ಲಿ ಅವರು ಅಗಾಧ ಸೇವೆ ಮಾಡಿದ್ದಾರೆ. ಅವರಿಗೆ ಸುಭದ್ರ ವಾತಾವರಣ ಒದಗಿಸಲು ಬದ್ಧರಾಗಿದ್ದೇವೆ” ಎಂದು ರಾಜ್ಯದ ಆರೋಗ್ಯ ಸಚಿವ ಬನ್ನಾ ಗುಪ್ತ ಹೇಳಿದ್ದಾರೆಂದು ಎಎನ್​​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.(ಏಜೆನ್ಸೀಸ್)
Good News: ಮಕ್ಕಳಿಗೂ ಬಂತು ಕರೊನಾ ಲಸಿಕೆ! ಸೂಜಿರಹಿತ ‘ಜೈಕೋವಿ-ಡಿ’ ತುರ್ತುಬಳಕೆಗೆ ಅನುಮೋದನೆ

ಕಾಬುಲ್​ನಿಂದ ಹೊರಟಿದೆ, 85 ಭಾರತೀಯರನ್ನು ಹೊತ್ತ ಐಎಎಫ್​​ ವಿಮಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 11 =
Remember me
